ಕೊರೊನಾಗೆ ಸವಾಲೊಡ್ಡಿದೆ ಜರ್ಮನಿ : ಮಹಾಮಾರಿ ವಿರುದ್ದದ ಹೋರಾಟ ಹೇಗಿತ್ತು ಗೊತ್ತಾ ?

1

ಜರ್ಮನಿ : ಕೊರೊನಾ (ಕೋವಿಡ್ -19) ಮಹಾಮಾರಿ ವಿಶ್ವವನ್ನೇ ತಲ್ಲಣಗೊಳಿಸುತ್ತಿದೆ. ಚೀನಾ, ಇರಾನ್, ಸ್ಪೇನ್ ಹಾಗೂ ಜರ್ಮನಿ ಕೊರೊನಾ ಸೋಂಕಿತರ ಪಟ್ಟಿಯಲ್ಲಿ ವಿಶ್ವದಲ್ಲಿಯೇ ಅಗ್ರಸ್ಥಾನದಲ್ಲಿ ನಿಂತಿವೆ. ಆದರೆ ಜರ್ಮನಿ ಕೊರೊನಾಗೆ ಸವಾಲೊಡ್ಡಿದ ಪರಿ ಅತ್ಯದ್ಬುತ.. 30,000ಕ್ಕೂ ಅಧಿಕ ಮಂದಿ ಕೊರೊನಾ ಸೊಂಕಿತರಿದ್ರು ಸಾವನ್ನಪ್ಪಿರೊದು ಕೇವಲ 123 ಮಂದಿಯಷ್ಟೆ. ಹಾಗಾದ್ರೆ ಜರ್ಮಿನಿ ಕೊರೊನಾ ವಿರುದ್ದ ಸವಾಲೊಡ್ಡಿದ್ದು ಹೇಗೆ ಅನ್ನೋದನ್ನು ಹೇಳ್ತಿವಿ ಕೇಳಿ.

ವಿಶ್ವದ ವಿವಿಧ ದೇಶಗಳಲ್ಲಿ ಸೋಂಕಿತರ ಸಂಖ್ಯೆ ಸರಿಸಮಾನವಾಗಿ ಒಂದೇ ಇದೆ. ಚೀನಾ, ಇಟಲಿಯಲ್ಲಿ ಅತೀ ಹೆಚ್ಚು ಸೋಂಕಿತರು ಇದ್ದಾರೆ. ಅಮೇರಿಕಾದಲ್ಲಿ 46,145, ಸ್ಪೇನ್ 35,136, ಇರಾನ್ 23,049, ಜರ್ಮನಿ 29,056 ಸೋಂಕಿತರಿದ್ದಾರೆ. ಅಮೇರಿಕಾದಲ್ಲಿ 582 ಮಂದಿ ಮರಣ ಹೊಂದಿದ್ರೆ, ಸ್ಪೇನ್ 2311 ಹಾಗೂ ಇರಾನ್ ನಲ್ಲಿ 1812 ಸಾವನ್ನಪ್ಪಿದ್ದಾರೆ.

ಆದರೆ ಜರ್ಮನಿಯಲ್ಲಿ 29,056 ಸೋಂಕಿತರಿದ್ದರೂ ಕೂಡ ಸಾವನ್ನಪ್ಪಿರುವವರ ಸಂಖ್ಯೆ ಮಾತ್ರ ಕೇವಲ 123. ಆಶ್ಚರ್ಯದ ಸಂಗತಿಯೇನೆಂದ್ರೆ ಜರ್ಮನಿಯಲ್ಲಿ ಕೊರೊನಾದಿಂದಾಗಿ ಮರಣ ಹೊಂದಿದ ಸಂಖ್ಯೆ ಅತೀ ಕಡಿಮೆ. ಇದು ವಿಶ್ವದ ಬಹುತೇಕ ರಾಷ್ಟ್ರಗಳಿಗೆ ಆಶ್ಚರ್ಯವನ್ನು ಹುಟ್ಟುಹಾಕಿದೆ. ಆದರೆ ನಿಜವಾದ ಕಾರಣವೇನೆಂಬುದು ಅಷ್ಟೇ ಕುತೂಹಲ.

