IIM Calcutta : ಐಐಎಂನ 28 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ : 58 ವಿದ್ಯಾರ್ಥಿಗಳು ಹೋಮ್ ಐಸೋಲೇಶನ್‌

ಕೋಲ್ಕತ್ತಾ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್-ಕೊಲ್ಕತ್ತಾ (IIM Calcutta ) ಕ್ಯಾಂಪಸ್‌ನಲ್ಲಿ ಕೊರೊನಾ ಆರ್ಭಟಿಸುತ್ತಿದೆ. ಶನಿವಾರ ಇಲ್ಲಿನ ವಿದ್ಯಾರ್ಥಿಗಳನ್ನು ಕೋವಿಡ್‌ ಟೆಸ್ಟ್‌ಗೆ ಒಳಪಡಿಸಿದ್ದು, ಈ ವೇಳೆಯಲ್ಲಿ 28 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕರೋನಾ ವೈರಸ್‌ ಪಾಸಿಟಿವ್‌ ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಇಡೀ ಕ್ಯಾಂಪಸ್‌ ಅನ್ನು ಕಂಟೈನ್ಮೆಂಟ್‌ ಝೋನ್‌ ಎಂದು ಘೋಷಿಸಲಾಗಿದ್ದು, ಕೋವಿಡ್‌ ಸೋಂಕು ನಿಯಂತ್ರಣಕ್ಕೆ ಬರುವವರೆ ನಿರ್ಬಂಧಗಳನ್ನು ಹೇರಲಾಗಿದೆ.

28 ವಿದ್ಯಾರ್ಥಿಗಳು ಕೋವಿಡ್ -19 ಗೆ ಧನಾತ್ಮಕ ಪರೀಕ್ಷೆ ಮಾಡಿದ್ದಾರೆ ಮತ್ತು 58 ಇತರರನ್ನು ಹೋಮ್ ಐಸೋಲೇಶನ್‌ನಲ್ಲಿ ಇರಿಸಲಾಗಿದೆ. ನಾವು ಮೂರು ದಿನಗಳ ಮಧ್ಯಂತರದಲ್ಲಿ ಕ್ಯಾಂಪಸ್‌ನಲ್ಲಿ ಕೋವಿಡ್‌ ಪರೀಕ್ಷೆಗಳಿಗೆ ಪ್ರಸ್ತಾವನೆಯನ್ನು ನೀಡಿದ್ದೇವೆ. ಇನ್‌ಸ್ಟಿಟ್ಯೂಟ್ ಅಧಿಕಾರಿಗಳು ಈ ಖಾತೆಯಲ್ಲಿ ಸಹಕರಿಸಲು ಒಪ್ಪದಿದ್ದರೆ, ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೆ ಇಡೀ ಕ್ಯಾಂಪಸ್ ಅನ್ನು ಕಂಟೈನ್‌ಮೆಂಟ್ ಝೋನ್ ಎಂದು ಘೋಷಿಸುವುದನ್ನು ಬಿಟ್ಟು ನಮಗೆ ಬೇರೆ ಆಯ್ಕೆಗಳಿಲ್ಲ ಕೆಎಂಸಿ ಮೇಯರ್ ಫಿರ್ಹಾದ್ ಹಕೀಮ್ ಅವರು ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಐಎಎನ್‌ಎಸ್‌ ವರದಿ ಮಾಡಿದೆ.

ಕೋವಿಡ್‌ ಪಾಸಿಟಿವ್‌ ಬಂದಿರುವ ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಅನೇಕ ವಿದ್ಯಾರ್ಥಿಗಳು ಹೊರ ರಾಜ್ಯದಿಂದ ಬರುವುದರಿಂದ, ವೈರಸ್ ವೇಗವಾಗಿ ಹರಡುವ ಸಾಧ್ಯತೆಗಳು ಉಳಿದಿವೆ ಎಂದು ಹಕೀಮ್ ಹೇಳಿದ್ದಾರೆ. ಕೆಎಂಸಿಯ ಪ್ರಮುಖ ಗುರಿ ಈಗ ವೈರಸ್ ಹರಡುವುದನ್ನು ತಡೆಯುವುದು. ಅದನ್ನು ನಿಯಂತ್ರಣದಲ್ಲಿಡಲು ಸಾಧ್ಯವಾದರೆ, ಮತ್ತೊಂದು ಸಾಂಕ್ರಾಮಿಕ ಅಥವಾ ಅರೆ-ಸಾಂಕ್ರಾಮಿಕ ಪರಿಸ್ಥಿತಿಯನ್ನು ತಪ್ಪಿಸಬಹುದು ಎಂದಿದ್ದಾರೆ.

ಇನ್ನು ಪಶ್ಚಿಮ ಬಂಗಾಳದ ರಾಜ್ಯ ಆರೋಗ್ಯ ಇಲಾಖೆ ಹೊರಡಿಸಿದ ಬುಲೆಟಿನ್ ಪ್ರಕಾರ, ಪಶ್ಚಿಮ ಬಂಗಾಳದಿಂದ 50 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿದ್ದು, ಗುರುವಾರ 42 ಪ್ರಕರಣಗಳು ವರದಿಯಾಗಿವೆ. ಆದರೆ, ಕಳೆದ ಏಳು ದಿನಗಳಿಂದ ರಾಜ್ಯದಲ್ಲಿ ಯಾವುದೇ ಕೋವಿಡ್‌ ಸಂಬಂಧಿತ ಸಾವು ಸಂಭವಿಸಿಲ್ಲ. ಮೊದಲಿನಿಂದಲೂ ರಾಜ್ಯದಲ್ಲಿ ವರದಿಯಾದ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 20,18,763 ಆಗಿದೆ. ಚೇತರಿಕೆ ಪ್ರಮಾಣ 98.93 ಶೇ.ರಷ್ಟು ಇದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : Omicron COVID Variant BA.2.12 : ಪಾಟ್ನಾದಲ್ಲಿ ಹೊಸ ಓಮಿಕ್ರಾನ್‌ ಕೋವಿಡ್ ರೂಪಾಂತರ BA.2.12 ತಳಿ ಪತ್ತೆ

ಇದನ್ನೂ ಓದಿ : fourth wave : ನಾಲ್ಕನೇ ಅಲೆಗೆ ಸಜ್ಜಾದ ಸರಕಾರ: ನಗರದ ಆಸ್ಪತ್ರೆಗಳಲ್ಲಿ ಬೆಡ್ ಮೀಸಲು

IIM Calcutta Campus 28 Students Test COVID Positive 58 Others Home Isolation

Comments are closed.