ISIS Link NIA raids : ಕರ್ನಾಟಕದಲ್ಲಿ ಮೂರು ಕಡೆ ಎನ್‌ಐಎ ದಾಳಿ : ಮೂವರು ಶಂಕಿತ ಉಗ್ರರು ವಶಕ್ಕೆ

ಬೆಂಗಳೂರು : (ISIS Link NIA raids) ರಾಜ್ಯ ಇಂಟೆಲಿಜೆನ್ಸಿ, ಎನ್‌ಐಎ ಹಾಗೂ ಕೇಂದ್ರ ತನಿಖಾ ಸಂಸ್ಥೆಗಳ ನೇತೃತ್ವದಲ್ಲಿ ಕರ್ನಾಟಕದ ಮೂರು ಕಡೆಗಳಲ್ಲಿ ಬೆಳ್ಳಂಬೆಳಗ್ಗೆಯೇ ದಾಳಿ ನಡೆಸಲಾಗಿದ್ದು, ಮೂವರು ಶಂಕಿತ ಉಗ್ರರರನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ತುಮಕೂರು ಹಾಗೂ ಬೆಳಗಾವಿಯಲ್ಲಿ ಏಕಕಾಲದಲ್ಲಿ ದಾಳಿಯನ್ನು ನಡೆಸಲಾಗಿದೆ. ಮೂವರನ್ನು ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆದರೆ ಇವರೆಲ್ಲಾ ಯಾವ ಸಂಘಟನೆಗೆ ಸೇರಿದ್ದಾರೆ ಅನ್ನೋದು ಇನ್ನೂ ಖಚಿತವಾಗಿಲ್ಲ. ಸದ್ಯ ಎನ್‌ಐಎ ಅಧಿಕಾರಿಗಳು ಪರಿಶೀಲನೆಯನ್ನು ಮುಂದುವರಿಸಿದ್ದಾರೆ. ಕರ್ನಾಟಕ ಮಾತ್ರವಲ್ಲದೇ ಎನ್‌ಐಎ ಅಧಿಕಾರಿ ಗಳು ಮಧ್ಯಪ್ರದೇಶದ ಬೋಪಾಲ್‌ ಹಾಗೂ ರಾಯ್‌ಸೇನ್ ಜಿಲ್ಲೆ, ಬಿಹಾರದ ಅರರಿಯಾ ಜಿಲ್ಲೆ, ಗುಜರಾತ್‌ ರಾಜ್ಯದ ಬರೂಚಾ, ಸೂರತ್‌, ನವ್‌ಸರಿ ಹಾಗೂ ಅಹಮದಾಬಾದ್‌ ಜಿಲ್ಲೆ, ಉತ್ತರ ಪ್ರದೇಶದ ದಿಯೋಬಾಂಡ್‌ ಜಿಲ್ಲೆ ಹಾಗೂ ಮಹಾರಾಷ್ಟ್ರದ ಕೊಲ್ಲಾಪುರ ಹಾಗೂ ನಾಂದೇಡ್‌ ಜಿಲ್ಲೆಯಲ್ಲಿ ದಾಳಿ ನಡೆಸಲಾಗಿದೆ.

ಭಟ್ಕಳದಲ್ಲಿ ಓರ್ವ ಶಂಕಿತ ಉಗ್ರ ಅರೆಸ್ಟ್‌

ಐಸಿಸ್‌ ಜೊತೆ ನಂಟು ಹೊಂದಿರುವ ಶಂಕೆ ಹಿನ್ನೆಲೆ ಎನ್ಐಎ ಅಧಿಕಾರಿಗಳ ತಂಡ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮೂಲದ ಓರ್ವನನ್ನು ವಶಕ್ಕೆ ಪಡೆದಿದ್ದಾರೆ. ಅಬ್ದುಲ್ ಮಸ್ತಿರ್‌ (30 ವರ್ಷ) ಎಂಬಾತನೇ ಬಂಧನಕ್ಕೆ ಒಳಗಾಗಿರುವ ಶಂಕಿತ ಉಗ್ರ. ಈತ ಐಎಸ್‍ಐಎಸ್ ಬರಹಗಳನ್ನು ಭಾಷಾಂತರ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸಿದ ಕಾರಣಕ್ಕಾಗಿ ಅಬ್ದುಲ್ ಮಸ್ತಿರನನ್ನು ಭಟ್ಕಳ ನಗರದ ಅರ್ಬನ್ ಬ್ಯಾಂಕ್ ಬಳಿ ಇರುವ ಆತನ ಮನೆಯಿಂದ ಎನ್‍ಐಎ ತಂಡ ವಶಕ್ಕೆ ಪಡೆದಿದೆ.

ಪ್ರಾಥಮಿಕ ಮಾಹಿತಿಯಂತೆ ಈತ ಭಟ್ಕಳ ನಗರದಲ್ಲಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಐಎಸ್‍ಐಎಸ್‍ನ ಬರಹಗಳನ್ನು ಭಾರತೀಯ ಭಾಷೆಗಳಿಗೆ ಈತ ಭಾಷಾಂತರ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದ ಎಂಬ ಆರೋಪದಡಿ ಈತನನ್ನು ವಶಕ್ಕೆ ಪಡೆಯಲಾಗಿದ್ದು, ಭಟ್ಕಳದಲ್ಲೇ ತನಿಖೆ ಕೈಗೊಳ್ಳಲಾಗಿದೆ.

ಇದನ್ನೂ ಓದಿ : Mangaluru Fazil murder case : ಫಾಜಿಲ್‌ ಹತ್ಯೆ ಪ್ರಕರಣ : ಐವರು ಆರೋಪಿಗಳು ಅರೆಸ್ಟ್‌ ? 8 ಕಾರುಗಳು ವಶಕ್ಕೆ

ಇದನ್ನೂ ಓದಿ : Praveen Nettaru Murder NIA Investigation : ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ : ಪುತ್ತೂರಿಗೆ ಎನ್‌ಐಎ ಅಧಿಕಾರಿಗಳ ತಂಡ

ISIS Link NIA raids on three sides in Karnataka: Three suspected terrorists arrested

Comments are closed.