ತನ್ನದೇ ಯುದ್ದ ಹಡಗನ್ನುಸ್ಪೋಟಿಸಿದ ಇರಾನ್ : 19 ಯೋಧರ ದುರ್ಮರಣ

0

ಇರಾನ್ : ಈ ಹಿಂದೆ ಉಕ್ರೇನ್ ಗೆ ಸೇರಿದ ವಿಮಾನವನ್ನು ಹೊಡೆದುರುಳಿಸಿದ್ದ ಇರಾನ್ ಇದೀಗ ಅಚಾತುರ್ಯದಿಂದ ತನ್ನದೇ ಯುದ್ದ ಹಡಗನ್ನು ಸ್ಪೋಟಿಸಿದೆ.

ಘಟನೆಯಲ್ಲಿ 19 ಮಂದಿ ಇರಾನ್ ಯೋಧರು ದುರ್ಮರಣವನ್ನು ಹೊಂದಿದ್ದಾರೆ, ಅಲ್ಲದೇ 15 ಮಂದಿ ನಾವಿಕರು ಗಾಯಗೊಂಡಿದ್ದಾರೆ.

ಟೆಹ್ರಾನ್ ನಿಂದ 790 ಮೈಲಿ ದೂರದಲ್ಲಿರುವ ಜಾಸ್ಕ್ ಬಂದರಿನಲ್ಲಿ ಈ ಘಟನೆ ಸಂಭವಿಸಿದೆ. ಒಮಾನ್ ಕೊಲ್ಲಿಯಲ್ಲಿ ಇರಾನ್ ಸೇನೆ ಸಮರಾಭ್ಯಾಸವನ್ನು ನಡೆಸುತ್ತಿತ್ತು. ಸೇನೆಯ ಅಚಾತುರ್ಯದಿಂದಾಗಿ ಘಟನೆ ನಡೆದಿದ್ದು, ಯುದ್ದ ಹಡಗು ಸಂಪೂರ್ಣವಾಗಿ ಧ್ವಂಸವಾಗಿದೆ.

ಈ ಹಿಂದೆ ಇರಾನ್ ಸೇನೆ ಮಾಡಿದ ಎಡವಟ್ಟಿನಿಂದಾಗಿ ಉಕ್ರೇನ್ ಗೆ ಸೇರಿದ ವಿಮಾನವನ್ನು ಹೊಡೆದುರುಳಿಸಿದ್ದು, 176 ಕ್ಕೂ ಅಧಿಕ ವಿಮಾನ ಯಾತ್ರಿಗಳು ಸಾವನ್ನಪ್ಪಿದ್ದರು. ಇದೀಗ ಇರಾನ್ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ.

Leave A Reply

Your email address will not be published.