Sonu Sood : ಸೋನು ಸೂದ್ ನಿವಾಸದಲ್ಲಿ ಮುಂದುವರಿದ ಐಟಿ ಪರಿಶೀಲನೆ: ಬರೋಬ್ಬರಿ 20 ಕೋಟಿ ವಂಚನೆ ಆರೋಪ

ಮುಂಬೈ : ಕೋವಿಡ್-19 ಸಂತ್ರಸ್ಥರಿಗೆ ನೆರವಾಗುವ ಮೂಲಕ ಆಪ್ತರಕ್ಷಕ್ ಎನ್ನಿಸಿದ್ದ ಬಾಲಿವುಡ್ ನಟ ಸೋನು ಸೂದ್ ಮೇಲೆ 20 ಕೋಟಿ ತೆರಿಗೆ ವಂಚನೆ ಆರೋಪ ಕೇಳಿಬಂದಿದೆ. ಐಟಿ ದಾಳಿ ನಡೆದ ಎರಡು ದಿನಗಳ ಬಳಿಕ ಸೋನು ಸೂದ್ ಹಾಗೂ ಸಹಚರರು 20 ಕೋಟಿ ವಂಚನೆ ಎಸಗಿದ್ದಾರೆ ಎನ್ನಲಾಗುತ್ತಿದೆ.

ಮುಂಬೈನಲ್ಲಿ ನಟ ಸೋನು ಸೂದ್ ಸೇರಿದ ಒಟ್ಟು 6 ಸ್ಥಳಗಳ ಮೇಲೆ ಐಟಿ ದಾಳಿ ನಡೆದಿತ್ತು. ಇದಲ್ಲದೇ ಲಕ್ನೋ ಸೇರಿದಂತೆ ಹಲವೆಡೆ ಸೋನು ಸೂದ್ ಹಾಗೂ ಅವರ ಪಾಲುದಾರಿಕೆ ಯ ಕೈಗಾರಿಕೆಗಳ ಮೇಲೂ ದಾಳಿ ನಡೆದಿದೆ. ಇದುವರೆಗೂ ನಡೆದಿರುವ ದಾಖಲೆಗಳ ಪರಿಶೀಲನೆ ಪ್ರಕಾರ ಮೇಲ್ನೋಟಕ್ಕೆ 20 ಕೋಟಿ ರೂಪಾಯಿ ತೆರಿಗೆ ವಂಚಿಸಿರುವುದು ಬೆಳಕಿಗೆ ಬಂದಿದೆ. ಹೆಚ್ಚಿನ ಮಾಹಿತಿ ಇಡಿ ತನಿಖೆ ಪೂರ್ಣಗೊಳಿಸಿದ ಬಳಿಕ ಲಭ್ಯವಾಗಲಿದೆ.

ಸೋನು ಸೂದ್ ಗೆ ಸೇರಿದ ಮುಂಬೈ, ಲಕ್ನೋ, ಕಾನ್ಪುರ, ಜೈಪುರ, ದೆಹಲಿ ಮತ್ತು ಗುರುಗ್ರಾವ್ ಗಳಲ್ಲಿರುವ ಒಟ್ಟು 28 ಕಚೇರಿಗಳು, ಮನೆ, ಆಪ್ತರ ನಿವಾಸದ ಮೇಲೂ ಐಟಿ ಅಧಿಕಾರಿ ಗಳು ದಾಳಿ ನಡೆಸಿದ್ದರು. ಬುಧವಾರದಿಂದ ದಾಳಿ ಆರಂಭಗೊಂಡಿದ್ದು, ಇನ್ನು ಪರಿಶೀಲನೆ ನಡೆದಿದೆ.

2019 ರ ಕೊರೋನಾ ಲಾಕ್ ಡೌನ್ ವೇಳೆ ಸಾವಿರಾರು ಪ್ರಯಾಣಿಕರನ್ನು ತಮ್ಮ ಊರುಗಳಿಗೆ ಸೇರಿಸುವುದು ಸೇರಿದಂತೆ ಹಲವು ಮಾನವೀಯತೆಯ ಕೆಲಸಗಳ ಮೂಲಕ ಸೋನು ಸೂದ್ ಪ್ರಚಾರಕ್ಕೆ ಬಂದಿದ್ದರು.

ಇದನ್ನೂ ಓದಿ :‌ ಸೋನುಸೂದ್ ಟ್ರಸ್ಟ್ ಹೆಸರಿನಲ್ಲೂ ವಂಚನೆ…! ಸೋಷಿಯಲ್ ಮೀಡಿಯಾದಲ್ಲಿ ವಂಚಕರಿದ್ದಾರೆ ಎಚ್ಚರ…..!!

ಇದನ್ನೂ ಓದಿ : ದೂರದ ಮುಂಬೈನಿಂದ ಬೆಂಗಳೂರು ಪೊಲೀಸರಿಗೆ ಸಹಾಯಹಸ್ತ…! ನಟ ಸೋನುಸೂದ್ ಸಹಾಯಕ್ಕೆ ಅಪಾರ ಮೆಚ್ಚುಗೆ…!!

ಇದನ್ನೂ ಓದಿ : Sonu Sood : ಸೋನು ಸೂದ್ ಗೆ ಐಟಿ ಶಾಕ್: ನಟನಿಗೆ ಸೇರಿದ 6 ಕಡೆ ದಾಳಿ

( Actor Sonu Sood Evaded Over 20 Crore In Taxes: Income Tax Department )

Comments are closed.