India weather Report : ಈ ರಾಜ್ಯಗಳಲ್ಲಿ ಮುಂದಿನ 3 ದಿನ ಮಳೆ ಸಾಧ್ಯತೆ, ಭಾರತೀಯ ಹವಾಮಾನ ಇಲಾಖೆ

ನವದೆಹಲಿ: (India weather Report) ದೇಶದಲ್ಲಿ ಬೆಳಗಿನ ಜಾವ ಚಳಿಯ ವಾತಾವರಣವಿದ್ದು, ಮಧ್ಯಾಹ್ನದ ವೇಳೆ ಬಿಸಿಲಿನ ಕಾವು ಹೆಚ್ಚಾಗುತ್ತಿದ್ದು, ಈ ಮಧ್ಯೆ ದೇಶದ ಕೆಲವು ರಾಜ್ಯಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಅಸ್ಸಾಂ ಮೇಘಾಲಯ, ಸಿಕ್ಕಿಂ ತಮಿಳುನಾಡು, ಪುದುಚೇರಿ ಹಾಗೂ ಕಾರೈಕಲ್‌ ನಲ್ಲಿ ಮುಂದಿನ ಮೂರು ದಿನಗಳ ಕಾಲ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಸಿದೆ.

ಪ್ರತಿ ವರ್ಷ ಏಪ್ರಿಲ್‌ ಮೇ ತಿಂಗಳಲ್ಲಿ ಬಿಸಿಲಿನ ತಾಪಮಾನ ಕಾಡುತ್ತಿದ್ದು ಈ ವರ್ಷ ಫೆಬ್ರವರಿ ತಿಂಗಳಲ್ಲೇ ಪ್ರಾರಂಭವಾಗಿದೆ. ಇನ್ನೂ ಬೆಳಗಿನ ಜಾವ ಚಳಿಯ ವಾತಾವರಣ ಕೂಡ ಹೆಚ್ಚಾಗಿದ್ದು, ಪ್ರತಿದಿನ ಮಂಜು ಮುಸುಕಿದ ವಾತಾವರಣ ಕೂಡ ಇದೆ. ರಾಷ್ಟ್ರ ರಾಜಧಾನಿ, ಗುಜರಾತ್‌, ರಾಜಸ್ಥಾನದಂತಹ ಕೆಲವು ರಾಜ್ಯಗಳಲ್ಲಿ ಬಿಸಿಲಿನ ತಾಪಮಾನ ಗಣನೀಯವಾಗಿ ಏರಿಕೆ ಕಂದಿದ್ದು, ಮುಂದಿನ ಐದು ದಿನಗಳ ವರೆಗೆ ಮಧ್ಯ ಹಾಗೂ ಪೂರ್ವ ಭಾರತದಲ್ಲಿ ಗರಿಷ್ಠ ತಾಪಮಾನ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದರ ಮಧ್ಯೆ ಅಸ್ಸಾಂ ಮೇಘಾಲಯ, ಸಿಕ್ಕಿಂ ತಮಿಳುನಾಡು, ಪುದುಚೇರಿ ಹಾಗೂ ಕಾರೈಕಲ್‌ ನಲ್ಲಿ ಮುಂದಿನ ಮೂರು ದಿನಗಳ ಕಾಲ ಸಾಧಾರಣ ಮಳೆಯಾಗುವ ಸಾಧ್ಯತೆಯಿದ್ದು, ಫೆ. 26 ರಿಂದ 28 ರ ನಡುವೆ ಎರಡು ದಿನ ಪಂಜಾಬ್‌, ಹರಿಯಾಣ, ಚಂಡೀಗಢದಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಇನ್ನೂ ಫೆ. 28 ರಿಂದ ಮಾರ್ಚ್‌ 2 ರವರೆಗೆ ಪಂಜಾಬ್‌, ಹರಿಯಾಣ, ಚಂಡೀಗಢದಲ್ಲಿ ಮಳೆಯಾಗಲಿದ್ದು, ಫೆ. 28 ರಂದು ಕಾಶ್ಮೀರ ಕಣಿವೆಯಲ್ಲಿ ಹಾಗೂ ಮಾರ್ಚ್‌ 1 ರಂದು ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ : ನೀವು ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ ಗ್ರಾಹಕರೇ : ಹಾಗಿದ್ದರೆ ಈ ಸುದ್ದಿ ನಿಮಗಾಗಿ

ಇದನ್ನೂ ಓದಿ : Hyderabad Murder: ತನ್ನ ಗೆಳತಿಯೊಂದಿಗೆ ಮಾತನಾಡಿದ್ದಕ್ಕೆ ಗೆಳೆಯ ನನ್ನೇ ಕೊಲೆಗೈದು, ಖಾಸಗಿ ಅಂಗಳನ್ನು ಕತ್ತರಿಸಿದ ಭೂಪ

ಇನ್ನೂ ಕರ್ನಾಟಕಕ್ಕೆ ಬಂದರೆ ಬಿಸಿಲಿನ ತಾಪಮಾನ ಏರಲಿದ್ದು, ಬಾಗಲಕೋಟೆಯಲ್ಲಿ 12.4 ಡಿಗ್ರಿ ಸೆಲ್ಸಿಯಸ್‌, ಬೆಂಗಳೂರಿನ ಎಚ್‌ಎಎಲ್‌ ನಲ್ಲಿ 31.5 , ನಗರದಲ್ಲಿ 36.6, ಕೆಐಎಎಲ್‌ ನಲ್ಲಿ 32.0 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

ಇದನ್ನೂ ಓದಿ : 12 ಕೋಟಿ ರೈತರಿಗೆ ಗುಡ್‌ ನ್ಯೂಸ್‌ : ಈ ದಿನದಂದು 13ನೇ ಕಂತು ಖಾತೆಗೆ ಜಮೆ

India Weather Report: The next 3 days of rainfall in these states, the Indian Meteorological Department

Comments are closed.