Jaydev Unadkat : 12 ವರ್ಷಗಳ ನಂತರ ಭಾರತ ಪರ ಟೆಸ್ಟ್ ಆಡುವ ಅವಕಾಶ, ಇದು ಸೌರಷ್ಟ್ರದ ಛಲದಂಕಮಲ್ಲನ ಕಥೆ

ಮೀರ್’ಪುರ್ : ಆತ ಭಾರತ ಪರ ಟೆಸ್ಟ್ ಆಡಿದ್ದು ಬರೋಬ್ಬರಿ 12 ವರ್ಷಗಳ ಹಿಂದೆ ಆಡಿದ್ದು, ಒಂದೇ ಒಂದು ಟೆಸ್ಟ್ ಮ್ಯಾಚ್ (Jaydev Unadkat). ಆಗ ಮಾಜಿ ನಾಯಕ ವಿರಾಟ್ ಕೊಹ್ಲಿ ಇನ್ನೂ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿರಲಿಲ್ಲ. ಈಗಿನ ಕೋಚ್ ರಾಹುಲ್ ದ್ರಾವಿಡ್ ಇನ್ನೂ ಭಾರತ ಪರ ಟೆಸ್ಟ್ ಆಡ್ತಾ ಇದ್ರು. ಎಂ.ಎಸ್ ಧೋನಿ ಕ್ಯಾಪ್ಟನ್.

ಆದ್ರೆ ಆ ಪಂದ್ಯದ ನಂತರ ಆತನಿಗೆ ಮತ್ತೆ ಟೀಮ್ ಇಂಡಿಯಾ ಪರ ವೈಟ್ & ವೈಟ್’ನಲ್ಲಿ ಆಡುವ ಅವಕಾಶ ಸಿಗಲೇ ಇಲ್ಲ. ಆದರೆ ಇದೀಗ ಅದೇ ಆಟಗಾರ 12 ವರ್ಷಗಳ ನಂತರ ಭಾರತ ಪರ ಟೆಸ್ಟ್ ಆಡುತ್ತಿರುವ ಸಂಭ್ರಮದಲ್ಲಿದ್ದಾನೆ. ನಾವು ಹೇಳುತ್ತಿರುವುದು ಸೌರಷ್ಟ್ರ ತಂಡದ ಎಡಗೈ ಮಧ್ಯಮ ವೇಗಿ ಜೈದೇವ್ ಉನಾದ್ಕಟ್ (Jaydev Unadkat) ಅವರ ಬಗ್ಗೆ.

ಬಾಂಗ್ಲಾದೇಶ ವಿರುದ್ಧ ಮೀರ್’ಪುರ್’ನ ಶೇರ್ ಎ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ಆರಂಭಗೊಂಡ ದ್ವಿತೀಯ ಟೆಸ್ಟ್ (India Vs Bangladesh 2nd test match) ಪಂದ್ಯದ ಆಡುವ ಬಳಗದಲ್ಲಿ ಸ್ಥಾನ ಪಡೆದಿರುವ ಜೈದೇವ್ ಉನಾದ್ಕಟ್, ಸುದೀರ್ಘ 12 ವರ್ಷಗಳ ನಂತರ ಟೆಸ್ಟ್ ಆಡುವ ಅವಕಾಶ ಪಡೆದಿದ್ದಾರೆ.

2ನೇ ಟೆಸ್ಟ್ ಪಂದ್ಯಕ್ಕಾಗಿ ಭಾರತ ತಂಡದಲ್ಲಿ ಒಂದು ಬದಲಾವಣೆ ಮಾಡಿಕೊಳ್ಳಲಾಗಿದ್ದು, ಕಳೆದ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಬದಲು ಉನಾದ್ಕಟ್ ಪ್ಲೇಯಿಂಗ್ XIನಲ್ಲಿ ಸ್ಥಾನ ಪಡೆದಿದ್ದಾರೆ. ತಮ್ಮ ಕಂಬ್ಯಾಕ್ ಟೆಸ್ಟ್ ಪಂದ್ಯದಲ್ಲಿ 4ನೇ ಓವರ್’ನಲ್ಲಿ ಬಾಂಗ್ಲಾ ಓಪನರ್ ಜಾಕಿರ್ ಹೊಸೇನ್ ವಿಕೆಟ್ ಪಡೆಯುವ ಮೂಲಕ ಉನಾದ್ಕಟ್ ಗಮನ ಸೆಳೆದಿದ್ದಾರೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾದೇಶಕ್ಕೆ ಜೈದೇವ್ ಉನಾದ್ಕಟ್ ಮೊದಲ ಆಘಾತ ನೀಡಿದ್ದಾರೆ.

