Prepaid electricity:ರೀಚಾರ್ಜ್ ಮಾಡಿ ವಿದ್ಯುತ್ ಬಳಸಿ: ಬರಲಿದೆ ಪ್ರೀಪೇಯ್ಡ್ ಪವರ್ ಕಾಲ!

ಪ್ರೀ ಪೇಯ್ಡ್ ಮೊಬೈಲ್, ಟಿವಿ,ಡಿಟಿಎಚ್ ಕಾಲದಲ್ಲಿರೋ ಜನರಿಗೆ ಕೇಂದ್ರ ಸರ್ಕಾರ ಮತ್ತೊಂದು ಪ್ರೀ ಪೇಯ್ಡ್ ವ್ಯವಸ್ಥೆ ಒದಗಿಸಲು ಮುಂದಾಗಿದ್ದು, ಇನ್ಮುಂದೆ ನೀವು ಮೊದಲೇ ಪಾವತಿಸಿ ಅಗತ್ಯವಿರುವಷ್ಟು ವಿದ್ಯುತ್ ಖರೀದಿಸಬಹುದಾಗಿದೆ.

ದೇಶದ ಮನೆ ಮನೆಗೂ  ಪ್ರೀಪೇಯ್ಡ್ ಮೀಟರ್ ಅಳವಡಿಕೆಗೆ ಕಾಲಮಿತಿ ನಿಗದಿ ಪಡಿಸಿ ಸರ್ಕಾರ ಆದೇಶ ಹೊರಡಿಸಿದೆ. ಕೇಂದ್ರ ಇಂಧನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಘನಶ್ಯಾಮ್ ಪ್ರಸಾದ್ ಆದೇಶ ಹೊರಡಿಸಿದ್ದಾರೆ.

ಮನೆ,ಕೈಗಾರಿಕಾ ಕೇಂದ್ರಗಳಲ್ಲಿ ಈಗಿರುವ ಮೀಟರ್ ಬದಲಾಯಿಸಿ ಪ್ರೀ ಪೇಯ್ಡ್  ಮೀಟರ್ ಅಳವಡಿಸಿಕೊಳ್ಳಲು ಸೂಚನೆ ನೀಡಲಾಗಿದ್ದು,ಕೇಂದ್ರಾಡಳಿತ ಪ್ರದೇಶ ಹಾಗೂ 2019 ಮತ್ತು 20 ನೇ ಸಾಲಿನಲ್ಲಿ ಶೇ 15 ಕ್ಕಿಂತ ಹೆಚ್ಚಿನ ಟ್ರಾನ್ಸಮಿಷನ್ ವಿದ್ಯುತ್ ನಷ್ಟ ಅನುಭವಿಸುತ್ತಿರುವ ನಗರಗಳಲ್ಲಿ  ಹಾಗೂ ಉಳಿದ ವಿಭಾಗಗಳಲ್ಲಿ ಶೇ 25 ರಷ್ಟು ಟ್ರಾನ್ಸಮಿಷನ್ ವಿದ್ಯುತ್ ನಷ್ಟ ಅನುಭವಿಸುತ್ತಿರುವ ಕಡೆಗಳಲ್ಲಿ ಹಾಗೂ ಎಲ್ಲಾ ಬ್ಲಾಕ್ ಮಟ್ಟದ ಸರ್ಕಾರಿ ಕಚೇರಿಯಲ್ಲಿ ,ಕೈಗಾರಿಕೆಗಳಲ್ಲಿ ವಾಣಿಜ್ಯ ಗ್ರಾಹಕರು 2023 ಡಿಸೆಂಬರ್ ಒಳಗೆ ಪ್ರೀ ಪೇಮೆಂಟ್ ನ ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯ.

ಉಳಿದ ಎಲ್ಲರೂ 2025 ರ ಮಾರ್ಚ್ ತಿಂಗಳೊಳಗಾಗಿ ಪ್ರೀ ಪೇಯ್ಡ್ ಮೀಟರ್ ಅಳವಡಿಸಿಕೊಳ್ಳಬೇಕು. ಕೃಷಿ ವಿದ್ಯುತ್ ಬಳಕೆದಾರರನ್ನು ಈ ನಿಯಮದಿಂದ ಹೊರಗಿಡಲಾಗಿದೆ. ವಿದ್ಯುತ್ ವಿತರಣಾ ಕಂಪನಿಗಳಿಗೂ ಇದೇ ನಿಯಮ ಅನ್ವಯವಾಗಲಿದ್ದು, 2022 ರ ಡಿಸೆಂಬರ್ ಕಾಲಮಿತಿ ನೀಡಲಾಗಿದೆ.

ವಿದ್ಯುತ್ ಸೋರಿಕೆಯನ್ನು ತಡೆಗಟ್ಟುವುದು, ವಿದ್ಯುತ್ ಮಿತಬಳಕೆಯ ಜ್ಞಾನವನ್ನು ಹೆಚ್ಚಿಸುವುದು ಹಾಗೂ ನಷ್ಟದಲ್ಲಿರುವ ವಿದ್ಯುತ್ ಉತ್ಪಾದನಾ ವಲಯಗಳ ಸುಧಾರಣೆ ಕಾರಣಕ್ಕೆ ಈ ಯೋಜನೆ ಜಾರಿಗೆ ಬಂದಿದ್ದು, ರೈತ ವಲಯದಿಂದ ಇದಕ್ಕೆ ವಿರೋಧ ವ್ಯಕ್ತವಾಗಿದೆ.

Comments are closed.