Har Ghar Tiranga : ಹರ್‌ ಘರ್‌ ತಿರಂಗಾ ಅಭಿಯಾನದಲ್ಲಿ ಫ್ಲಾಗ್‌ ಪಿನ್‌ ಮಾಡಿ, ಪ್ರಮಾಣಪತ್ರ ಪಡೆಯಲು ಹೀಗೆ ಮಾಡಿ…

ಈ ವರ್ಷದ ಸ್ವಾತಂತ್ರ್ಯೋತ್ಸವ (Independence) ಬಹಳ ವಿಶೇಷವಾದದ್ದು. ಭಾರತ ಬ್ರಿಟೀಷ್‌ ಆಳ್ವಿಕೆಯಿಂದ ಮುಕ್ತವಾಗಿ 75 ವರ್ಷಗಳಾಗುತ್ತದೆ. ಅಂದರೆ ಇದು ಸ್ವತಂತ್ರ ಭಾರತದ 75 ನೇ ಸ್ವಾತಂತ್ರ್ಯ ದಿನಾಚರಣೆ. ಆಜಾದಿ ಕಾ ಅಮೃತ್‌ ಮಹೋತ್ಸವದ ಸಂದರ್ಭದಲ್ಲಿ ‘ಹರ್‌ ಘರ್‌ ತಿರಂಗಾ (Har Ghar Tiranga) ’ ಅಭಿಯಾನ ಪ್ರಾರಂಭವಾಗಿದೆ. ಅಮೃತ ಮಹೋತ್ಸವದ ಸ್ಮರಣಾರ್ಥ ರಾಷ್ಟ್ರಧ್ವಜವನ್ನು ತಮ್ಮ ಮನೆಗೆ ತರಲು ಮತ್ತು ಅದನ್ನು ಹಾರಿಸಲು ನಾಗರಿಕರನ್ನು ಪ್ರೋತ್ಸಾಹಿಸಲಾಗುತ್ತಿದೆ.

ಸ್ವಾತಂತ್ರ್ಯದ 75 ನೇ ವರ್ಷದಲ್ಲಿ ಹಮ್ಮಿಕೊಳ್ಳಲಾದ ‘ಹರ್‌ ಘರ್‌ ತಿರಂಗಾ’ ರಾಷ್ಟ್ರ ನಿರ್ಮಾಣದಲ್ಲಿ ನಮ್ಮ ಬದ್ಧತೆಯ ಸಂಕೇತವಾಗಿದೆ. ಜನರ ಹೃದಯದಲ್ಲಿ ದೇಶಭಕ್ತಿಯನ್ನು ಹುಟ್ಟಿಹಾಕುವದು ಮತ್ತು ರಾಷ್ಟ್ರಧ್ವಜದ ಬಗ್ಗೆ ಜಾಗೃತಿ ಮೂಡಿಸುವುದು ಇದರ ಗುರಿಯಾಗಿದೆ. ನಮ್ಮ ಸೋಷಿಯಲ್‌ ಮೀಡಿಯಾ ಖಾತೆ ಡಿಪಿಗಳನ್ನು ತ್ರಿವರ್ಣ ಧ್ವಜಕ್ಕೆ ಬದಲಾಯಿಸಲು ಪ್ರಧಾನಿ ಮೋದಿ ಕರೆ ಕೊಟ್ಟಿದ್ದಾರೆ.

ಹರ್‌ ಘರ್‌ ತಿರಂಗಾ ಅಭಿಯಾನದಲ್ಲಿ ಫ್ಲಾಗ್‌ ಪಿನ್‌ ಮಾಡಿ, ನೀವು ಪ್ರಮಾಣಪತ್ರವನ್ನು ಪಡೆಯಬಹುದಾಗಿದೆ. ಹಾಗಾದ್ರೆ ನಿಮ್ಮ ಫೋಟೋವನ್ನು ವೆಬ್‌ಸೈಟ್‌ನಲ್ಲಿ ತೋರಿಸಲು harghartiranga.com ಗೆ ಅಪ್‌ಲೋಡ್ ಮಾಡಬಹುದು.

