Ranjani Raghvan: ಕಥಾಸಂಕಲನ ಬಿಡುಗಡೆಗೆ ಸಿದ್ಧವಾದ ಕನ್ನಡತಿ: ಸಾಹಿತ್ಯ ಲೋಕಕ್ಕೆ ಪುಟ್ಟಗೌರಿ ಎಂಟ್ರಿ

ಅವಧಿ ಮೂಲಕ ಕತೆಗಾರ್ತಿಯಾಗಿದ್ದ ಕನ್ನಡ ಧಾರಾವಾಹಿ ನಟಿ ರಂಜನಿ ರಾಘವನ್ ತಮ್ಮ ಚೊಚ್ಚಲ ಪುಸ್ತಕ ಬಿಡುಗಡೆಯ ಸಂಭ್ರಮದಲ್ಲಿದ್ದಾರೆ. ಈ ಖುಷಿಯನ್ನು ಸ್ವತಃ ನಟಿ ರಂಜನಿ ರಾಘವನ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಕಳೆದ ಹಲವು ತಿಂಗಳಿನಿಂದ ಅವಧಿ ವೆಬ್ ಸೈಟ್ ನಲ್ಲಿ  ನಟಿ ರಂಜನಿ ರಾಘವನ್ ಬರೆದ ಕತೆಗಳು ಪ್ರಕಟವಾಗುತ್ತಿದ್ದವು. ಪ್ರತಿ ಶುಕ್ರವಾರ ವಿವಿಧ ವಿಷಯಗಳ ಮೇಲೆ ಪ್ರಬುದ್ಧ ಕತೆಗಳನ್ನು ರಚಿಸಿ ಪ್ರಕಟಿಸಿದ ರಂಜನಿ ರಾಘವನ್ ಓದುಗರ ಮನಗೆದ್ದಿದ್ದರು.

ರಂಜನಿ ರಾಘವನ್ ಕತೆ ಓದಿದ ಹಲವರು ನೀವ್ಯಾಕೆ ಈ ಕತೆಗಳನ್ನೆಲ್ಲ ಒಟ್ಟು ಸೇರಿಸಿ ಪುಸ್ತಕ ಪ್ರಕಟಿಸಬಾರದೆಂದು ಕೇಳಿದ್ದರಂತೆ. ಈಗ ಓದುಗರ ಹಾರೈಕೆ ನಿಜವಾಗುತ್ತಿದೆ. ಪುಸ್ತಕವೊಂದನ್ನು ಪ್ರಕಟಿಸುವ ಕುರಿತು ಕನಸಿನಲ್ಲಿಯೂ ಯೋಚಿಸದ ನನ್ನ ಮೊದಲ ಪುಸ್ತಕ ಪ್ರಕಟಣೆಗೆ ಸಿದ್ಧವಾಗುತ್ತಿದೆ ಎಂದು ರಂಜನಿ ಸೋಷಿಯಲ್ ಮೀಡಿಯಾದಲ್ಲಿ ಹೇಳಿದ್ದಾರೆ.

ಬಹುರೂಪಿ ಪ್ರಕಾಶನ ರಂಜನಿ ರಾಘವನ್ 15 ಕತೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುತ್ತಿದೆ. ಹಿರಿಯ ಪತ್ರಕರ್ತ ಜಿ.ಎನ್.ಮೋಹನ್ ಸಂಪಾದಕರಾಗಿರುವ ಅವಧಿಯಲ್ಲಿ ಕತೆಗಾರ್ತಿಯಾಗಿ ಗುರುತಿಸಿಕೊಂಡಿದ್ದ ರಂಜನಿ ಈಗ ಕಥಾಸಂಕಲನದ ಮೂಲಕ ಸಾಹಿತ್ಯ ಲೋಕಕ್ಕೆ ಎಂಟ್ರಿಕೊಡುತ್ತಿದ್ದಾರೆ.

ನಟನೆಯ ವಿಚಾರಕ್ಕೆ ಬರೋದಾದರೇ ಸದ್ಯ ಕನ್ನಡತಿ ಸೀರಿಯಲ್ ನಲ್ಲಿ ಕನ್ನಡಿಗರ ಮನಗೆದ್ದಿರುವ ರಂಜನಿ, ಹಕೂನ್ ಮಟಟ ವೆಬ್ ಸೀರಿಸ್ ನಲ್ಲೂ ನಟಿಸುತ್ತಿದ್ದಾರೆ. ಅಲ್ಲದೇ ಇತ್ತೀಚಿಗಷ್ಟೇ ಅವರು ನಟಿಸಿದ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಸಿನಿಮಾ ಬಿಡುಗಡೆಯಾಗಿದೆ.

Actress ranjani raghavan publishing book of his stories

Comments are closed.