ಧಾರಾಕಾರ ಮಳೆಗೆ ನಲುಗಿದ ಮುತ್ತಿನ ನಗರಿ : ಹೈದರಾಬಾದ್‌ ಪ್ರವಾಹದಲ್ಲಿ ಕೊಚ್ಚಿ ಹೋದ ವಾಹನಗಳು

ಹೈದರಾಬಾದ್ : ಭಾರಿ ಮಳೆಯಿಂದಾಗಿ ಮುತ್ತಿನ ನಗರಿ ಹೈದರಾಬಾದ್‌ನಲ್ಲಿ ಪ್ರವಾಹದ ಪರಿಸ್ಥಿತಿಯುಂಟಾಗಿತ್ತು. ರೆಸ್ಟೋರೆಂಟ್‌ವೊಂದಕ್ಕೆ ನೀರು ನುಗ್ಗಿದ್ದರೆ, ಪ್ರವಾಹದಲ್ಲಿ ಸರಕು ತುಂಬಿದ ವಾಹನಗಳು ಕೊಚ್ಚಿ ಹೋಗಿವೆ. ಇನ್ನು ಪ್ರವಾಹದಲ್ಲಿ ಇಬ್ಬರು ವ್ಯಕ್ತಿಗಳು ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ.

ನಿನ್ನೆ ರಾತ್ರಿ 8:30 ರಿಂದ 11:00 ಗಂಟೆಯವರೆಗೂ 10-12 ಸೆಂ.ಮೀ. ಮಳೆಯಾಗಿದೆಯೆಂದು ಹವಾಮಾನ ಇಲಾಖೆ ವರದಿಯನ್ನು ನೀಡಿದೆ. ಪ್ರವಾಹ ಪರಿಸ್ಥಿತಿಯಿಂದಾಗಿ ತಗ್ಗು ಪ್ರದೇಶ ಗಳ ಮನೆಗಳಿಗೆ ಹೆಚ್ಚಿನ ಪ್ರಮಾಣದ ನೀರು ನುಗ್ಗಿದ್ದು ಅಲ್ಲಿನ ನಿವಾಸಿಗಳು ಪರದಾಡುವಂತಾಗಿತ್ತು. ಅದ್ರಲ್ಲೂ ಚಿಂತಲಕುಂಟ ಪ್ರದೇಶದಲ್ಲಿ ಒಬ್ಬ ವ್ಯಕ್ತಿಯು ಮಳೆನೀರಿನಲ್ಲಿ ಕೊಚ್ಚಿಹೋದರೂ ನಂತರ ಯಾವುದೇ ಅಪಾಯವಿಲ್ಲದೇ ಸುರಕ್ಷಿತವಾಗಿದ್ದು ಪತ್ತೆಯಾಗಿದ್ದಾರೆ. ಆದರೆ, ಪ್ರವಾಹದಲ್ಲಿ ಕೊಚ್ಚಿಹೋದ ಇನ್ನಿಬ್ಬರು ಇನ್ನೂ ಪತ್ತೆಯಾಗಿಲ್ಲವೆಂದು ವನಸ್ಥಲಿಪುರಮ್ ಪೋಲೀಸರು ತಿಳಿಸಿದ್ದಾರೆ.

ವಿಪತ್ತು ನಿರ್ವಹಣಾ ದಳ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು, ನಾಪತ್ತೆಯಾಗಿರುವವರ ಶೋಧ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ. ಅದ್ರಲ್ಲೂ ಸರೂರ್‌ನಗರದ ಲಿಂಗೋಜಿಗುಡ ಪ್ರದೇಶದಲ್ಲಿ ಅತಿ ಹೆಚ್ಚು ಮಳೆಯಾಗಿದ್ದು 13 ಸೆಂ.ಮೀ ಮಳೆಯಾಗಿದೆಯೆಂದು ವರದಿಯಾಗಿದೆ.

ಹೈದ್ರಾಬಾದ್‌ನಲ್ಲಿ ಕಳೆದ ವರ್ಷ ಕೂಡ ಇಂತಹದ್ದೇ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಜನರು ಸಾಮಾಜಿಕ ಜಾಲತಾಣದಲ್ಲಿ ಪೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಮಳೆಯಿಂದಾಗಿರುವ ಸಮಸ್ಯೆಯ ಪರಿಹಾರಕ್ಕೆ ಸ್ಥಳೀಯ ಆಡಳಿತ ಸಹಕಾರ ನೀಡುವಂತೆ ಜನರು ಆಗ್ರಹಿಸಿದ್ದಾರೆ.

ಇದನ್ನೂ ಓದಿ : PM CARES : ಕೊರೊನಾದಿಂದ ಅನಾಥರಾದ ಮಕ್ಕಳಿಗೆ ಕೇಂದ್ರದಿಂದ 10 ಲಕ್ಷ ರೂ ಸ್ಟೈಫಂಡ್

ಇದನ್ನೂ ಓದಿ :  ಹೆದ್ದಾರಿಯಲ್ಲಿ ವೇಗದ ಮಿತಿ ಹೆಚ್ಚಳ : ಗಂಟೆಗೆ 140 ಕಿ.ಮೀ ವೇಗ ಮಿತಿಗೆ ಕೇಂದ್ರ ಚಿಂತನೆ

(Heavy rains in Hyderabad, two missing )

Comments are closed.