ನಿಮಗೆ 75 ವರ್ಷ ದಾಟಿದೆಯಾ? ನಿಮಗಿದೆ ಶುಭ ಸುದ್ದಿ , ಹಿರಿಯರು ಇನ್ಮೇಲೆ Income Tax ಪಾವತಿಸಬೇಕಿಲ್ಲ !

ನವದೆಹಲಿ : ಇದೊಂದು ಶುಭ ಸುದ್ದಿ. ಈ ವರ್ಷವೇ ಅಂದ್ರೆ 2021-22ರ ಅವಧಿಯಿಂದಲೇ ಈ ಹೊಸ ನಿಯಮ ಜಾರಿಯಲ್ಲಿದೆ. ಆದಾಯ ತೆರಿಗೆ ಇಲಾಖೆ (Income Tax Department) ಈಗಾಗಲೇ ಈ ಬಗ್ಗೆ ನೋಟಿಫಿಕೇಶನ್ ಹೊರಡಿಸಿದ್ದು 75 ವರ್ಷಕ್ಕೂ ಹೆಚ್ಚು ವಯಸ್ಸಾದ ಹಿರಿಯರು ಇನ್ನು ಮುಂದೆ ಇನ್​ಕಮ್ ಟ್ಯಾಕ್ಸ್ ಅರ್ಜಿಗಳನ್ನು ತುಂಬಿಸಬೇಕಿಲ್ಲ, ಅಂದ್ರೆ ಅವರು ಆದಾಯ ತೆರಿಗೆಯನ್ನು ಪಾವತಿಸಬೇಕಿಲ್ಲ ಎಂದು ತಿಳಿಸಲಾಗಿದೆ.

2021-22ರ ಬಜೆಟ್​ನಲ್ಲೇ ಈ ವಿಚಾರ ಪ್ರಸ್ತಾಪವಾಗಿ ಏಪ್ರಿಲ್ 1 ರಿಂದ ಈ ನಿಯಮ ಜಾರಿಯಾಗಿದೆ. ಆದ್ರೆ ಏಪ್ರಿಲ್ 1ರಿಂದಲೇ ಈ ಅನುಕೂಲ ಇದೆ. ಈ ಸಂಬಂಧ ಎಲ್ಲಾ ನಿಯಮಗಳನ್ನು ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸಸ್ ಜಾರಿ ಮಾಡಿದೆ. ಆದರೆ ಇದರಲ್ಲಿ ಕೆಲವೊಂದಷ್ಟು ನಿಯಮಗಳನ್ನು ಸೇರಿಸಲಾಗಿದೆ.

ಇದನ್ನೂ ಓದಿ: Good News : ಬಿಪಿ, ಶುಗರ್, ಕ್ಯಾನ್ಸರ್ ಸೇರಿ 39 ಔಷಧಿಗಳ ಬೆಲೆ ಕಡಿತಗೊಳಿಸಿದ ಕೇಂದ್ರ ಸರ್ಕಾರ

ಕೆಲವು ಹಿರಿಯರು ನಿರ್ದಿಷ್ಟ ಬ್ಯಾಂಕುಗಳಲ್ಲಿ ತಮ್ಮ ಆದಾಯ ತೆರಿಗೆ ಪಾವತಿ ಮಾಡುತ್ತಿದ್ದರು. ಬ್ಯಾಂಕುಗಳು ಅವರ ಪೆನ್ಶನ್ ಅಥವಾ ಸರ್ಕಾರಿ ಠೇವಣಿಯಿಂದ ತೆರಿಗೆಯನ್ನು ಕಡಿತಗೊಳಿಸುತ್ತಿದ್ದರು. ಇದರಿಂದ ಅನೇಕ ಹಿರಿಯರು ಸಮಸ್ಯೆ ಎದುರಿಸುತ್ತಿದ್ದರು. ಈಗ ಹೊಸಾ ನಿಯಮಗಳಿಂದಾಗಿ ಆ ಸಮಸ್ಯೆ ನಿವಾರಣೆ ಆದಂತಾಗಿದೆ. ಪೆನ್ಶನ್ ಯಾವ ಬ್ಯಾಂಕಿನ ಖಾತೆಗೆ ಬರುತ್ತದೋ ಅದೇ ಬ್ಯಾಂಕಿನಲ್ಲಿ ವ್ಯಕ್ತಿಯ ಹೂಡಿಕೆ ಅಥವಾ ಠೇವಣಿ ಇರಬೇಕು ಎನ್ನುವುದು ನಿಯಮವಾಗಿದೆ.

ಭಾರತದ 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಸಂದರ್ಭಕ್ಕಾಗಿ 75 ವರ್ಷ ಅಥವಾ ಅದಕ್ಕಿಂತ ಹಿರಿಯ ಹಿರಿಯ ನಾಗರಿಕರಿಗೆ ಈ ವಿಶೇಷ ಸೌಕರ್ಯ ಕಲ್ಪಿಸಲಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲೇ ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದರು. ಈಗ ಇದು ಬಳಕೆಯಲ್ಲಿ ಸರಾಗವಾಗಿದೆ. ಆದಾಯ ತೆರಿಗೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ 75 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿನ ಹಿರಿಯರು ಇದರ ಫಲಾನುಭವಿಗಳು.

ಇದನ್ನೂ ಓದಿ: ಗ್ರಾಹಕರಿಗೆ ಮತ್ತೆ ಶಾಕ್‌ ಕೊಟ್ಟ ಗ್ಯಾಸ್‌ ದರ : 15 ದಿನದಲ್ಲಿ 50 ರೂಪಾಯಿ ಹೆಚ್ಚಳ

60 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಹಿರಿಯರಿಗೆ ಈಗಾಗಲೇ ಆದಾಯ ತೆರಿಗೆ ಪಾವತಿಯಲ್ಲಿ ಕೆಲವು ವಿನಾಯಿತಿ ಇದೆ. ಈಗ ಈ ಹೊಸಾ ನಿಯಮ ಅವರಿಗೆ ಮತ್ತಷ್ಟು ಅನುಕೂಲ ಮಾಡಿಕೊಟ್ಟಿದೆ. ತಾವು ಆದಾಯ ತೆರಿಗೆ ಪಾವತಿಗಾಗಿ ಲಅಎಯುವುದು ಅಥವಾ ಪೆನ್ಶನ್ ಹಣದಿಂದ ಇನ್ ಕಮ್ ಟ್ಯಾಕ್ಸ್ ಹೆಸರಿನಲ್ಲಿ ಆಗುತ್ತಿದ್ದ ಕಡಿತ ಎಲ್ಲವನ್ನೂ ಇದರಿಂದ ತಪ್ಪಿಸಿಕೊಂಡಂತಾಗಿದೆ.

(The elders don’t have to pay Income Tax anymore!)

Comments are closed.