Independence Day Parade 2022 Live : ಭಾರತ 75ನೇ ವರ್ಷದ ಸ್ವಾತಂತ್ರ್ಯ ಮಹೋತ್ಸವ: ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ

ನವದೆಹಲಿ : (Independence Day Parade 2022 Live) ಭಾರತ 75ನೇ ವರ್ಷದ ಸ್ವಾತಂತ್ರ್ಯ‌ ಮಹೋತ್ಸವವನ್ನು ಆಚರಿಸುತ್ತಿದೆ. ದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ನಾವು ಇಂದು ಸ್ವತಂತ್ರ ಭಾರತದ ಅಮೃತ ಮಹೋತ್ಸವದ ಸಂಭ್ರಮದಲ್ಲಿದ್ದೇವೆ. ದೇಶವನ್ನು ರಕ್ಷಿಸುವವರ, ದೇಶದ ಸಂಕಲ್ಪ ಪೂರ್ಣಗೊಳಿಸುವವರನ್ನು ಗೌರವಿಸೋಣ. ಅವರು ಸೇನೆ, ಪೊಲೀಸ್, ಶಾಸಕರು, ಜನಪ್ರತಿನಿಧಿಗಳು ಅಥವಾ ಬೇರೆ ಯಾರೇ ಇರಬಹುದು. ಅಂಥವರನ್ನು ಗೌರವಿಸೋಣ ಎಂದು ಮೋದಿ ಹೇಳಿದರು.

ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪುಕೋಟೆಗೆ ತಲುಪಿದರು. ವಾಯುಪಡೆ, ನೌಕಾಪಡೆ ಮತ್ತು ಭೂಸೇನೆಯ ತುಕಡಿಗಳು ಪ್ರಧಾನಿಗೆ ಶಿಷ್ಟಾಚಾರದಂತೆ ಗೌರವ ವಂದನೆ ಸಲ್ಲಿಸಿದವು. ಇದಕ್ಕೂ ನಾರಾಯಣ ಗುರು, ಸ್ವಾಮಿ ವಿವೇಕಾನಂದ, ಮಹರ್ಷಿ ಅರವಿಂದ, ಗುರುದೇವ್ ರವೀಂದ್ರ ನಾಥ್ ಠಾಗೋರ್ ಸೇರಿದಂತೆ ಹಲವು ಮಹಾಪುರುಷರು ದೇಶದ ಮೂಲೆಮೂಲೆಗಳಲ್ಲಿ ದೇಶಭಕ್ತಿ ಬಿತ್ತಿದರು. ಅಮೃತ ಮಹೋತ್ಸವದ ಮೂಲಕ ನಾವು ಇವರೆಲ್ಲರನ್ನೂ ಗೌರವಿಸಬೇಕು. ಅಮೃತ ಮಹೋತ್ಸವ ಪ್ರಯುಕ್ತ ವಿಶಾಲ ಭಾರತದ ಮೂಲೆಮೂಲೆಗಳಲ್ಲಿ ನಮ್ಮ ಮಹಾಪುರುಷರನ್ನು ಸ್ಮರಿಸಿ ಗೌರವಿಸಿದ್ದೇವೆ ಎಂದಿದ್ದಾರೆ.

ಬಾಪು, ನೇತಾಜಿ, ಅಂಬೇಡ್ಕರ್, ಸಾವರ್ಕರ್​ಗೆ ನಾವು ಕೃತಜ್ಞರು ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡುವುದು. ದೇಶದ ಮುನ್ನಡೆಯ ಕನಸು ಬಿತ್ತಿದ ಮಹಾತ್ಮ ಗಾಂಧಿ, ನೇತಾಜಿ ಸುಭಾಷ್ ಚಂದ್ರ ಬೋಸ್, ಬಾಬಾಸಾಹೇಬ್ ಅಂಬೇಡ್ಕರ್, ವೀರ ಸಾವರ್ಕರ್​ಗೆ ಅವರಿಗೆ ನಾವು ಕೃತಜ್ಞರು. ಮಂಗಲ್ ಪಾಂಡೆ ಸೇರಿದಂತೆ ಹಲವು ಹೋರಾಟಗಾರರು ತಮ್ಮ ಸರ್ವಸ್ವವನ್ನೂ ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ. ರಾಣಿ ಲಕ್ಷ್ಮೀಬಾಯಿ, ದುರ್ಗಾಬಾಭಿ, ರಾಣಿ ಚೆನ್ನಮ್ಮ ಸೇರಿದಂತೆ ಹಲವು ಹೋರಾಟಗಾರ್ತಿಯರು ಭಾರತದ ಶಕ್ತಿ ಏನೆಂದು ತೋರಿಸಿದ್ದಾರೆ ಎಂದಿದ್ದಾರೆ.

https://www.youtube.com/watch?v=fnW4L_J_168


ವಿಶ್ವದ ಮೂಲೆಮೂಲೆಗಳಲ್ಲಿ ತ್ರಿವರ್ಣ ಧ್ವಜ ಕಂಗೊಳಿಸುತ್ತಿದೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿರುವ ಈ ಶುಭ ದಿನದಂದು ವಿಶ್ವದ ಹಲವು ದೇಶಗಳಲ್ಲಿ ನಮ್ಮ ತ್ರಿವರ್ಣ ಧ್ವಜ ಹಾರಾಡುತ್ತಿದೆ. ನಮ್ಮ ದೇಶದ ಅಗಣಿತ ಜನರು ಯಾತನೆ ಅನುಭವಿಸಿ ಆಹುತಿ ಮಾಡಿಕೊಂಡಿದ್ದರಿಂದ ನಮಗೆ ಸ್ವಾತಂತ್ರ್ಯ ಲಭಿಸಿತು. ಎಲ್ಲ ತ್ಯಾಗಿಗಳನ್ನು ನಾವು ಸ್ಮರಿಸಬೇಕು ಎಂದಿದ್ದಾರೆ.

ಇದನ್ನೂ ಓದಿ : Har Ghar Tiranga certificate online : ಹರ್ ಘರ್ ತಿರಂಗಾ ಪ್ರಮಾಣಪತ್ರ, ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ : KL Rahul captaincy : ಕೆಎಲ್ ರಾಹುಲ್ ನಾಯಕತ್ವ ಪ್ರಶ್ನಿಸಿದ ಆಕಾಶ್ ಚೋಪ್ರಾ

India’s 75th year of independence: Prime Minister Narendra Modi hoists the flag at Red Fort Independence Day Parade 2022 Live

Comments are closed.