Amarinder Singh : ಪಂಜಾಬ್‌ನಲ್ಲಿ ಕಾಂಗ್ರೆಸ್‌ ಬಿಕ್ಕಟ್ಟು : ಸಿಎಂ ಅಮರಿಂದರ್‌ ಸಿಂಗ್‌ ರಾಜೀನಾಮೆ ?

ಚಂಡೀಗಢ: ಪಂಜಾಬ್‌ನಲ್ಲಿ ಕಾಂಗ್ರೆಸ್‌ನಲ್ಲಿ ಬಿಕ್ಕಟ್ಟು ಎದುರಾಗಿದೆ. ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ವಿರುದ್ದ ಶಾಸಕ ತಿರುಗಿ ಬಿದ್ದಿದ್ದಾರೆ. ಇಂದು ಸಂಜೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಸಭೆಯೂ ಮುನ್ನವೇ ಸಿಎಂ ಅಮರೀಂದರ್‌ ಸಿಂಗ್‌ ರಾಜೀನಾಮೆಯನ್ನು ಸಲ್ಲಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಹಲವು ಸಮಯಗಳಿಂದಲೂ ಪಂಜಾಬ್‌ ಸಿಎಂ ವಿರುದ್ದ ಹಲವು ಆರೋಪಗಳು ಕೇಳಿಬರುತ್ತಿದೆ. ಇದೀಗ ಮುಂದಿನ ಚುನಾವಣೆಯ ವೇಳೆಗೆ ಸಿಎಂ ಅಮರೀಂದರ್‌ ಸಿಂಗ್‌ ಅವರ ನೇತೃತ್ವದಲ್ಲಿ ಚುನಾವಣೆಯನ್ನು ಎದುರಿಸಲು ಸಾಧ್ಯವಿಲ್ಲ. ಹೀಗಾಗಿ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡುವಂತೆ ಈಗಾಗಲೇ ಕಾಂಗ್ರೆಸ್‌ ಪಕ್ಷದ ಸುಮಾರು 40 ಶಾಸಕರು ಎಐಸಿಸಿಗೆ ಪತ್ರ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಸಂಜೆ 5 ಗಂಟೆಗೆ ಶಾಸಕಕಾಂಗ ಪಕ್ಷದ ಸಭೆಯನ್ನು ಕರೆಯಲಾಗಿದೆ.

ಇಂದು ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿಎಂ ಅಮರೀಂದರ್‌ ಸಿಂಗ್‌ ವಿರುದ್ದ ಶಾಸಕರು ಅವಿಶ್ವಾಸನ ಮಂಡನೆ ಮಾಡುವ ಸಾಧ್ಯತೆಯಿದ್ದು, ಸಿಎಂ ಬದಲಾವಣೆಗೆ ಅಮರೀಂದರ್‌ ಸಿಂಗ್‌ ವಿರೋಧಿ ಪಾಳಯ ಪಟ್ಟು ಹಿಡಿಯಲು ಪ್ಲ್ಯಾನ್‌ ಸಿದ್ದವಾಗಿದೆ. ಇದೇ ಕಾರಣಕ್ಕೆ ಸಂಜೆ ನಾಲ್ಕು ಗಂಟೆಗೆ ಅಮರೀಂದರ್‌ ಸಿಂಗ್‌ ಅವರು ರಾಜ್ಯಪಾಲರನ್ನು ಭೇಟಿಯಾಗಿ ರಾಜೀನಾಮೆಯನ್ನು ಸಲ್ಲಿಕೆ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಸಿಎಂ ಅಮರೀಂದರ್‌ ಸಿಂಗ್‌ ಅವರನ್ನು ಸಿಎಂ ಮಾಡುವ ಹೊತ್ತಲೇ ಕಾಂಗ್ರೆಸ್‌ ಯುವನಾಯಕ ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಅವರಿಗೆ ಮನಸ್ಸು ಇರಲಿಲ್ಲ. ಆದ್ರೆ ಸೋನಿಯಾ ಗಾಂಧಿ ಅವರ ಜೊತೆಗೆ ಉತ್ತಮ ಬಾಂಧವ್ಯ ಹೊಂದಿರುವ ಕಾರಣಕ್ಕೆ ಸಿಎಂ ಆಗಿ ನೇಮಕ ಮಾಡಲಾಗಿತ್ತು. ಈ ನಡುವಲ್ಲೇ ನವಜೋತ್‌ ಸಿಂಗ್‌ ಸಿದ್ದು ಅವರು ಕೂಡ ಸಿಎಂ ಅಮರೀಂದರ್‌ ಸಿಂಗ್‌ ಅವರ ವಿರುದ್ದ ತಿರುಗಿ ಬೀಳುತ್ತಲೇ ಅವರನ್ನು ಪಂಜಾಬ್‌ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು.

