Gujarat Bridge Collapse: ಗುಜರಾತ್ ತೂಗು ಸೇತುವೆ ಕುಸಿತ ಪ್ರಕರಣ.. ಸಾವಿನ ಸಂಖ್ಯೆ 132ಕ್ಕೆ ಏರಿಕೆ

ಮೊರ್ಬಿ : Gujarat Bridge Collapse ಗುಜರಾತ್ ನ ಮೊರ್ಬಿಯಲ್ಲಿ ಸಂಭವಿಸಿದ ತೂಗು ಸೇತುವೆ ಕುಸಿತ ಪ್ರಕರಣದಲ್ಲಿ ಸಾವಿನ ಸಂಖ್ಯೆ 132ಕ್ಕೆ ಏರಿದೆ. ಭಾನುವಾರ ಸಂಜೆ 6.45ರ ಸುಮಾರಿಗೆ ಮೊರ್ಬಿಯಲ್ಲಿ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಿದ ಬ್ರಿಟಿಷ್ ಕಾಲದ ಸೇತುವೆ ಕುಸಿದು ಈ ಘನಘೋರ ದುರಂತ ಸಂಭವಿಸಿತ್ತು.

150 ಕ್ಕೂ ಹೆಚ್ಚು ವರ್ಷಗಳ ಹಳೇಯದಾದ ಈ ತೂಗು ಸೇತುವೆಯನ್ನ ಇತ್ತೀಚೆಗಷ್ಟೆ ನವೀಕರಣ ಮಾಡಲಾಗಿತ್ತು. ನವೀಕರಣಕ್ಕೂ ಮುನ್ನ  ಈ ಸೇತುವೆಯಲ್ಲಿ ಸಂಚಾರ ಬಂದ್ ಮಾಡಲಾಗಿತ್ತು. ಈ ತೂಗು ಸೇತುವೆಯನ್ನ ವಾರದ ಹಿಂದಷ್ಟೆ ಅಂದ್ರೆ ನವೀಕರಣದ ಬಳಿಕ ಮತ್ತೆ ಉದ್ಘಾಟಿಸಲಾಗಿತ್ತು. ಉತ್ತರ ಭಾರತದಲ್ಲಿ ದೀಪಾವಳಿ ಬಳಿಕ ನಡೆಯೋ ಛತ್ ಪೂಜಾ ಹಿನ್ನೆಲೆಯಲ್ಲಿ ಭಾನುವಾರ ನೂರಾರು ಪ್ರವಾಸಿಗರು ಈ ಸೇತುವೆ ನೋಡಲು ಬಂದಿದ್ರು. ಸುಮಾರು 500ಕ್ಕೂ ಹೆಚ್ಚು ಜನ ಸೇತುವೆ ಮೇಲೆ ಜಮಾಯಿಸಿದ್ರು. ಹೆಚ್ಚು ಜನ ಸಂದಣಿ ಸೇರಿದ್ರಿಂದ ಭಾರ ತಡೆಯಲಾಗದೇ ಭಾನುವಾರ ಸಂಜೆ ಈ ತೂಗು ಸೇತುವೆ ಕುಸಿದಿತ್ತು.

ಸೇತುವೆ ಕುಸಿದಾಗ ನೂರಾರು ಮಂದಿ ಮಚ್ಚು ನದಿಗೆ ಬಿದ್ದಿದ್ರು. ಇನ್ನೂ ಅನೇಕರು ನಾಪತ್ತೆಯಾಗಿದ್ರು. ರಾತ್ರಿಯಾಗಿದ್ದರಿಂದ ರಕ್ಷಣಾ ಕಾರ್ಯಾಚರಣೆಗೆ ತೀವ್ರ ಸಮಸ್ಯೆ ಆಗಿತ್ತು. ಇದೀಗ ರಾತ್ರಿ ಇಡೀ ಕಾರ್ಯಾಚರಣೆ ನಡೆಸಲಾಗಿದ್ದು. ಈ ದುರ್ಘಟನೆಯಲ್ಲಿ 132 ಮಂದಿ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. ಇನ್ನೂ ಅನೇಕ ಜನರು ಗಾಯಗೊಂಡಿದ್ದು ಅವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಗ್ನಿಶಾಮಕ ಸಿಬ್ಬಂದಿ, ಎನ್ ಡಿಆರ್ ಎಫ್ ಸಿಬ್ಬಂದಿ ಜೊತೆಗೆ ಭಾರತೀಯ ಸೇನೆಯ ಯೋಧರು ಸಹ ರಕ್ಷಣಾ ಕಾರ್ಯಾಚರಣೆಗೆ ಧಾವಿಸಿದ್ದು, ಸೋಮವಾರ ಬೆಳಗ್ಗೆಯೂ ರಕ್ಷಣಾ ಕಾರ್ಯಾಚರಣೆ ಮುಂದುವರಿದ್ದು, ನಾಪತ್ತೆಯಾದವರಿಗಾಗಿ ಶೋಧ ನಡೆಸಲಾಗುತ್ತಿದೆ.

