Rishabh Pant out IPL 2023 : ಆಸ್ಟ್ರೇಲಿಯಾ ಸರಣಿಗೂ ಇಲ್ಲ, ಐಪಿಎಲ್‌ಗೂ ಇಲ್ಲ; ರಿಷಭ್ ಪಂತ್ ಕಂಬ್ಯಾಕ್ ಸದ್ಯಕ್ಕಿಲ್ಲ

ಬೆಂಗಳೂರು: Rishabh Pant out IPL 2023 ಡೆಡ್ಲಿ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ರಿಷಭ್ ಪಂತ್ ಡೆಹ್ರಾಡೂನ್’ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದಲ್ಲಿ ರಿಷಭ್ ಪಂತ್ ಅವರ ಮೊಣಕಾಲು, ಬೆನ್ನು ಮೂಳೆಗೆ ಹಾನಿಯಾಗಿದೆ. ತಲೆ ಮತ್ತು ಬೆನ್ನಿನ ಭಾಗದಲ್ಲಿ ಗಾಯಗಳಾಗಿವೆ. ಮೆದುಳು ಮತ್ತು ಬೆನ್ನು ಹುರಿಗೆ (brain and spinal cord) ಯಾವುದೇ ಹಾನಿಯಾಗದೇ ಇರುವುದು MRI ಸ್ಕ್ಯಾನ್’ನಲ್ಲಿ ಕಂಡು ಬಂದಿದೆ. ಮೊಣಕಾಲು ಮತ್ತು ಪಾದಗಳಿಗೆ ಗಾಯವಾಗಿರುವ ಕಾರಣ ರಿಷಬ್ ಪಂತ್ ಅವರ ಕ್ರಿಕೆಟ್ ಕಂಬ್ಯಾಕ್ ಸದ್ಯಕ್ಕಂತೂ ಇಲ್ಲವೇ ಇಲ್ಲ. ಹೀಗಾಗಿ ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಹಾಗೂ ಐಪಿಎಲ್’ನಿಂದ ರಿಷಬ್ ಪಂತ್ ಹೊರಗುಳಿಯಲಿದ್ದಾರೆ

ಆಸ್ಟ್ರೇಲಿಯಾ ತಂಡ ಫೆಬ್ರವರಿ ತಿಂಗಳಲ್ಲಿ ಭಾರತಕ್ಕೆ ಬರಲಿದ್ದು, ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಹಾಗೂ 3 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ. ಟೆಸ್ಟ್ ಸರಣಿಯ ಮೊದಲ ಪಂದ್ಯ ಫೆಬ್ರವರಿ 13ರಂದು ನಾಗ್ಪುರದಲ್ಲಿ ಆರಂಭವಾಗಲಿದೆ. ಆಸೀಸ್ ವಿರುದ್ಧದ ಟೆಸ್ಟ್ ಸರಣಿ ಆರಂಭವಾಗುವ ಹೊತ್ತಿಗೆ ರಿಷಭ್ ಪಂತ್ ಚೇತರಿಸಿಕೊಳ್ಳಲು ಸಾಧ್ಯವೇ ಇಲ್ಲ. ಇನ್ನು ಐಪಿಎಲ್ 2023 ಟೂರ್ನಿ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿದ್ದು, ಐಪಿಎಲ್ ಹೊತ್ತಿಗೂ ರಿಷಬ್ ಪಂತ್ ಚೇತರಿಸಿಕೊಳ್ಳುವುದು ಅನುಮಾನ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಾಯಕ ರಿಷಬ್ ಪಂತ್ ಅವರ ಸೇವೆಯಿಂದ ವಂಚಿತವಾಗಲಿದೆ. ಇದನ್ನೂ ಓದಿ : Rishabh Pant Rohit Sharma : ರಿಷಭ್ ಚೇತರಿಕೆಗೆ ಪಾಕ್ ಕ್ರಿಕೆಟಿಗರ ಹಾರೈಕೆ, ಇತ್ತ ಒಂದೇ ಒಂದು ಶಬ್ದ ಮಾತಾಡದ ರೋಹಿತ್; ಮಾನವೀಯತೆ ಮರೆತರಾ ಹಿಟ್‌ಮ್ಯಾನ್?

ಟೆಸ್ಟ್ ಕ್ರಿಕೆಟ್’ನಲ್ಲಿ ಟೀಮ್ ಇಂಡಿಯಾದ ಅತೀ ದೊಡ್ಡ ಮ್ಯಾಚ್ ವಿನ್ನರ್ ಆಗಿರುವ ರಿಷಭ್ ಪಂತ್ ಅವರ ಅನುಪಸ್ಥಿತಿ ಭಾರತಕ್ಕೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಲಿದೆ. ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ತಂಡ ಕಾಂಗರೂ ನಾಡಿನಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆಲ್ಲುವಲ್ಲಿ ರಿಷಭ್ ಪಂತ್ ಅವರ ಪಾತ್ರ ಮಹತ್ವದ್ದಾಗಿತ್ತು. ಈ ಬಾರಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಭಾರತಕ್ಕೆ ನಿರ್ಣಾಯಕವಾಗಲಿದ್ದು, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್’ನಲ್ಲಿ (ICC World Test Championship) ಭಾರತ ಫೈನಲ್ ಪ್ರವೇಶಿಸಬೇಕದಾರೆ 4 ಪಂದ್ಯಗಳಲ್ಲಿ ಕನಿಷ್ಠ 3ನ್ನು ಗೆಲ್ಲಲೇಬೇಕಿದೆ.

5 ವರ್ಷದ ರಿಷಭ್ ಪಂತ್ ಶುಕ್ರವಾರ ಬೆಳಗ್ಗೆ ಐದೂವರೆಗೆ ದೆಹಲಿ-ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿಯ ರೂರ್ಕಿಯ ನರ್ಸನ್ ಬಳಿಯಿರುವ ಹಮ್ಜದ್’ಪುರ ಸಮೀಪ ರಸ್ತೆ ಅಪಘಾತಕ್ಕೊಳಗಾಗಿದ್ದರು. ಪಂತ್ ಚಲಾಯಿಸುತ್ತಿದ್ದ ಮರ್ಸಿಡಿಸ್ ಬೆಂಜ್ ಕಾರು ರಸ್ತೆ ಡಿವೈಡರ್’ಗೆ ಡಿಕ್ಕಿ ಹೊಡೆದಿತ್ತು. ಹೈಸ್ಪೀಡ್’ನಲ್ಲಿದ್ದ ಕಾರು ಡಿವೈಡರ್’ಗೆ ಬಂದಪ್ಪಳಿಸಿದ ಪರಿಣಾಮ ಕಾರು ಚಲಾಯಿಸುತ್ತಿದ್ದ ರಿಷಬ್ ಪಂತ್ ಗಂಭೀರವಾಗಿ ಗಾಯಗೊಂಡಿದ್ದರು. ಇದನ್ನೂ ಓದಿ : Rishabh Pant is out of danger: ಮೆದುಳು, ಬೆನ್ನು ಹುರಿ ಸೇಫ್, ರಿಷಭ್ ಪಂತ್ ಔಟ್ ಆಫ್ ಡೇಂಜರ್ : ಇಂದು ನಿರ್ಧಾರವಾಗಲಿದೆ ಕ್ರಿಕೆಟ್ ಭವಿಷ್ಯ

Rishabh Pant out of IPL 2023 and miss Australia series

Comments are closed.