Highway: ಹೈವೈನಲ್ಲಿ ಬಿಗಿಯಾಗಲಿದೆ ಕಣ್ಗಾವಲು…! ವೇಗವಾಗಿ ವಾಹನ ಚಲಾಯಿಸಿದ್ರೇ ಬೀಳುತ್ತೆ ದಂಡ…!!

 ನವದೆಹಲಿ: ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳು ನಡೆಯುವ ಅನಾಹುತಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸ್ಪೀಡ್ ಮೇಲೆ ತನ್ನ ಕಣ್ಗಾವಲು ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಹೀಗಾಗಿ ಇನ್ಮುಂದೆ ಹೈವೈನಲ್ಲಿ ವೇಗವಾಗಿ ವಾಹನ ಚಲಾಯಿಸಿದ್ರೇ ನೀವು ದಂಡ ಪಾವತಿಸಬೇಕಾಗುತ್ತದೆ.

ವಾಹನ ಸವಾರರ ವಾಹನದ ವೇಗವನ್ನು ಅಳೆಯುವ ಹಾಗೂ ನಿಯಮ ಮೀರಿ ವೇಗವಾಗಿ ಚಲಾಯಿಸುವ ಚಾಲಕರಿಗೆ ದಂಡ ವಿಧಿಸುವ ನಿಟ್ಟಿನಲ್ಲಿ ನಿಯಮವನ್ನು ಮತ್ತಷ್ಟು ಬಿಗಿಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗ ನಿಯಂತ್ರಿಸಲು ಕ್ಯಾಮರಾ ಅಳವಡಿಸಲು ಕೇಂದ್ರ ಸರ್ಕಾರ ಸಿದ್ಧವಾಗಿದ್ದು, ವೇಗವಾಗಿ ವಾಹನ ಚಲಾಯಿಸುವವರ ವಾಹನಗಳ ಮಾಹಿತಿ ಪಡೆಯುವ ಕ್ಯಾಮರಾದಿಂದ ತಕ್ಷಣವೇ ಮಾಹಿತಿ ಮುಂದಿನ ಟೋಲ್ ಗೆ ರವಾನೆಯಾಗಲಿದೆ.

ನಿಯಮ ಮೀರಿ ವಾಹನದ ವೇಗವನ್ನು ಹೆಚ್ಚಿಸಿದ ಸವಾರರು ಮುಂದಿನ ಟೋಲ್ ನಲ್ಲಿ ದುಬಾರಿ ದಂಡ ಪಾವತಿಸುವ ಸ್ಥಿತಿ ಎದುರಾಗಲಿದೆ. ಈಗಾಗಲೇ ಸ್ಪೀಡ್ ಕಂಟ್ರೋಲ್ ಗಳು ಹೈವೈನಲ್ಲಿ ಅಳವಡಿಸಲಾಗಿದ್ದರೂ ನಿಯಮ ಪರಿಣಾಮಕಾರಿಯಾಗಿ ಜಾರಿಯಾಗಿರಲಿಲ್ಲ. ಹೀಗಾಗಿ ಕ್ಯಾಮರ ಸಂಖ್ಯೆ ಹೆಚ್ಚಿಸಿ ನಿಯಮವನ್ನು ಕಠಿಣವಾಗಿ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ.

Comments are closed.