PM Modi to US : ಸೆ.23ಕ್ಕೆ ಮೋದಿ ಅಮೇರಿಕಾ ಭೇಟಿ : ಜೋ ಬೈಡನ್‌ ಜೊತೆ ಮಹತ್ವದ ಮಾತುಕತೆ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಅಮೇರಿಕಾ ಪ್ರವಾಸ ಕೈಗೊಳ್ಳಲಿದ್ದಾರೆ. ಅಮೇರಿಕಾ ಹಾಗೂ ಭಾರತದ ನಡುವಿನ ದ್ವಿಪಕ್ಷೀಯ ನಂಟು ಬಲಗೊಳಿಸುವ ನಿಟ್ಟಿನಲ್ಲಿ ಈ ಭೇಟಿ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ. ಅಲ್ಲದೇ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿಯೂ ಭಾಗಿಯಾಗಿ ಭಾಷಣ ಮಾಡಲಿದ್ದಾರೆ.

ಸಪ್ಟೆಂಬರ್ 23ರಿಂದ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಭೇಟಿ ಕೈಗೊಂಡಿದ್ದಾರೆ. ಅಮೆರಿಕ ಅಧ್ಯಕ್ಷ ಜೋಯಿ ಬೈಡೆನ್ ಜೊತೆ ದ್ವಿಪಕ್ಷೀಯ ಒಪ್ಪಂದಗಳ ಕುರಿತು ಮಾತುಕತೆ ನಡೆಸಲಿದ್ದಾರೆ. ಅಲ್ಲದೇ ಕ್ವಾಡ್ ಶೃಂಗಸಭೆ , ವಿಶ್ವಸಂಸ್ಥೆ ಮಹಾವೇಶನದಲ್ಲಿ ಸೆ.25ರಂದು ಪ್ರಧಾನಿ ಮೋದಿಯವರು ಪ್ರಮುಖ ಭಾಷಣ ಮಾಡಲಿದ್ದಾರೆ. ಅಫ್ಘಾನಿಸ್ಥಾನದಲ್ಲಿ ತಾಲಿಬಾನ್ ಸರಕಾರ ರಚನೆ ಕಸರತ್ತು ನಡೆಯುತ್ತಿರುವ ವೇಳೆಯಲ್ಲಿಯೇ ಮೋದಿ ಅಮೇರಿಕಾ ಭೇಟಿ ಹೆಚ್ಚು ಕುತೂಹಲವನ್ನು ಮೂಡಿಸಿದೆ.

ಜೋ ಬೈಡನ್‌ ಅಮೇರಿಕಾ ಅಧ್ಯಕ್ಷರಾದ ಬಳಿಕ ನರೇಂದ್ರ ಮೋದಿ ಅವರು ಇದೇ ಮೊದಲ ಬಾರಿಗೆ ಅಮೇರಿಕಾಕ್ಕೆ ಭೇಟಿಯನ್ನು ನೀಡುತ್ತಿದ್ದಾರೆ. ಕೋವಿಡ್‌ ನಿಯಂತ್ರಣ, ಭಯೊತ್ಪಾದಕ ದಾಳಿ, ಭಯೋತ್ಪಾದನೆ ನಿರ್ಮೂಲನೆ ಸೇರಿದಂತೆ ಹಲವು ವಿಚಾರಗಳ ಕುರಿತಂತೆ ಅಮೇರಿಕಾ ಅಧ್ಯಕ್ಷರ ಜೊತೆಗೆ ನಮೋ ಮಾತುಕತೆಯನ್ನು ನಡೆಸಿದ್ದಾರೆ.

ಇದನ್ನೂ ಓದಿ : ಸೋಲಿಗೆ ತಲೆದಂಡ: ಪಶ್ಚಿಮಬಂಗಾಳ ಬಿಜೆಪಿಯಿಂದ ಹೊರಬಿದ್ದ ದಿಲೀಪ್ ಘೋಷ್

ಇದನ್ನೂ ಓದಿ : ಚೊಚ್ಚಲ ಎಂಪಿ, ಬಾಟನಿ ಪ್ರೊಫೆಸರ್ ಹೆಗಲಿಗೆ ಪಶ್ಚಿಮಬಂಗಾಳ ಬಿಜೆಪಿ ಜವಾಬ್ದಾರಿ

(Prime Minister Narendra Modi, US President Joe Biden to hold bilateral meeting at White House on September 24 )

Comments are closed.