ಜರ್ಮನಿ.. ವಿಶ್ವದ ಅತ್ಯಂತ ಶಿಸ್ತಿನ ದೇಶ ಅನ್ನೋ ಖ್ಯಾತಿಯನ್ನು ಗಳಿಸಿಕೊಂಡಿದೆ. ಜರ್ಮನಿ ಸರಕಾರ ಯಾವುದೇ ಆದೇಶ ಹೊರಡಿಸಿದ್ರೂ, ದೇಶದ ಜನರು ಅದನ್ನು ತಪ್ಪದೇ ಪಾಲನೆ ಮಾಡ್ತಾರೆ. ಸರಕಾರ ಆದೇಶವನ್ನು ಹಿಂಪಡೆಯೋವರೆಗೂ ಜರ್ಮನಿಯ ಜನ ತಾಳ್ಮೆವಹಿಸುತ್ತಾರೆ. ತುರ್ತು ಸಂದರ್ಭಗಳಲ್ಲಿ ಜನರಿಗೆ ನೆರವಾಗೋ ದೃಷ್ಠಿಯಿಂದಲೇ ಜರ್ಮನಿ ಸರಕಾರ ಪ್ರತೀ ಮನೆಯಲ್ಲಿಯೂ ಹಳದಿ ಮತ್ತು ಕೆಂಪು ದೀಪದ ವ್ಯವಸ್ಥೆಯನ್ನು ಮಾಡಿದೆ.

ಸರಕಾರ ನಿಷೇಧಾಜ್ಞೆ ಹೇರಿದ ಸಂರ್ಭದಲ್ಲಿ ಸಮಸ್ಯೆಯಾದ್ರೆ ಹಳದಿ ಬಣ್ಣದ ಲೈಟ್ ಹಾಕಬೇಕು. ತುರ್ತು ಸಂದರ್ಭದಲ್ಲಿ ಮಾತ್ರವೇ ಕೆಂಪು ದ್ವೀಪ ಬೆಳಗಿಸಬೇಕು. ಹೀಗೆ ಮಾಡಿದ್ರೆ ಅಲ್ಲಿನ ಸರಕಾರ ಜನರ ನೆರವಿಗೆ ಧಾವಿಸುತ್ತೆ. ಆದ್ರೆ ಜರ್ಮನಿಯರು ಅತೀ ತುರ್ತು ಸಂದರ್ಭದಲ್ಲಿ ಮಾತ್ರವೇ ಸರಕಾರವನ್ನು ನೆರವಿಗೆ ಕೋರುತ್ತಾರೆ. ಅಷ್ಟರ ಮಟ್ಟಿಗೆ ಜರ್ಮಿನಿಯ ನಿವಾಸಿಗಳು ಸರಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡ್ತಾರೆ. ಕೊರೊನಾ ವಿಚಾರದಲ್ಲಿಯೂ ಕೂಡ ಜರ್ಮನಿ ಸರಕಾರದ ಪರವಾಗಿ ನಿಂತಿದೆ.

ಶತ ಶತಮಾನಗಳಿಂದಲೂ ಸರಕಾರದ ಆಜ್ಞೆ ಪಾಲಿಸುವುದರಲ್ಲಿ ಜರ್ಮನರು ಎತ್ತಿದ ಕೈ. ಸರಕಾರ ಏನು ಹೇಳುತ್ತದೋ ಅದು ಜರ್ಮನ್ ಪ್ರಜೆಗಳಿಗೆ ವೇದವಾಕ್ಯ. ಸರಕಾರ ಮನೆಯಿಂದ ಹೊರಗಡೆ ಬರಬೇಡಿ ಅಂದ್ರೆ ಅವರು ತಪ್ಪಿಯೂ ಹೊರಗೆ ಬರೋದೆ ಇಲ್ಲಾ. ಸರಕಾರಕ್ಕೆ ಇಷ್ಟು ಮಾನ್ಯತೆ ಕೊಡುವ ವಿಶ್ವದಲ್ಲಿರೋ ದೇಶ ಜರ್ಮನಿ ಮಾತ್ರ ಎನ್ನುತ್ತಾರೆ ಬಹುತೇಕ ಅನಿವಾಸಿ ಭಾರತೀಯರು. ಇದೀಗ ಕೊರೊನಾ ವಿಚಾರದಲ್ಲಿಯೂ ಜರ್ಮನಿ ಲಾಕ್ ಡೌನ್ ಆದೇಶ ಹೊರಡಿಸಿದೆ.

