ರಾಜಸ್ಥಾನ : ಕುಡಿದ ಮತ್ತಲ್ಲಿ ಪತ್ನಿಯೊಂದಿಗೆ ಜಗಳವಾಡಿದ ನಂತರ ವಿದ್ಯುತ್ ಟವರ್‌ನಿಂದ ನೇಣು ಬಿಗಿದುಕೊಂಡು ವಿದ್ಯುತ್ ಕಂಬಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದ ಬಾರ್ಮರ್ ನಲ್ಲಿ ನಡೆದಿದೆ.
ಪಬುರಾಮ್ ಎಂಬಾತನೇ ವಿದ್ಯುತ್ ಕಂಬಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಆರು ವರ್ಷಗಳ ಹಿಂದೆ ದಾರುಡಾ ಗ್ರಾಮದ ಧುಡಿದೇವಿಯನ್ನು ವಿವಾಹ ವಾಗಿದ್ದು, ದಂಪತಿಗಳಿಂದಾಗಿ ಇಬ್ಬರು ಮಕ್ಕಳಿದ್ದರು. ಪತಿಯೊಂದಿಗೆ ಜಗಳವಾಡಿಕೊಂಡ ಪತಿ ತವರು ಮನೆ ಸೇರಿಕೊಂಡಿದ್ದಳು.ಕಳೆದ 2 ರಿಂದ 3 ತಿಂಗಳಿನಿಂದ ತನ್ನ ಹೆತ್ತವರ ಜೊತೆ ವಾಸಿಸುತ್ತಿದ್ದ ತನ್ನ ಹೆಂಡತಿಯನ್ನು ಕರೆತರಲು ಸಂತ್ರಸ್ತ ತನ್ನ ಅತ್ತೆಯ ಮನೆಗೆ ಹೋಗಿದ್ದಈ ವೇಳೆಯಲ್ಲಿ ಮದ್ಯ ಸೇವಿಸಿ ಪತ್ನಿಯೊಂದಿಗೆ ಜಗಳವಾಡಿದ್ದಾನೆ.
ಈ ವೇಳೆಯಲ್ಲಿ ಮನೆಯಲ್ಲಿದ್ದ ಅತ್ತೆಯ ಜೊತೆಗೂ ಜಗಳವಾಡಿಕೊಂಡಿದ್ದಾನೆ. ನಂತರದ ಕೋಪದ ಭರದಲ್ಲಿ ಪಬುರಾಮ್ ವಿದ್ಯುತ್ ಕಂಬಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶವವನ್ನು ಕಂಡ ನೆರೆಹೊರೆಯವರು ಕುಟುಂಬದ ಇತರ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ.
ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಬಾರ್ಮರ್ ಠಾಣೆಯ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಗ್ರಾಮೀಣ ಎಸ್‌ಎಚ್‌ಒ ಪರಬತ್ ಸಿಂಗ್ ಪ್ರಕಾರ, ಕುಟುಂಬದ ಸದಸ್ಯರ ವರದಿಯನ್ನು ಆಧರಿಸಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
Rajasthan : Drunk Man Ends Life by Hanging Self From Electricity Tower After Argument With Wife