T20 World cup : ವಿಶ್ವಕಪ್‌ನಲ್ಲಿ ಮೊದಲ ಗೆಲುವು ಕಂಡ ಟೀಂ ಇಂಡಿಯಾ : ರಾಹುಲ್‌ – ರೋಹಿತ್‌ ದಾಖಲೆಯ ಜೊತೆಯಾಟ

ದುಬೈ : T20 ವಿಶ್ವಕಪ್ ನಲ್ಲಿ ಭಾರತ ಮೊದಲ ಗೆಲುವು ಕಂಡಿದೆ. ಅಫ್ಘಾನಿಸ್ತಾನ ತಂಡದ ವಿರುದ್ದದ ಪಂದ್ಯದಲ್ಲ ರಾಹುಲ್‌ ಹಾಗೂ ರೋಹಿತ್‌ ಶರ್ಮಾ ದಾಖಲೆಯ ಜೊತೆಯಾಟದ ನೆರವಿನಿಂದ ಟೀಂ ಇಂಡಿಯಾದ 66ರನ್‌ಗಳ ಗೆಲುವು ದಾಖಲಿಸಿದೆ. ಈ ಮೂಲಕ ವಿಶ್ವಕಪ್‌ ಪಾಯಿಂಟ್ಸ್‌ ಪಟ್ಟಿಯಲ್ಲಿ ಎರಡು ಅಂಕ ಗಳಿಸಿದೆ.

ಅಬುಧಾಬಿಯ ಶೇಖ್ ಝಯೇದ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಟಿ20 ವಿಶ್ವಕಪ್​ನ 33ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಅಫ್ಘಾನಿಸ್ತಾನ (India vs Afghanistan) ವಿರುದ್ಧ 66 ರನ್​ಗಳ ಭರ್ಜರಿ ಜಯ ಸಾಧಿಸಿತು. ಮೊದಲು ಬ್ಯಾಟಿಂಗ್‌ ಗೆ ಇಳಿದ ಟೀಂ ಇಂಡಿಯಾ ಪರ ಕನ್ನಡಿಗ ಕೆ.ಎಲ್.ರಾಹುಲ್‌ ಹಾಗೂ ರೋಹಿತ್‌ ಶರ್ಮಾ ಅದ್ಬುತ ಜೊತೆಯಾಟವಾಡಿದ್ದಾರೆ. ಅಫ್ಘಾನಿಸ್ತಾನ ತಂಡ ಬೌಲರ್‌ಗಳನ್ನು ಇನ್ನಿಲ್ಲದಂತೆ ಬೆಂಡೆತ್ತಿದ್ದ ಕೆ.ಎಲ್.ರಾಹುಲ್‌ ಹಾಗೂ ರೋಹಿತ್‌ ಶರ್ಮಾ ಮೊದಲ ವಿಕೆಟಿಗೆ 14.4 ಓವರ್‌ಗಳಲ್ಲಿ 140 ರನ್‌ ಬಾರಿಸಿದ್ದಾರೆ. ಟಿ20 ಇತಿಹಾಸದಲ್ಲಿ ಭಾರತದ ಮೊದಲ ವಿಕೇಟ್‌ಗೆ ದಾಖಲಾದ ಅತ್ಯಧಿಕ ಮೊತ್ತವಾಗಿದೆ. ಈ ಹಿಂದೆ ಇಂಗ್ಲೆಂಡ್‌ ಎದುರಿನ 2007ರ ಡರ್ಬನ್‌ ಪಂದ್ಯದಲ್ಲಿ ಸೆಹ್ವಾಗ್- ಗಂಭೀರ್‌ 136 ರನ್‌ ದಾಖಲೆ ಪತನವಾಗಿದೆ.