ಮನೆಯಿಂದ ಹೊರಗಡೆ ಬರಬೇಡಿ ಅಂತ ಆದೇಶ ಹೊರಡಿಸಿದೆ. ಸರಕಾರದ ಆದೇಶವನ್ನು ಜನರು ಚಾಚೂ ತಪ್ಪದೆ ಪಾಲಿಸುತ್ತಿದ್ದಾರೆ. ಕೊನೆಗೆ ಹೊರಗೆ ಬರಬೇಕಾದ್ರೂ ಅಲ್ಲಿಯ ಆರೋಗ್ಯ ಮಂತ್ರಿಯ ಅನುಮತಿ ಕಡ್ಡಾಯ. ಉಸಿರಾಟ ನಿಲ್ಲುವರೆಗೂ ಜರ್ಮನಿಯ ಜನ ಮನೆಯಿಂದ ಹೊರಗೆ ಬರೋದಿಲ್ಲಾ, ಇನ್ಮು ನಮ್ಮ ಕೈಯಲ್ಲಿ ಬದುಕೋದಕ್ಕೆ ಸಾಧ್ಯವಿಲ್ಲಾ ಅನ್ನಿಸಿದಾಗ ಮಾತ್ರವೇ ಸರಕಾರದ ನೆರವು ಕೋರುತ್ತಿದ್ದಾರೆ. ಈ ಕಾರಣದಿಂದ STAY HOMEನ್ನು ಜರ್ಮನರು ವಿಶ್ವದ ಯಾವ ದೇಶವೂ ಪಾಲಿಸದ ರೀತಿಯಲ್ಲಿ ಪಾಲಿಸಿದ್ದಾರೆ.

ಆರಂಭದಲ್ಲಿ ಅತೀ ಹೆಚ್ಚು ಸೋಂಕಿತರನ್ನು ಹೊಂದಿದ್ದರೂ ಕೂಡ ಕೊರೊನಾ ನಿಯಂತ್ರಿಸುವಲ್ಲಿ ಸರಕಾರದ ಆಜ್ಞೆ ಜರ್ಮನಿಯರು ಪಾಲಿಸಿದಷ್ಟು ವಿಶ್ವದ ಯಾವ ರಾಷ್ಟ್ರದವರು ಪಾಲಿಸಿಲ್ಲ. ಹೀಗಾಗಿಯೇ ಜರ್ಮನಿ ಕೊರೊನಾ ವಿರುದ್ದ ಸಾರಿದ್ದ ಸಮರದಲ್ಲಿ ಬಹುತೇಕ ಯಶಸ್ವಿಯಾಗಿದೆ. ಎರಡನೇ ಮಹಾಯುದ್ದದ ಮುಂಚೂಣಿಯಲ್ಲಿ ನಿಂತಿದ್ದ ಜರ್ಮನಿ ಕೊರೊನಾ ವಿರುದ್ದದ ಹೋರಾಟದಲ್ಲಿಯೂ ಜಯ ಸಾಧಿಸುತ್ತಿದೆ.

ಇಂತಹ ಜರ್ಮನಿಯ ಜನರಂತೆ ಭಾರತೀಯರು ಸರಕಾರದ ಆದೇಶವನ್ನು ಕಟ್ಟುನಿಟ್ಟಿನಲ್ಲಿ ಪಾಲನೆ ಮಾಡಲೇ ಬೇಕಾದ ಅನಿವಾರ್ಯತೆಯಿದೆ. ಸರಕಾರದ ಆಜ್ಞೆಯನ್ನು ಧಿಕ್ಕರಿಸಿದ್ರೆ ಕೊರೊನಾ ನಮ್ಮ ಮನೆಯ ಕದತಟ್ಟೋದು ಗ್ಯಾರಂಟಿ. ಇನ್ನಾದ್ರೂ ನಮಗೆ ನಾವು ನಿರ್ಬಂಧ ಹೇರಿಕೊಳ್ಳಬೇಕಿದೆ. ಜರ್ಮನ್ ಪ್ರಜೆಗಳು ನಮಗೆ ಪಾಠವಾಗಲೇ ಬೇಕು.

1 Comment
  1. K..SHRIDHARA says

    ಮೋದಿಜೀ ದಯವಿಟ್ಟು ಗಂಭೀರ ಕಾನೂನು ತನ್ನಿ
    .ನಮ್ಮ ಜನ ಅಷ್ಟು ‌‌‌ಸುಲಭವಾಗಿ ಪಾಲಿಸಲ್ಲ

Leave A Reply

Your email address will not be published.