ಪ್ರತ್ಯಕ್ಷದರ್ಶಿ ಹೇಳಿದ್ದೇನು : ಇನ್ನು ಈ ಘಟನೆ ಅದೆಷ್ಟು ಘೋರವಾಗಿತ್ತು ಅನ್ನೋದನ್ನ ತೂಗು ಸೇತುವೆ ಬಳಿ ಚಹಾ ಮಾರುವ ವ್ಯಕ್ತಿಯೊಬ್ಬ ವಿವರಿಸಿದ್ದಾನೆ. ತೂಗು ಸೇತುವೆ ಕುಸಿದ ಬಳಿಕ ಜನರು ಜೀವ ಉಳಿಸಿಕೊಳ್ಳಲು ಕಿರುಚಾಡುತ್ತಿದ್ರು. ಅವರಿಗೆ ಸಹಾಯ ಮಾಡೋಕೆ ನನ್ನ ಕೈಯಿಂದ ಆಗಲಿಲ್ಲ. ಏಳೆಂಟು ತಿಂಗಳ ತುಂಬು ಗರ್ಭಿಣಿಯೊಬ್ಬರು ನನ್ನ ಕಣ್ಣೆದುರೆಲ್ಲೆ ಜೀವ ಬಿಟ್ರು ಅಂತಾ ಟೀ ಮಾರುವವ ಘಟನೆಯ ಘೋರತೆಯನ್ನ ಬಿಚ್ಚಿಟ್ಟಿದ್ದಾನೆ. ಇದನ್ನೂ ಓದಿ : Heritage Over bridge collapses : ಗುಜರಾತ್‌ನಲ್ಲಿ ಮೇಲ್ಸೇತುವೆ ಕುಸಿತ: ನದಿಗೆ ಬಿದ್ದ 500 ಮಂದಿ, 30 ಸಾವು

ಮೃತರ ಕುಟುಂಬಕ್ಕೆ ಪರಿಹಾರ : ತೂಗು ಸೇತುವೆ ಕುಸಿತ ಪ್ರಕರಣದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಅಲ್ದೆ ಗುಜರಾತ್ ಸರ್ಕಾರವೂ ಮೃತರ ಕುಟುಂಬಕ್ಕೆ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಪ್ರವಾಸದಲ್ಲಿದ್ದು ಇಂದು ಬೆಳಗ್ಗೆ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಜಯಂತಿ ಹಿನ್ನೆಲೆಯಲ್ಲಿ ಕೇವಾಡಿಯದಲ್ಲಿರೋ ಪಟೇಲ್ ಅವರ ಬೃಹತ್ ಪ್ರತಿಮೆಗೆ ಗೌರವ ಸಲ್ಲಿಸಿದ್ದಾರೆ.

ಇದನ್ನೂ ಓದಿ : Kannada Rajyotsava 2022: ಚೆಲುವ ಕನ್ನಡ ನಾಡನ್ನು ಬಣ್ಣಸಿದ್ದ ಹುಯಿಲಗೋಳ ನಾರಾಯಣರಾವ್ ಅವರ ಬದುಕೇ ಒಂದು ರೋಚಕ..!

ಇದನ್ನೂ ಓದಿ : India Vs South Africa Live : ಕೈಯಲ್ಲಿದ್ದ ಮ್ಯಾಚ್ ಕೈ ಚೆಲ್ಲಿದ ಭಾರತ, ಟೀಮ್ ಇಂಡಿಯಾಗೆ ಮೊದಲ ಸೋಲು

Gujarat Bridge Collapse 132 Killed 177 Rescued operation continued

Comments are closed.