ಫ್ಲಾಗ್‌ ಅನ್ನು ಪಿನ್‌ ಮಾಡಲು ಮತ್ತು ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಲು ಹೀಗೆ ಮಾಡಿ:

 • ಮೊದಲಿಗೆ https://harghartiranga.com ಲಿಂಕ್ ತೆರೆಯಿರಿ.
 • ಅಲ್ಲಿ ಎರಡು ಪ್ರಮುಖ ಆಯ್ಕೆಗಳಿರುತ್ತವೆ: “ಪಿನ್ ಎ ಫ್ಲ್ಯಾಗ್” ಮತ್ತು “ಫ್ಲಾಗ್ ಜೊತೆಗೆ ಸೆಲ್ಫಿ ಅಪ್‌ಲೋಡ್ ಮಾಡಿ.”
 • ಫ್ಲಾಗ್‌ ಪಿನ್‌ ಮಾಡಲು “ಪಿನ್ ಎ ಫ್ಲ್ಯಾಗ್” ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
 • ನಿಮ್ಮ ಹೆಸರು ಮತ್ತು ಮೊಬೈಲ್ ಸಂಖ್ಯೆಯ ವಿವರಗಳನ್ನು ತುಂಬಲು ಒಂದು ಪುಟ ತೆರೆಯುತ್ತದೆ.
 • ನೀವು ಸ್ಥಳ ಪ್ರವೇಶವನ್ನು ಕೇಳುವ ಪಾಪ್-ಅಪ್‌ನಲ್ಲಿ “ಹೌದು” ಅನ್ನು ಸಹ ಕ್ಲಿಕ್ ಮಾಡಬೇಕು.
 • ನಿಮ್ಮ Gmail ಖಾತೆಯ ಮೂಲಕ ಲಾಗಿನ್ ಆಗುವ ಆಯ್ಕೆಯೂ ಇರುತ್ತದೆ.
 • ನಿಮ್ಮ ಹೆಸರು ಮತ್ತು ಫೋನ್ ಸಂಖ್ಯೆಯನ್ನು ನಮೂದಿಸಿದ ನಂತರ, ಮುಂದೆ ಕ್ಲಿಕ್ ಮಾಡಿ.
 • ನಕ್ಷೆಯಿಂದ ನಿಮ್ಮ ಪ್ರಸ್ತುತ ಸ್ಥಳವನ್ನು ಆಯ್ಕೆಮಾಡಿ.
 • ಆಯ್ಕೆ ಮಾಡಿದ ನಂತರ “ಪಿನ್ ಎ ಫ್ಲ್ಯಾಗ್” ಅನ್ನು ಕ್ಲಿಕ್ ಮಾಡಿ.
 • ನಿಮ್ಮ ಧ್ವಜವನ್ನು ಪಿನ್ ಮಾಡಲಾಗಿದೆ ಎಂಬ ಅಭಿನಂದನಾ ಸಂದೇಶವನ್ನು ನೀವು ಪಡೆಯುತ್ತೀರಿ.
 • ಸಂದೇಶದ ಕೆಳಗೆ, ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡುವ ಆಯ್ಕೆ ಇರುತ್ತದೆ.
 • ಡೌನ್‌ಲೋಡ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನೀವು ಫೇಸ್‌ಬುಕ್, ಲಿಂಕ್ಡ್‌ಇನ್, ಟ್ವಿಟರ್ ಮತ್ತು ವಾಟ್ಸಾಪ್‌ನಂತಹ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಬಹುದು ಮತ್ತು ಅದನ್ನು ಹಂಚಿಕೊಳ್ಳಬಹುದು.

ಇದನ್ನೂ ಓದಿ : Post Independence Development : ಸ್ವಾತಂತ್ರ್ಯಾ ನಂತರ ಭಾರತದ ಆರ್ಥಿಕತೆಯ ಅಭಿವೃದ್ಧಿ ನಡೆದುಬಂದ ಹಾದಿ

ಇದನ್ನೂ ಓದಿ : Pingali Venkayya : ತ್ರಿವರ್ಣ ಧ್ವಜದ ವಿನ್ಯಾಸಗಾರ ಪಿಂಗಲಿ ವೆಂಕಯ್ಯ ಯಾರು ಗೊತ್ತಾ?

(Har Ghar Tiranga Campaign. Pin A Flag And Download The Certificate)

Comments are closed.