ತಿರುಪತಿ ಭಕ್ತರಿಗೆ ಗುಡ್‌ ನ್ಯೂಸ್‌ : ಇಂದಿನಿಂದ ಉಚಿತ ಸರ್ವ ದರ್ಶನ ಟೋಕನ್‌ ವಿತರಣೆ

ತಿರುಪತಿ : ಕೊರೊನಾ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ಕಳೆದ ಕೆಲವು ತಿಂಗಳಿಂದ ಸ್ಥಗಿತಗೊಂಡಿದ್ದ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿ ಸರ್ವದರ್ಶನ ಟೋಕನ್‌ ನೀಡುವ ಕಾರ್ಯವನ್ನು ಮತ್ತೆ ಆರಂಭಿಸಲಾಗಿದೆ.

ಕಳೆದ ಕೆಲವು ತಿಂಗಳಿನಿಂದಲೂ ತಿರುಪತಿ ತಿರುಮಲ ದೇವಸ್ಥಾನ ಮಂಡಳಿ ಭಕ್ತರಿಗೆ ನೀಡಲಾಗುತ್ತಿದ್ದ ಉಚಿತ ಸರ್ವದರ್ಶನ ಟೋಕನ್‌ ವ್ಯವಸ್ಥೆಯನ್ನು ರದ್ದು ಮಾಡಿತ್ತು. ಆದ್ರೀಗ ಕೊರೊನಾ ವೈರಸ್‌ ಸೋಂಕಿನ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಭಕ್ತರಿಗೆ ಈ ಸೇವೆಯನ್ನು ಪುನರಾರಂಭಿಸಿದೆ.

ಸದ್ಯಕ್ಕೆ ಉಚಿತ ಸರ್ವದರ್ಶನ ಪೂಜೆಯ ಟೋಕನ್‌ ಎಲ್ಲಾ ಭಕ್ತರಿಗೆ ಲಭ್ಯವಾಗುವುದಿಲ್ಲ. ಕೇವಲ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಜನರಿಗೆ ಮಾತ್ರವೇ ಅವಕಾಶ ನೀಡಲಾಗಿದೆ. ನಿತ್ಯವೂ ಸರ್ವದರ್ಶನ ಟೋಕನ್‌ ಕೇವಲ ಎರಡು ಸಾವಿರ ಜನರಿಗೆ ಮಾತ್ರವೇ ನೀಡಲಾಗುತ್ತಿದ್ದು, ಈಗಾಗಲೇ ವಿಶೇಷ ದರ್ಶನದ ಟೋಕನ್‌ ಪಡೆದವರಿಗೆ ಸರ್ವದರ್ಶನ ಟೋಕನ್‌ ಸಿಗೋದಿಲ್ಲ ಎಂದು ಟಿಟಿಡಿ ಹೇಳಿದೆ.

ಇದನ್ನೂ ಓದಿ :  ತಿರುಪತಿ ತಿಮ್ಮಪ್ಪನ ವಿಗ್ರಹದ ವಿಸ್ಮಯ ನಿಮಗೆ ಗೊತ್ತಾ ?

ಇದನ್ನೂ ಓದಿ : ಅಭಿಷೇಕವೇ ನಡೆಯದ ವಿಗ್ರಹ : ತಿರುಪತಿಯಲ್ಲಿದೆ ಅಪರೂಪದ ದೇಗುಲ

( Tirupati resumes free sarva Darshanam token from Wednesday )

Comments are closed.