ಗ್ರೀನ್ ಟೀ ಕುಡಿಯುವ ಅಭ್ಯಾಸವಿದೆಯಾ ? ಹಾಗಾದ್ರೆ ಕುಡಿಯುವ ಮುನ್ನ ಈ ವಿಚಾರವನ್ನು ತಿಳಿದುಕೊಳ್ಳಲೇ ಬೇಕು

0

ರಕ್ಷಾ ಬಡಾಮನೆ

ಆರೋಗ್ಯ ಚೆನ್ನಾಗಿರಬೇಕು. ರಾತ್ರಿ ಚೆನ್ನಾಗಿ ನಿದ್ರೆ ಬರಬೇಕು ಅನ್ನೋ ಕಾರಣಕ್ಕೆ ಸಾಮಾನ್ಯವಾಗಿ ಬೆಳಗ್ಗೆ ಹಾಗೂ ಮಧ್ಯಾಹ್ನ ಒಂದು ಕಪ್ ಗ್ರೀನ್ ಟೀ ಕುಡಿಯುವುದು ಹೆಚ್ಚು ಪ್ರಯೋಜನಕಾರಿ.

ಬೆಳಗಿನ ಸಮಯದಲ್ಲಿ ಗ್ರೀನ್ ಟೀ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಸಂಬಂಧಿಸಿದಂತೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಆರೋಗ್ಯದ ದೃಷ್ಠಿಯಿಂದಲೇ ಫಿಟ್ಲೆಸ್ ಪ್ರಿಯರು ಹೆಚ್ಚಾಗಿ ಗ್ರೀನ್ ಟೀ ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ.

ಬೆಳಗಿನ ಸಮಯದಲ್ಲಿ ಗ್ರೀನ್ ಟೀ ಕುಡಿಯುವುದರಿಂದ ಎಷ್ಟು ಪ್ರಯೋಜನಕಾರಿಯಾಗಿದೆಯೋ, ರಾತ್ರಿಯ ವೇಳೆಯಲ್ಲಿ ಗ್ರೀನ್ ಟೀ ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿ. ರಾತ್ರಿಯ ಹೊತ್ತಲ್ಲಿ ಗ್ರೀನ್ ಟೀ ಕುಡಿಯುವುದರಿಂದ ಅನೇಕ ಆರೋಗ್ಯ ಸಂಬಂಧಿ ಸಮಸ್ಯೆಗಳು ಉಂಟಾಗುತ್ತವೆ.

ಸಾಮಾನ್ಯವಾಗಿ ಗ್ರೀನ್ ಟೀಯಲ್ಲಿ ಫ್ಲೊವೊನಾಯ್ಡ್​ ಅಂಶಗಳು ಹೇರಳವಾಗಿದ್ದು, ಇದು ದೇಹದ ಉರಿಯೂತವನ್ನು ಕಡಿಮೆ ಮಾಡುತ್ತದೆ. ಮಾತ್ರವಲ್ಲ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವುದರ ಜೊತೆಗೆ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ.

ರಾತ್ರಿಯ ವೇಳೆಯಲ್ಲಿ ಗ್ರೀನ್ ಟೀ ಸೇವನೆ ಮಾಡುವುದರಿಂದ ನಿದ್ರೆಯ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತದೆ. ಅಲ್ಲದೇ ನಿದ್ರಾ ಹೀನತೆಯ ಸಮಸ್ಯೆಗೆ ತುತ್ತಾಗುವ ಸಾಧ್ಯತೆಯಿರುತ್ತದೆ ಎನ್ನುತ್ತಿದೆ ಸಂಶೋಧನೆ.

ಕೆಫೆನ್ ಅಂಶ ಕಾಫಿಗಿಂತಲೂ ಗ್ರೀನ್ ಟೀಯಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿದೆ. ಹೀಗಾಗಿ ಬೆಳಗಿನ ವೇಳೆಯಲ್ಲಿ ಗ್ರೀನ್ ಟೀ ಕುಡಿಯುವುದರಿಂದ ವ್ಯಕ್ತಿ ರಾತ್ರಿಯ ವೇಳೆಯಲ್ಲಿ ಚೆನ್ನಾಗಿ ನಿದ್ರೆ ಮಾಡಬಹುದಾಗಿದೆ. ಹೀಗಾಗಿ ಬೆಳಗ್ಗೆ ಮತ್ತು ಮಧ್ಯಾಹ್ನದ ಸಮಯದಲ್ಲಿ ಒಂದು ಕಪ್ ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ.

ನೀವೇನಾದ್ರೂ ನಿತ್ಯವೂ ಗ್ರೀನ್ ಟೀ ಕುಡಿಯೋ ಅಭ್ಯಾಸವನ್ನು ರೂಢಿಸಿಕೊಂಡಿದ್ರೆ ಬೆಳಗಿನ ಹೊತ್ತಲ್ಲಿ ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ. ಆದ್ರೆ ದಿನದಲ್ಲಿ ಎರಡಕ್ಕಿಂತ ಹೆಚ್ಚು ಕಪ್ ಗ್ರೀನ್ ಟೀ ಅಪಾಯವನ್ನು ತಂದೊಡ್ಡುತ್ತದೆ. ಹೀಗಾಗಿ ಇನ್ಮುಂದೆ ಗ್ರೀನ್ ಟೀ ಕುಡಿಯೋ ಮೊದಲು ಬೀ ಕೇರ್ ಪುಲ್.

ಇದನ್ನೂ ಓದಿ : ಹೃದಯಾಘಾತ ದಿಢೀರ್ ಬರುವುದಿಲ್ಲ : ಮೊದಲೇ ತಿಳಿಯುತ್ತೆ !

ಇದನ್ನೂ ಓದಿ : ಸ್ನಾಯುಗಳ ಉತ್ತಮ ಆರೈಕೆಗಾಗಿ ಪ್ರೋಟೀನ್ ನ ಅಗತ್ಯತೆ

( Is there a habit of drinking green tea? You should know this before drinking it )

Leave A Reply

Your email address will not be published.