Tata Motors : ನವೆಂಬರ್‌ 7 ರಿಂದ ಪ್ರಯಾಣಿಕ ವಾಹನಗಳ ದರ ಹೆಚ್ಚಿಸಲಿರುವ ಟಾಟಾ

ಬೆಲೆ ಏರಿಕೆಯ ಬಿಸಿಯು ಆಟೋಮೊಬೈಲ್‌ ವಲಯದ ದೈತ್ಯ ಕಂಪನಿಯಾದ ಟಾಟಾ ಮೋಟಾರ್ಸ್‌ಗೂ ತಟ್ಟಿದಂತಿದೆ. ದೇಸೀ ವಾಹನ ತಯಾರಿಕಾ ಕಂಪನಿ ಟಾಟಾ ಮೋಟಾರ್ಸ್‌ (Tata Motors) ತನ್ನ ಪ್ರಯಾಣಿಕ ವಾಹನಗಳ ಬೆಲೆಯನ್ನು ಹೆಚ್ಚಿಸಿದೆ. ಬೆಲೆಯಲ್ಲಾದ ಹೆಚ್ಚಳವನ್ನು ಇಂದು (ಶನಿವಾರ) ಘೋಷಿಸಿದೆ. ನವೆಂಬರ್‌ 7 ರಿಂದ ಜಾರಿಗೆ ಬರುವಂತೆ ಬೆಲೆಗಳನ್ನು ಹೆಚ್ಚಿಸಲಾಗಿದೆ ಎಂದು ಅದು ಹೇಳಿದೆ. ಆಟೋಮೊಬೈಲ್‌ ದೈತ್ಯ ಸಂಸ್ಥೆಯಾಗಿರುವ ಟಾಟಾ ಹೇಳಿರುವ ಪ್ರಕಾರ ಸರಾಸರಿ ಹೆಚ್ಚಳವು ವಾಹನದ ರೂಪಾಂತರ ಮತ್ತು ಮಾದರಿಯನ್ನು ಅವಲಂಬಿಸಿ 0.9 ಪ್ರತಿಶತದಷ್ಟು ಹೆಚ್ಚಳ ಆಗಿಲಿದೆ. ಇದರಿಂದ ಟಾಟಾ ಪ್ರಯಾಣಿಕ ವಾಹನಗಳ ಬೆಲೆ ಏರಲಿದೆ. ಕಂಪನಿಯಲ್ಲಿ ವೆಚ್ಚಗಳು ಗಮನಾರ್ಹವಾಗಿ ಏರಿಕೆಯಾಗಿದೆ. ಇನ್‌ಪುಟ್‌ ವೆಚ್ಚಗಳಲ್ಲಾದ ದರ ಏರಿಕೆಯಿಂದ ಬೆಲೆಗಳನ್ನು ಏರಿಸಲಾಗಿದೆ ಎಂದು ತಿಳಿಸಿದೆ.

ಕಂಪನಿಯು ದೇಶಾದ್ಯಂತ ಟಿಯಾಗೊ, ಪಂಚ್, ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿಯಂತಹ ಹಲವಾರು ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡುತ್ತದೆ. ಅಕ್ಟೋಬರ್‌ನಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಪ್ರಯಾಣಿಕ ವಾಹನಗಳನ್ನು ಅತಿ ಹೆಚ್ಚು ಮಾರಾಟ ಮಾಡಿದ ಹೆಗ್ಗಳಿಕೆ ಟಾಟಾ ಮೋಟಾರ್ಸ್‌ಗೆ ಸೇರುತ್ತದೆ.

ಕಳೆದ ವರ್ಷ ಮಾರಾಟವಾದ 65,151 ಯುನಿಟ್‌ಗಳಿಗೆ ಹೋಲಿಸಿದಾಗ, ಈ ವರ್ಷ ಟಾಟಾ ದೇಶೀಯವಾಗಿ 76,537 ಯುನಿಟ್‌ಗಳನ್ನು ಮಾರಾಟಮಾಡಿದೆ. ಅಂದರೆ ಶೇಕಡಾ 17 ರಷ್ಟು ಬೆಳವಣಿಗೆಯಾಗಿದೆ ಎಂದು ಕಂಪನಿ ತಿಳಿಸಿದೆ.

ದೇಶೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳು ಸೇರಿದಂತೆ ಪ್ರಯಾಣಿಕ ವಾಹನಗಳ ಮಾರಾಟವು ಕಳೆದ ವರ್ಷದ ಇದೇ ತಿಂಗಳಿನಲ್ಲಿ 34,155 ಯುನಿಟ್‌ಗಳಿಗೆ ಹೋಲಿಸಿದರೆ 45,423 ಯುನಿಟ್‌ಗಳಲ್ಲಿದೆ. ಅಂದರೆ ಈ ಮಾರಾಟವು ಶೇಕಡಾ 33 ರಷ್ಟು ಹೆಚ್ಚಾಗಿದೆ. ಆದರೆ ಪ್ರಯಾಣಿಕ ವಾಹನಗಳ ರಫ್ತು ಕಡಿಮೆಯಾಗಿದೆ. ಅದು ಅಕ್ಟೋಬರ್‌ 2021 ರಲ್ಲಿದ್ದ 230 ಯುನಿಟ್‌ ನಿಂದ 206 ಯುನಿಟ್‌ ಕಡಿಮೆ ಆಗುವುದರ ಮೂಲಕ ಶೇಕಡಾ 10 ರಷ್ಟು ಕಡಿಮೆಯಾಗಿದೆ.

ಇದನ್ನೂ ಓದಿ : Red Moon During Lunar Eclipse : ಚಂದ್ರ ಗ್ರಹಣದ ಸಂದರ್ಭದಲ್ಲಿ ಚಂದ್ರ ಕೆಂಪಾಗುವುದೇಕೆ? ಇದರ ಹಿಂದಿರುವ ಕಾರಣ ಹೇಳಿದ ನಾಸಾ

ಇದನ್ನೂ ಓದಿ : Tata Tiago EV : ಇಂದು ಬಿಡುಗಡೆಯಾದ ಟಾಟಾ ಟಿಯಾಗೊ ಎಲೆಕ್ಟ್ರಿಕಲ್‌ ಕಾರ್‌; ಇದು ಜನಸಾಮಾನ್ಯರ ಕಾರ್‌ ಆಗಬಹುದೇ…

(Tata Motors to hike prices for passenger vehicles from November 7, 2022)

Comments are closed.