31 ವರ್ಷದ ಎಡಗೈ ಮಧ್ಯಮ ವೇಗಿ ಜೈದೇವ್ ಉನಾದ್ಕಟ್ ಸೌರಾಷ್ಟ್ರ ತಂಡದ ನಾಯಕನೂ ಹೌದು. ಈ ವರ್ಷ ಸೌರಷ್ಟ್ರ ತಂಡಕ್ಕೆ ಇತಿಹಾಸದಲ್ಲೇ ಮೊದಲ ಬಾರಿ ವಿಜಯ್ ಹಜಾರೆ ಟ್ರೋಫಿ ಗೆಲ್ಲಿಸಿಕೊಟ್ಟಿದ್ದ ಉನಾದ್ಕಟ್ ಅದಕ್ಕೂ ಹಿಂದೆ ಮೊದಲ ಬಾರಿ ರಣಜಿ ಟ್ರೋಫಿ ಗೆದ್ದುಕೊಟ್ಟಿದ್ದರು. 12 ವರ್ಷಗಳ ಹಿಂದೆಯೇ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ಉನಾದ್ಕಟ್ 2010 ಡಿಸೆಂಬರ್’ನಲ್ಲಿ ದಕ್ಷಿಣ ಆಫ್ರಿಕಾದ ಸೆಂಚುರಿಯನ್’ನಲ್ಲಿ ತಮ್ಮ ವೃತ್ತಿಜೀವನದ ಮೊಟ್ಟ ಮೊದಲ ಟೆಸ್ಟ್ ಪಂದ್ಯವಾಡಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಆ ಟೆಸ್ಟ್ ಪಂದ್ಯದಲ್ಲಿ 26 ಓವರ್ ಬೌಲಿಂಗ್ ಮಾಡಿದರೂ ಒಂದೇ ಒಂದು ವಿಕೆಟ್ ಪಡೆಯಲು ಉನಾದ್ಕಟ್ ವಿಫಲರಾಗಿದ್ದರು. ಅದೇ ಪಂದ್ಯದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಟೆಸ್ಟ್ ಕ್ರಿಕೆಟ್’ನಲ್ಲಿ 50ನೇ ಶತಕ ಬಾರಿಸಿದ್ದರು.

ಆದರೆ ಆ ಪಂದ್ಯದ ನಂತರ ಜೈದೇವ್’ಗೆ ಭಾರತ ಪರ ಮತ್ತೆ ಟೆಸ್ಟ್ ಆಡುವ ಅವಕಾಶ ಸಿಕ್ಕಿರಲಿಲ್ಲ. ಆದರೂ ನಂಬಿಕೆ ಕಳೆದುಕೊಳ್ಳದ ಜೈದೇವ್ ಉನಾದ್ಕಟ್ ದೇಶೀಯ ಕ್ರಿಕೆಟ್’ನಲ್ಲಿ ಉತ್ತಮ ಪ್ರದರ್ಶನ ತೋರುತ್ತಲೇ ಬಂದಿದ್ದರು. ಉನಾದ್ಕಟ್ ಅವರ ಕಠಿಣ ಪರಿಶ್ರಮಕ್ಕೆ ಈಗ ಫಲ ಸಿಕ್ಕಿದೆ.

ಇದನ್ನೂ ಓದಿ : Suryakumar Yadav: ರಣಜಿ ಪಂದ್ಯದಲ್ಲೂ ಮುಂದುವರಿದ “ಸೂರ್ಯ” ಶಿಕಾರಿ, ಹತ್ತೇ ರನ್ನಿಂದ ಸೆಂಚುರಿ ಮಿಸ್, ಸಿಗಲಿದ್ಯಾ ಟೆಸ್ಟ್ ಕ್ಯಾಪ್..?

ಇದನ್ನೂ ಓದಿ : IPL 2023 Auction : ನಾಳೆ ಐಪಿಎಲ್ ಆಟಗಾರರ ಹರಾಜು: ಫ್ರಾಂಚೈಸಿಗಳ ಕಣ್ಣು ಯಾರ ಮೇಲೆ..? ಹರಾಜು ಸಮಯ, Live ಟೆಲಿಕಾಸ್ಟ್.. ಇಲ್ಲಿದೆ ಕಂಪ್ಲೀಟ್ ಮಾಹಿತಿ

ಇದನ್ನೂ ಓದಿ : Rahul Kohli Drinks Tender Coconut : ಬಾಂಗ್ಲಾದೇಶದಲ್ಲಿ ಎಳನೀರು ಕುಡಿದ ಟೀಮ್ ಇಂಡಿಯಾ ಕ್ಯಾಪ್ಟನ್ ರಾಹುಲ್, ಕಿಂಗ್ ಕೊಹ್ಲಿ

Jaydev Unadkat: A chance to play Test for India after 12 years, this is the story of Chhaladankamalla of Souravshatra

Comments are closed.