Ravindra Jadeja : ಕಂಬ್ಯಾಕ್ ಪಂದ್ಯದಲ್ಲೇ ಜಡೇಜಾ ಭರ್ಜರಿ ಬೌಲಿಂಗ್, ಭಾರತದ ಸ್ಪಿನ್ ದಾಳಿಗೆ ತತ್ತರಿಸಿದ ಕಾಂಗರೂಗಳು

ನಾಗ್ಪುರ: ( Ravindra Jadeja ) ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ (Border-Gavaskar test series) ಮೊದಲ ಟೆಸ್ಟ್ ಪಂದ್ಯದ ಮೊದಲ ದಿನವೇ ಆತಿಥೇಯ ಭಾರತ ಮೇಲುಗೈ ಸಾಧಿಸಿದೆ. ನಾಗ್ಪುರದ ವಿದರ್ಭ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಗುರುವಾರ ಆರಂಭಗೊಂಡ ಪ್ರಥಮ ಟೆಸ್ಟ್ ಪಂದ್ಯದ ಮೊದಲ ದಿನ ಆಸ್ಟ್ರೇಲಿಯಾ ತಂಡ ತನ್ನ ಪ್ರಥಮ ಇನ್ನಿಂಗ್ಸ್’ನಲ್ಲಿ ಕೇವಲ 177 ರನ್ನಿಗೆ ಆಲೌಟಾಯಿತು.

ಏಳು ತಿಂಗಳ ನಂತರ ಟೀಮ್ ಇಂಡಿಯಾ ಪರ ಟೆಸ್ಟ್ ಆಡಿದ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ತಮ್ಮ ಕಂಬ್ಯಾಕ್ ಪಂದ್ಯದಲ್ಲೇ ಮಿಂಚಿ 47 ರನ್ನಿಗೆ 5 ವಿಕೆಟ್ ಉರುಳಿಸಿದರು. ಕಳೆದ ವರ್ಷ ನಡೆದ ಏಷ್ಯಾ ಕಪ್ ಟಿ20 ಟೂರ್ನಿಯ ವೇಳೆ ಪಾದದ ಗಾಯಕ್ಕೊಳಗಾಗಿದ್ದ ಜಡೇಜ, ನಂತರ ಶಸ್ತ್ರ ಚಿಕಿತ್ಸೆಗೊಳಗಾಗಿದ್ದರು. ಗಾಯದಿಂದ ಚೇತರಿಸಕೊಂಡ ನಂತರ ಭಾರತ ಪರ ಆಡಿದ ಮೊದಲ ಪಂದ್ಯದಲ್ಲೇ ಜಡೇಜ ಸ್ಪಿನ್ ಮೋಡಿ ತೋರಿಸಿದ್ದಾರೆ. ಮತ್ತೊಬ್ಬ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 42 ರನ್ನಿಗೆ 3 ವಿಕೆಟ್ ಉರುಳಿಸಿ ಕಾಂಗರೂಗಳ ಪತನಕ್ಕೆ ಕಾರಣರಾದರು.

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆಸೀಸ್ ಮೊದಲ ಮೂರು ಓವರ್’ಗಳ ಒಳಗೆ ಆರಂಭಿಕರಿಬ್ಬರನ್ನೂ ಕಳೆದುಕೊಂಡಿತು. ಉಸ್ಮಾನ್ ಖ್ವಾಜ 1 ರನ್ ಗಳಿಸಿ ಮೊಹಮ್ಮದ್ ಸಿರಾಜ್ ದಾಳಿಯಲ್ಲಿ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದರೆ, ಅನುಭವಿ ಓಪನರ್ ಡೇವಿಡ್ ವಾರ್ನರ್ ಕೂಡ ಕೇವಲ 1 ರನ್ ಗಳಿಸಿ ವೇಗಿ ಮೊಹಮ್ಮದ್ ಸಿರಾಜ್ ದಾಳಿಯಲ್ಲಿ ಕ್ಲೀನ್ ಬೌಲ್ಡಾದರು. 3ನೇ ವಿಕೆಟ್’ಗೆ ಮಾರ್ನಸ್ ಲಬುಶೇನ್49) ಮತ್ತು ಉಪನಾಯಕ ಸ್ಟೀವನ್ ಸ್ಮಿತ್ (37) 82 ರನ್ ಸೇರಿಸಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಆದರೆ ಈ ಜೊತೆಯಾಟ ಮುರಿದು ಬೀಳುತ್ತಿದ್ದಂತೆ ಕುಸಿತ ಕಂಡ ಆಸೀಸ್ 177 ರನ್ನಿಗೆ ಆಲೌಟಾಯಿತು.

ನಂತರ ತನ್ನ ಪ್ರಥಮ ಇನ್ನಿಂಗ್ಸ್ ಆರಂಭಿಸಿದ ಭಾರತಕ್ಕೆ ಆರಂಭಿಕರಾದ ನಾಯಕ ರೋಹಿತ್ ಶರ್ಮಾ ಮತ್ತು ಉಪನಾಯಕ ಕೆ.ಎಲ್ ರಾಹುಲ್ ಮೊದಲ ವಿಕೆಟ್’ಗೆ 76 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ದಿನದಂತ್ಯಕ್ಕೆ ರಾಹುಲ್ 20 ರನ್ ಗಳಿಸಿ ಔಟಾದ್ರೆ, ನಾಯಕ ರೋಹಿತ್ ಅಜೇಯ 56 ರನ್’ಗಳೊಂದಿಗೆ 2ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. 1 ವಿಕೆಟ್ ನಷ್ಟಕ್ಕೆ 77 ರನ್ ಗಳಿಸಿರುವ ಟೀಮ್ ಇಂಡಿಯಾ ಇನ್ನಿಂಗ್ಸ್ ಮುನ್ನಡೆಯತ್ತ ದಾಪುಗಾಲಿಟ್ಟಿದೆ.

ಇದನ್ನೂ ಓದಿ : KL Rahul Shubman Gill : ಶುಭಮನ್ ಗಿಲ್ ಬದಲು ಕೆ.ಎಲ್ ರಾಹುಲ್ ಯಾಕೆ ? ಪ್ರಶ್ನಿಸುವವರಿಗೆ ಇಲ್ಲಿದೆ ಉತ್ತರ

ಇದನ್ನೂ ಓದಿ : Mayank Agarwal Double Century: ಮಯಾಂಕ್ ಮ್ಯಾಜಿಕ್; ರಣಜಿ ಟ್ರೋಫಿ ಸೆಮಿಫೈನಲ್‌ನಲ್ಲಿ ಭರ್ಜರಿ ದ್ವಿಶತಕ ಬಾರಿಸಿದ ಕರ್ನಾಟಕ ಕ್ಯಾಪ್ಟನ್

Ravindra Jadeja bowled brilliantly India vs Australia Test 1st day Border-Gavaskar test series

ಇಂಗ್ಲೀಷ್‌ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Comments are closed.