Gujarat High Court : ದಂಪತಿ ನಡುವಿನ ಲೈಂಗಿಕ ಸಂಬಂಧದ ವಿಚಾರದಲ್ಲಿ ಹೈಕೋರ್ಟ್ ಮಹತ್ವದ ತೀರ್ಪು​

ವೈವಾಹಿಕ ಸಂಬಂಧದ ಕುರಿತಂತೆ ಗುಜರಾತ್​ ಹೈಕೋರ್ಟ್ನ (Gujarat High Court) ಮಹತ್ವದ ತೀರ್ಪೋಂದನ್ನು ಗುಜರಾತ್​ ಹೈಕೋರ್ಟ್ ಪ್ರಕಟಿಸಿದೆ. ವೈವಾಹಿಕ ಹಕ್ಕುಗಳನ್ನು ಸ್ಥಾಪಿಸಲು ಹಾಗೂ ಲೈಂಗಿಕ ಕ್ರಿಯೆಗಳನ್ನು ನಡೆಸಲು ಪತ್ನಿಯನ್ನು ಒತ್ತಾಯಿಸಲು ಪತಿಗೆ ಯಾವುದೇ ಅಧಿಕಾರ ಇರೋದಿಲ್ಲ ಎಂದು ಹೇಳಿದೆ.

ಗುಜರಾತ್​​ನ ಬನಸ್ಕಂದ ಜಿಲ್ಲೆಯ ಗ್ರಾಮವೊಂದರ ಮುಸ್ಲಿಂ ದಂಪತಿಯ ವೈವಾಹಿಕ ಸಂಬಂಧದ ಕುರಿತಂತೆ ವಿಚಾರಣೆ ನಡೆಸಿದ ಹೈಕೋರ್ಟ್ ಈ ಮಹತ್ವದ ತೀರ್ಪನ್ನು ಪ್ರಕಟಿಸಿದೆ. 2015ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ದಂಪತಿಗೆ ಓರ್ವ ಪುತ್ರ ಕೂಡ ಇದ್ದಾನೆ. ಮಹಿಳೆಯು ಪಾಲನ್​​ಪುರ ಸಿವಿಲ್​ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾಳೆ. ಆಕೆಯ ತನ್ನ ಗಂಡನ ಮನೆಯಲ್ಲಿ ಅತ್ತೆ ಮಾವನನ್ನು ಬಿಟ್ಟು ಮಗನೊಂದಿಗೆ ತವರು ಮನೆಗೆ ತೆರಳಿದ್ದಳು ಎನ್ನಲಾಗಿದೆ.

ಮಹಿಳೆಯ ಒಡಹುಟ್ಟಿದವರು ಆಸ್ಟ್ರೇಲಿಯಾದಲ್ಲಿ ವಾಸವಿದ್ದಾರೆ. ಮಹಿಳೆಯ ಅತ್ತೆ ಹಾಗೂ ಮಾವ ಈಕೆಗೂ ಆಸ್ಟ್ರೇಲಿಯಾಗೆ ತೆರಳುವಂತೆ ಒತ್ತಾಯಿಸುತ್ತಿದ್ದರು. ಆಸ್ಟ್ರೇಲಿಯಾಗೆ ತೆರಳಿ ಪತಿಯನ್ನೂ ಅಲ್ಲಿಗೆ ಕರೆಸಿಕೊಳ್ಳಬೇಕು ಎಂದು ಗಂಡನ ಮನೆಯವರು ಪೀಡಿಸುತ್ತಿದ್ದರಂತೆ. ಅಲ್ಲದೇ ಅತ್ತೆ ಮಾವ ಕೂಡ ಆಸ್ಟ್ರೇಲಿಯಾಗೆ ತೆರಳುವ ಆಸೆ ಹೊಂದಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ. ವೈವಾಹಿಕ ಹಕ್ಕುಗಳನ್ನು ಮರುಸ್ಥಾಪಿಸುವಂತೆ ಮಹಿಳೆಯ ವಿರುದ್ಧ ಪತಿಯು ಪಾಲನ್​ಪುರ ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ್ದ ಕೌಟುಂಬಿಕ ನ್ಯಾಯಾಲವು ಪತಿಯೊಂದಿಗೆ ವಾಸಿಸುವಂತೆ ಪತ್ನಿಗೆ ಸೂಚನೆ ನೀಡಿತ್ತು.

ಕೌಟುಂಬಿಕ ನ್ಯಾಯಾಲಯದ ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಮೂರ್ತಿಗಳಾದ ಜೆ.ಪಿ ಪರ್ದಿವಾಲಾ ಹಾಗೂ ನೀರಲ್​ ಮೆಹ್ತಾ ನೇತೃತ್ವದ ಪೀಠವು ತನ್ನ ಪತಿಯೊಂದಿಗೆ ಇರುವಂತೆ ಕೌಟುಂಬಿಕ ನ್ಯಾಯಾಲಯವು ನೀಡಿದ್ದ ಆದೇಶವನ್ನು ರದ್ದು ಗೊಳಿಸಿ (Gujarat High Court) ಆದೇಶ ಹೊರಡಿಸಿದೆ.

ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದ ಪೀಠವು ಮುಸ್ಲಿಂ ಪುರುಷ ಮತ್ತು ಮುಸ್ಲಿಂ ಮಹಿಳೆಯ ನಡುವಿನ ವಿವಾಹವು ನಾಗರಿಕ ಒಪ್ಪಂದವಾಗಿದೆ ಮತ್ತು ವೈವಾಹಿಕ ಹಕ್ಕುಗಳ ಮರುಸ್ಥಾಪನೆಯ ಹಕ್ಕು ಈ ಒಪ್ಪಂದದ ಅಡಿಯಲ್ಲಿ ಒಕ್ಕೂಟದ ಹಕ್ಕನ್ನು ಚಲಾಯಿಸುತ್ತದೆಯೇ ಹೊರತು ಬೇರೇನೂ ಅಲ್ಲ. ಮಹಿಳೆಯ ಮೇಲೆ ವೈವಾಹಿಕ ಹಕ್ಕನ್ನು ಸ್ಥಾಪಿಸುವ ಹಾಗೂ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸುವ ಯಾವುದೇ ರೀತಿಯ ಒತ್ತಡವನ್ನು ಹೇರುವಂತಿಲ್ಲ ಎಂದು ಹೇಳಿದೆ.

ಇದನ್ನು ಓದಿ : Heavy Rain In Tamil Nadu : ತಮಿಳುನಾಡಿನಲ್ಲಿ ಭಾರೀ ಮಳೆ: ಮೂವರ ಸಾವು

ಇದನ್ನೂ ಓದಿ : UP elections :ಉತ್ತರ ಪ್ರದೇಶ ಚುನಾವಣೆ ಮುಂದೂಡಿಕೆಯಾಗೋದಿಲ್ಲ: ಕೇಂದ್ರ ಚುನಾವಣಾ ಆಯೋಗ ಮಾಹಿತಿ

Husband can’t force wife to have sex: Gujarat High Court

Comments are closed.