ಕಾಂಗ್ರೆಸ್‌ ಬಿಕ್ಕಟ್ಟು ಎದುರಾದ ಬೆನ್ನಲ್ಲೇ ಸಿಎಂ ಅಮರೀಂದರ್‌ ಸಿಂಗ್‌ ಅವರು ಸೋನಿಯಾ ಗಾಂಧಿ ಅವರ ಜೊತೆಗೂ ಕೂಡ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಒಂದೊಮ್ಮೆ ಅಮರೀಂದರ್‌ ಸಿಂಗ್‌ ಅವರು ರಾಜೀನಾಮೆಯನ್ನು ಸಲ್ಲಿಸಿದ್ರೆ, ಇಂದು ನಡೆಯುವ ಶಾಸಕಾಂಗ ಸಭೆಯಲ್ಲಿ ಹೊಸ ಸಿಎಂ ಆಯ್ಕೆ ನಡೆಯಲಿದ್ದು, ನವಜೋತ್‌ ಸಿಂಗ್‌ ಸಿದ್ದು ಸಿಎಂ ಆಗಬಹುದು ಎನ್ನಲಾಗುತ್ತಿದೆ. ಅಲ್ಲದೇ ಗಾಂಧಿ ಕುಟುಂಬದ ನಿಷ್ಠಾವಂತ ಎನಿಸಿಕೊಂಡಿರುವ ಸುನಿಲ್‌ ಜಖರ್‌ ಹೆಸರು ಕೇಳಿಬರುತ್ತಿದೆ. ಇಂದು ನಡೆಯುವ ಶಾಸಕಾಂಗ ಸಭೆಗೆ ಕಾಂಗ್ರೆಸ್‌ ಈಗಾಗಲೇ ರಾಜಸ್ತಾನದ ಮಾಝಿ ಸಚಿವ ಹರೀಶ್‌ ಔಧರಿ ಹಾಗೂ ಅಜಯ್‌ ಮಾಕನ್‌ ಅವರನ್ನು ವೀಕ್ಷಕರನ್ನಾಗಿ ಕಳುಹಿಸಿಕೊಟ್ಟಿದೆ.

ಇದನ್ನೂ ಓದಿ : ಸೋನು ಸೂದ್ ನಿವಾಸದಲ್ಲಿ ಮುಂದುವರಿದ ಐಟಿ ಪರಿಶೀಲನೆ: ಬರೋಬ್ಬರಿ 20 ಕೋಟಿ ವಂಚನೆ ಆರೋಪ

ಇದನ್ನೂ ಓದಿ : ಖ್ಯಾತ ವಿಜ್ಞಾನಿ ಪ್ರೊ. ತನು ಪದ್ಮನಾಭನ್ ನಿಧನ: ಹೃದಯಾಘಾತದಿಂದ ಇಹಲೋಕ ತ್ಯಜಿಸಿದ ಖಗೋಳಶಾಸ್ತ್ರಜ್ಞ

ಇದನ್ನೂ ಓದಿ : ಯೂಟ್ಯೂಬ್ ನಿಂದ ತಿಂಗಳಿಗೆ ನಾಲ್ಕು ಲಕ್ಷ ಆದಾಯ ಪಡೀತಾರಂತೆ ಸೆಂಟ್ರಲ್ ಮಿನಿಸ್ಟರ್ ನಿತಿನ್ ಗಡ್ಕರಿ

(Punjab Congaress Crisis, Possibility of Amarinder Singh stepping down as CM may have come up)

Comments are closed.