ಕೇವಲ 47 ಎಸೆತಗಳಿಂದ 74 ರನ್‌ ಹಾಗೂ ರಾಹುಲ್‌ 49 ಎಸೆತಗಳಿಂದ 69ರನ್‌ ಬಾರಿಸಿದ್ದಾರೆ. ಮೊದಲ ವಿಕೇಟ್‌ ಪತನದ ಬೆನ್ನಲ್ಲೇ ಜೊತೆಯಾದ ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಅಬ್ಬರದ ಬ್ಯಾಟಿಂಗ್‌ ನೆರವಿನಿಂದ ಟೀಂ ಇಂಡಿಯಾ 210 ರನ್‌ ಗಳಿಸಿತ್ತು. ದಾಖಲೆಯ ಮೊತ್ತವನ್ನು ಬೆನ್ನತ್ತಿದ ಅಫ್ಘಾನಿಸ್ತಾನ ತಂಡಕ್ಕೆ ಪ್ರತಿರೋಧ ಒಡ್ಡಲು ಸಾಧ್ಯವಾಗಲಿಲ್ಲ.

ಆರ್.ಅಶ್ವಿನ್‌ ಎರಡು ವಿಕೆಟ್‌ ಪಡೆದ್ರೆ, ಮೊಹಮದ್‌ ಸೆಮಿ ಮೂರು ವಿಕೆಟ್‌ ಪಡೆದುಕೊಂಡಿದ್ದಾರೆ. ಅಶ್ವಿನ್‌ ಹಾಗೂ ಸೆಮಿ ಮಾರಕ ದಾಳಿಗೆ ತತ್ತರಿಸಿದ ಅಫ್ಘಾನಿಸ್ತಾನ ತಂಡ ಸೋಲನ್ನು ಒಪ್ಪಿಕೊಂಡಿತ್ತು. ಪಾಯಿಂಟ್ಸ್‌ ಪಟ್ಟಿಯಲ್ಲಿ ಭಾರತ ಸದ್ಯ ನಾಲ್ಕನೇ ಸ್ಥಾನದಲ್ಲಿದೆ. ಇತರ ತಂಡಗಳ ಸೋಲು ಗೆಲುವಿನ ಲೆಕ್ಕಾಚಾರ ಭಾರತದ ಸೆಮಿಫೈನಲ್‌ ಭವಿಷ್ಯವನ್ನು ನಿರ್ಧಾರ ಮಾಡಲಿದೆ. ಭಾರತ ಸ್ಕಾಟ್ಲೆಂಡ್‌ ಹಾಗೂ ನಮೀಬಿಯಾ ವಿರುದ್ದ ಸೆಣೆಸಾಡಲಿದೆ, ಭಾರತ ಎರಡು ತಂಡಗಳ ನಡುವಿನ ಪಂದ್ಯದಲ್ಲಿ ಅತ್ಯಧಿಕ ರನ್‌ರೇಟ್‌ನಿಂದ ಗೆಲುವು ದಾಖಲಿಸಬೇಕು. ಜೊತೆಗೆ ನ್ಯೂಜಿಲೆಂಡ್‌ ತಂಡ ಅಪ್ಘಾನಿಸ್ತಾನದ ವಿರುದ್ದ ಸೋಲನ್ನು ಕಂಡ್ರೆ ಭಾರತ ರನ್‌ ರೇಟ್‌ ಆಧಾರದ ಮೇಲೆ ಸೆಮಿಫೈನಲ್‌ಗೆ ಲಗ್ಗೆ ಇಡುವ ಸಾಧ್ಯತೆಯಿದೆ.

ಇದನ್ನೂ ಓದಿ : ಯುವಿ ಅಭಿಮಾನಿಗಳಿಗೆ ಸಿಹಿ ಸುದ್ದಿ : ಟೀಂ ಇಂಡಿಯಾಗೆ ವಾಪಾಸಾಗ್ತಾರೆ ಯುವರಾಜ್‌ ಸಿಂಗ್

ಇದನ್ನೂ ಓದಿ : ರಾಹುಲ್‌ ದ್ರಾವಿಡ್‌ ಟೀಂ ಇಂಡಿಯಾ ಮುಖ್ಯ ಕೋಚ್‌ : ಬಿಸಿಸಿಐ ಆದೇಶ

( T20 World Cup Rohit Sharma and KL Rahul new Record against Afghanistan and india won by 66 runs, chances to reach semi final )

Comments are closed.