India Covid 19 Update: ಬರೋಬ್ಬರಿ 27 ದಿನಗಳ ನಂತರ ಭಾರತದಲ್ಲಿ 10 ಲಕ್ಷದೊಳಗೆ ಬಂದ ಕೊರೊನಾ ಸೋಂಕಿತರ ಸಂಖ್ಯೆ

ಬರೋಬ್ಬರಿ 27 ದಿನಗಳ ನಂತರ ಭಾರತದಲ್ಲಿ (India Covid 19 Update) ಕೊರೊನಾ ಸೋಂಕಿತರ ಸಂಖ್ಯೆ 10 ಲಕ್ಷದೊಳಗೆ ಬಂದಿದೆ. ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಪತ್ತೆಯಾದ ಕೊರೊನಾ ಪ್ರಕರಣಗಳ ಸಂಖ್ಯೆಯನ್ನೂ ಸೇರಿಸಿದರೆ ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 9,94,891 ಇದ್ದು, ಒಟ್ಟಾರೆ ಪ್ರಕರಣದಲ್ಲಿ ಇದರ ಪ್ರಮಾಣ ಶೇಕಡಾ 2.35 ರಷ್ಟಿದೆ. ಕಳೆದ 24 ಗಂಟೆಗಳಲ್ಲಿ 67,597 ಪ್ರಕರಣಗಳು ದೃಢಪಟ್ಟಿದ್ದು, ಸೋಮವಾರಕ್ಕಿಂತ ಶೇ. 19ರಷ್ಟು ಕಡಿಮೆ ಆಗಿದೆ. ಒಟ್ಟಾರೆ ಪ್ರಕರಣಗಳ ಸಂಖ್ಯೆ 4,23,39,611 ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ (Central Health Department) ತಿಳಿಸಿದೆ. ಭಾರತದಲ್ಲಿ ಕೊರೊನಾ ದೈನಂದಿನ ಪಾಸಿಟಿವಿಟಿ ದರ ಶೇ. 5ಕ್ಕೆ ಇಳಿದಿದೆ.

ಕಳೆದ 24 ಗಂಟೆಗಳಲ್ಲಿ ಒಟ್ಟು 1,80,456 ಸೋಂಕಿತರು ಕೊರೊನಾದಿಂದ ಚೇತರಿಕೆ ಕಂಡಿದ್ದು, ಇವರ ಪ್ರಮಾಣ ಶೇ. 96.46 ಆಗಿದೆ. 13,46,543 ಕೋವಿಡ್ ಪರೀಕ್ಷೆಗಳನ್ನು ಕಳೆದ 24 ಗಂಟೆಗಳಲ್ಲಿ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಮಂಗಳವಾರ 1,188 ಕೋವಿಡ್ ಮರಣ ದಾಖಲಾಗಿದ್ದು, ಸೋಮವಾರಕ್ಕಿಂತ ಅಧಿಕವಾಗಿದೆ. ಕೇರಳದಲ್ಲಿ ಸಾವಿನ ಕ್ರೋಢೀಕರಣದಿಂದ ಬಿಟ್ಟು ಹೋಗಿದ್ದ 733 ಮರಣಗಳ ಸಂಖ್ಯೆಯನ್ನು ಸೇರಿಸಿರುವುದು ಅಡಕ ಮಾಡಿರುವುದರಿಂದ ಸಾವಿನ ಸಂಖ್ಯೆಯಲ್ಲಿ ಹೆಚ್ಚಳ ಆಗಿದೆ ಎಂದು ಸಚಿವಾಲಯ ತಿಳಿಸಿದೆ.

ಕರ್ನಾಟಕದಲ್ಲಿ 6,151 ಹೊಸ ಪ್ರಕರಣಗಳು ವ್ಯಕ್ತವಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 39,02,309ಕ್ಕೆ ತಲುಪಿದೆ. ಪಶ್ಚಿಮ ಬಂಗಾಳದಲ್ಲಿ 641 ಪ್ರಕರಣಗಳು ಕಂಡು ಬಂದಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 20,06,513ಕ್ಕೆ ಮುಟ್ಟಿದೆ. ಉತ್ತರ 24 ಪರಗಣ ಜಿಲ್ಲೆಯಲ್ಲೇ 105 ಜನರಲ್ಲಿ ಸೋಂಕು ದೃಢಪಟ್ಟಿದ್ದು, ನಗರ ಪ್ರದೇಶದಲ್ಲಿ 75 ಜನರಲ್ಲಿ ಸೋಂಕು ಖಚಿತಪಟ್ಟಿರುವುದು ದೃಢಪಟ್ಟಿದೆ.

ದೆಹಲಿಯಲ್ಲಿ 1,151 ಪ್ರಕರಣಗಳು, 15 ಸಾವು ಕಳೆದ 24 ತಾಸಿನಲ್ಲಿ ಸಂಭವಿಸಿದೆ. ಪಾಸಿಟಿವಿಟಿ ದರ ಶೇ. 2.62 ಇದೆ. ಕೊರೊನಾ ಹಾವಳಿ ತಗ್ಗಿರುವ ಕಾರಣ ಸುಪ್ರೀಂಕೋರ್ಟ್ ಬುಧವಾರ ಮತ್ತು ಗುರುವಾರ ಭೌತಿಕವಾಗಿ ವಿಚಾರಣೆಯು ಮುಂದಿನ ವಾರದಿಂದ ಆರಂಭವಾಗಲಿದೆ.

ಇದನ್ನೂ ಓದಿ: Bank Recruitment 2022: ಪದವಿ ಮುಗಿಸಿದವರಿಗೆ ಬಂಪರ್; 78,230 ರೂ.ರವರೆಗೆ ಸಂಬಳದ ಆಫರ್ ಇರುವ ಉದ್ಯೋಗ

(India Covid 19 Update corona cases drop lowest in one month)

Comments are closed.