deep sea fishing : ಮೀನುಗಾರರಿಗೆ ಮತ್ತೆ ಆಘಾತ : ಆಳ ಸಮುದ್ರ ಮೀನುಗಾರಿಕೆಗೆ ಆಗಸ್ಟ್​ 11ರವರೆಗೆ ನಿರ್ಬಂಧ

ಮಂಗಳೂರು : deep sea fishing : ರಾಜ್ಯದಲ್ಲಿ ಈ ಬಾರಿ ಅಗತ್ಯಕ್ಕೂ ಮೀರಿ ಹೆಚ್ಚಿನ ಮಳೆಯಾಗುತ್ತಿದೆ. ಮಳೆಗಾಲ ಆರಂಭಗೊಂಡು ಒಂದೇ ತಿಂಗಳಿಗೆ ರಾಜ್ಯದಲ್ಲಿ ಸಾಕಷ್ಟು ಸಾರ್ವಜನಿಕ ಆಸ್ತಿಪಾಸ್ತಿಗಳು ಧ್ವಂಸಗೊಂಡಿವೆ.ಅದರಲ್ಲೂ ವಿಶೇಷವಾಗಿ ಕರಾವಳಿ ಜಿಲ್ಲೆಗಳಾದ ಉಡುಪಿ ಹಾಗೂ ದಕ್ಷಿಣ ಕನ್ನಡದಲ್ಲಿ ಮಳೆಯ ಹಾವಳಿ ಮಿತಿ ಮೀರಿದೆ. ಕೆಲವು ದಿನಗಳ ಹಿಂದೆಯಷ್ಟೇ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬಹುತೇಕ ಗ್ರಾಮಗಳು ಭಾರೀ ಮಳೆಯಿಂದಾಗಿ ಸಂಪೂರ್ಣ ಮುಳುಗಿಹೋಗಿದ್ದವು. ವಿವಿಧ ಕಡೆಗಳಲ್ಲಿ ಸೇತುವೆಗಳು ತುಂಡಾಗಿ ಗ್ರಾಮ ಗ್ರಾಮಗಳ ನಡುವಿನ ಸಂಪರ್ಕವೇ ಕಡಿದು ಹೋಗಿತ್ತು.


ಉಡುಪಿ ಜಿಲ್ಲೆಯ ಕತೆ ಕೂಡ ಇದಕ್ಕೆ ಹೊರತಾಗಿಲ್ಲ. ಕಳೆದ ವಾರ ಬೈಂದೂರು ಹಾಗೂ ಶಿರೂರು ಭಾಗದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿದೆ. ರಸ್ತೆಗಳು ಕೊಚ್ಚಿ ಹೋಗಿದ್ದು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಮಳೆ ಹೆಚ್ಚಾಯ್ತು ಅಂದರೆ ಕಡಲ ಮಕ್ಕಳ ದುಡಿಮೆಗೆ ಬರೆ ಬಿತ್ತು ಅಂತಾನೇ ಅರ್ಥ. ಆಗಸ್ಟ್​ 1ರಿಂದ ಮೀನುಗಾರಿಕಾ ಋತು ಆರಂಭಗೊಂಡಿದೆ. ಆದರೆ ಅತಿಯಾದ ಮಳೆಯಿಂದಾಗಿ ಕಡಲ ಮಕ್ಕಳಿಗೆ ಮೀನುಗಾರಿಕೆಗೆ ತೆರಳಲು ಅವಕಾಶವಿಲ್ಲದಂತಾಗಿದೆ .


ಆಗಸ್ಟ್​ 1ರಿಂದ ಮೀನುಗಾರಿಕಾ ಋತು ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಆಳ ಸಮುದ್ರ ಮೀನುಗಾರರಿಗೆ ಇದು ಸುಗ್ಗಿಯ ಕಾಲ ಎಂದೇ ಹೇಳಬಹುದು. ಆದರೆ ಭಾರೀ ಮಳೆ ಹಿನ್ನೆಲೆಯಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ಆಗಸ್ಟ್​ 11ರವರೆಗೆ ಮೀನುಗಾರಿಕಾ ಇಲಾಖೆ ನಿಷೇಧ ಹೇರಿದೆ. ಕಡಲು ಪ್ರಕ್ಷುಬ್ಧವಾಗಿರುವ ಹಿನ್ನೆಲೆಯಲ್ಲಿ ಮೀನುಗಾರಿಕೆಗೆ ನಿಷೇಧ ಹೇರಲಾಗಿದೆ.


ಮೀನುಗಾರಿಕೆಯ ಋತು ಆರಂಭಗೊಂಡಿದ್ದರೂ ಸಹ ಮಂಗಳೂರಿನ ಬಂದರಿನಲ್ಲಿಯೇ ನೂರಾರು ದೋಣಿಗಳು ಲಂಗರು ಹಾಕಿವೆ. ಆಗಸ್ಟ್​ ಐದರಿಂದ ಆಳ ಸಮುದ್ರದ ಮೀನುಗಾರಿಕೆಗೆ ತೆರಳಬೇಕು ಎಂದು ಮೀನುಗಾರರು ಸಿದ್ಧತೆ ನಡೆಸಿದ್ದರು. ಆದರೆ ಪಶ್ಚಿಮ ಘಟ್ಟಗಳಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಡಲ ಅಬ್ಬರ ಕೂಡ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಸಮುದ್ರದಲ್ಲಿ ಗಾಳಿಯ ವೇಗ ಹಾಗೂ ಅಲೆಗಳ ಅಬ್ಬರ ಅತಿಯಾಗಿ ಇರುತ್ತದೆ. ಹೀಗಾಗಿ ಹವಾಮಾನ ಇಲಾಖೆ ಕೂಡ ಯಾರಿಗೂ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದೆ .

ಇದನ್ನು ಓದಿ : orange alert : ವರುಣನ ಅಬ್ಬರ : ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಇನ್ನೂ 2 ದಿನ ಆರೆಂಜ್​ ಅಲರ್ಟ್​

ಇದನ್ನೂ ಓದಿ : Siddramautsav program : ಸಿದ್ದರಾಮೋತ್ಸವದಿಂದ ನಡುಕ ಶುರುವಾಗಿದ್ದು ಬಿಜೆಪಿಗಲ್ಲ, ಕಾಂಗ್ರೆಸ್ಸಿಗರಿಗೆ : ಡಾ.ಸಿ.ಎನ್​ ಅಶ್ವತ್ಥ ನಾರಾಯಣ

Ban on deep sea fishing till August 11

Comments are closed.