Husband carried wife’s deadbody: ಪತ್ನಿಯ ಶವವನ್ನು ಹೆಗಲ ಮೇಲೆ ಹೊತ್ತು ಸಾಗಿದ ಪತಿ: ನೆರವಿಗೆ ಬಂದ ಪೊಲೀಸರು

ವಿಶಾಖಪಟ್ಟಣಂ: (Husband carried wife’s deadbody) ಪತಿಯೋರ್ವ ಒಡಿಶಾದಲ್ಲಿ ಪತ್ನಿಯ ಶವವನ್ನು ಭುಜದ ಮೇಲೆ ಹೊತ್ತುಕೊಂಡು ಮನೆಗೆ ತೆರಳುತ್ತಿದ್ದ ಮನಕಲುಕುವ ಘಟನೆ ನಡೆದಿದೆ. ಆಟೋ ರಿಕ್ಷಾ ಚಾಲಕ ಅವರನ್ನು ಮನೆಗೆ ಕರೆದೊಯ್ಯಲು ನಿರಾಕರಿಸಿದ್ದು, ಹೆಂಡತಿಯನ್ನು ಹೆಗಲ ಮೇಲೆ ಹಾಕಿಕೊಂಡು ಮನೆಗೆ ತೆರಳುತ್ತಿದ್ದ 33 ವರ್ಷದ ಬುಡಕಟ್ಟು ಯುವಕನನ್ನು ಆಂಧ್ರಪ್ರದೇಶದ ಪೊಲೀಸರು ರಕ್ಷಿಸಿ ಅವರಿಗೆ ಆಂಬುಲೆನ್ಸ್‌ ವ್ಯವಸ್ಥೆ ಮಾಡಿದ್ದಾರೆ.

ಒಡಿಶಾದ ಕೊರಾಪುಟ್‌ನ ಎಡೆ ಸಮುಲು ಎಂಬಾತ ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ಪತ್ನಿ ಎಡೆ ಗುರುವನ್ನು ವಿಶಾಖಪಟ್ಟಣದ ಸಂಗಿವಲಸದಲ್ಲಿರುವ ಆಸ್ಪತ್ರೆಗೆ ದಾಖಲಿಸಿದ್ದ. ಆಸ್ಪತ್ರೆಯಲ್ಲಿ ಆಕೆ ಚಿಕಿತ್ಸೆಗೆ ಸ್ಪಂದಿಸುವುದನ್ನು ನಿಲ್ಲಿಸಿದ್ದು, ನಂತರ ಆಕೆಯನ್ನು ತಮ್ಮ ಗ್ರಾಮವಾದ ಒಡಿಶಾದ ಸೊರಡಾಕ್ಕೆ ಕರೆದುಕೊಂಡು ಹೋಗುವಂತೆ ವೈದ್ಯರು ಸಲಹೆ ನೀಡಿದರು. ಆಸ್ಪತ್ರೆಯಿಂದ ಸುಮಾರು 130 ಕಿ.ಮೀ ದೂರದಲ್ಲಿರುವ ತಮ್ಮ ಗ್ರಾಮಕ್ಕೆ ಮರಳಲು ಯುವಕ ಆಟೋ ರಿಕ್ಷಾವನ್ನು ಬಾಡಿಗೆಗೆ ಪಡೆದರು. ಆದರೆ ಅವರ ಪತ್ನಿ ವಿಜಯನಗರದ ಸಮೀಪದಲ್ಲಿಯೇ ತೀರಿಕೊಂಡರು.

ಹೀಗಾಗಿ ಆಟೋ ರಿಕ್ಷಾ ಚಾಲಕ ಅವರನ್ನು ಮನೆಗೆ ಕರೆದೊಯ್ಯಲು ನಿರಾಕರಿಸಿದ್ದಾನೆ. ಆಟೋ ರಿಕ್ಷಾ ಚಾಲಕನಿಗೆ ₹ 2,000 ಪಾವತಿಸಿ ಪತ್ನಿಯ ಶವವನ್ನು ಹೆಗಲ ಮೇಲೆ ಹೊತ್ತು ಹೆದ್ದಾರಿಯಲ್ಲಿ ನಡೆಯಲು ಪ್ರಾರಂಭಿಸಿದರು. ಇನ್ನೊಂದು ವಾಹನವನ್ನು ವ್ಯವಸ್ಥೆ ಮಾಡಲು ಅವರ ಬಳಿ ಹಣವಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಂಧ್ರಪ್ರದೇಶದ ವಿಜಯನಗರಂನಲ್ಲಿರುವ ಕೆಲವು ಸ್ಥಳೀಯರು ಆತನನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದು, ನಂತರ ಪೊಲೀಸರು ಅವನಿಗೆ ಸಹಾಯ ಮಾಡಲು ಹಣವನ್ನು ಸಂಗ್ರಹಿಸಿದರು.

ಪೊಲೀಸ್ ಇನ್ಸ್‌ಪೆಕ್ಟರ್ ಟಿ.ವಿ.ತಿರುಪತಿ ರಾವ್ ಮತ್ತು ಸಬ್ ಇನ್‌ಸ್ಪೆಕ್ಟರ್ ಕಿರಣ್ ಕುಮಾರ್ ನಾಯ್ಡು ಅವರಿಗೆ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲು ₹ 10,000 ಸಂಗ್ರಹಿಸಿ, ಶವವನ್ನು ತೆಗೆದುಕೊಂಡು ಹೋಗಲು ಆಂಬುಲೆನ್ಸ್‌ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.

ಇದನ್ನೂ ಓದಿ : Palghar crime: ದಂಪತಿ ಜಗಳ ಬಿಡಿಸಲು ಬಂದ ಸಹೋದರನಿಂದಲೇ ಸಹೋದರಿಯ ಗಂಡನ ಹತ್ಯೆ

ಇದನ್ನೂ ಓದಿ : 7 workers died: ಆಯಿಲ್ ಟ್ಯಾಂಕ್ ಸ್ವಚ್ಷಗೊಳಿಸುವ ವೇಳೆ ದುರಂತ : ವಿಷ ಅನಿಲ ಸೇವಿಸಿ 7 ಕಾರ್ಮಿಕರ ಸಾವು

ಇದನ್ನೂ ಓದಿ : Maharashtra journalist murder: ರಿಫೈನರಿ ವಿರುದ್ದ ಸುದ್ದಿ ಬರೆದಿದ್ದಕ್ಕೆ ಪತ್ರಕರ್ತನ ಮೇಲೆ ಕಾರು ಹರಿಸಿ ಹತ್ಯೆ

Husband carried wife’s deadbody: Police came to help

Comments are closed.