Fazil murder case : ಫಾಜಿಲ್‌ ಹತ್ಯೆ ಪ್ರಕರಣ, ಉಡುಪಿಯಲ್ಲಿ ಅಪರಿಚಿತ ಕಾರು ಪತ್ತೆ

ಮಂಗಳೂರು : (Fazil murder case) ಸುರತ್ಕಲ್‌ನಲ್ಲಿ ನಡೆದಿದ್ದ ಫಾಜಿಲ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ಬಳಿಯಲ್ಲಿರುವ ನಿರ್ಜನ ಪ್ರದೇಶದಲ್ಲಿ ಬಿಳಿಬಣ್ಣದ ಇಯೋನ್‌ ಕಾರು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.

ಫಾಜಿಲ್‌ ಹತ್ಯೆಯ ಬೆನ್ನಲ್ಲೇ ಸಿಸಿ ಕ್ಯಾಮರಾದಲ್ಲಿ ಕೊಲೆ ಮಾಡಿರುವ ಹಂತಕರು ಕಾರಿನಲ್ಲಿ ಎಸ್ಕೇಪ್‌ ಆಗಿರುವುದು ಕಂಡು ಬಂದಿತ್ತು. ಇದೇ ಹಿನ್ನೆಲೆಯಲ್ಲಿ ಪೊಲೀಸರು ಸಂಶಯಾಸ್ಪದ ಇಯೋನ್‌ ಕಾರುಗಳನ್ನು ವಶಕ್ಕೆ ಪಡೆದು ಮಾಲೀಕರನ್ನು ವಿಚಾರಣೆಗೆ ಒಳಪಡಿಸಿದ್ದರು. ಸುಮಾರು ಎಂಟು ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದರ ಬೆನ್ನಲ್ಲೇ ಇದೀಗ ಕಾರ್ಕಳ ತಾಲೂಕಿನ ಇನ್ನಾ ಗ್ರಾಮದಲ್ಲಿ ಬಿಳಿ ಬಣ್ಣದ ಕಾರು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲೀಗ ಮಂಗಳೂರು ಪೊಲೀಸರು ಕಾರು ಪತ್ತೆಯಾಗಿರುವ ಸ್ಥಳಕ್ಕೆ ದೌಡಾಯಿಸಿದ್ದಾರೆ.

ಕಾರಿನ ಹಿಂಭಾಗದಲ್ಲಿ ರಕ್ತದ ಕಲೆ, ಮೈಕ್ರೋ ಸಿಮ್‌ ಪತ್ತೆಯಾಗಿದೆ ಎನ್ನಲಾಗುತ್ತಿದೆ. ಸದ್ಯ ಪಡುಬಿದ್ರಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸುತ್ತಿದ್ದಾರೆ. ಆದರೆ ಹತ್ಯೆಗೆ ಇದೇ ಕಾರನ್ನು ಬಳಕೆ ಮಾಡಲಾಗಿದೆಯೇ ಎಂಬುವುದನ್ನು ಪೊಲೀಸರು ಇನ್ನೂ ಖಚಿತ ಪಡಿಸಿಲ್ಲ. ಫಾಜಿಲ್‌ ಹತ್ಯೆಗೆ ಹಂತಕರು ಅಜಿತ್‌ ಡಿಸೋಜಾ ಎಂಬವರಿಂದ ಕಾರನ್ನು ಬಾಡಿಗೆಗೆ ಪಡೆದುಕೊಂಡಿದ್ದರು ಎಂಬ ಕುರಿತು ಈಗಾಗಲೇ ನಗರ ಪೊಲೀಸ್‌ ಆಯುಕ್ತರು ಮಾಹಿತಿ ನೀಡಿದ್ದರು. ಇನ್ನೊಂದೆಡೆಯಲ್ಲಿ ಕಾರಿನ ಚಾಲಕನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ಪರಿಶೀಲನೆಯನ್ನು ನಡೆಸುತ್ತಿದ್ದಾರೆ.

ಫಾಜಿಲ್‌ ಹತ್ಯೆ : ನಗರ ಪೊಲೀಸ್‌ ಆಯುಕ್ತ ಎನ್.‌ ಶಶಿಕುಮಾರ್‌ ಸುದ್ದಿಗೋಷ್ಠಿ

ಮಂಗಳೂರು ನಗರ ಪೊಲೀಸ್‌ ಆಯುಕ್ತರಾದ ಎನ್.‌ ಶಶಿಕುಮಾರ್‌ ಅವರು ಸುದ್ದಿಗೋಷ್ಠಿಯನ್ನು ನಡೆಸಿ ಆರೋಪಿಗಳ ಬಂಧನದ ಕುರಿತು ಮಾಹಿತಿಯನ್ನು ನೀಡಿದ್ದಾರೆ. ಫಾಜಿಲ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರಂಭದಲ್ಲಿ 14 ಮಂದಿ ನಂತರದಲ್ಲಿ 21 ಮಂದಿ ಹಾಗೂ ಅಂತಿಮವಾಗಿ 16 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸಲಾಗಿದೆ. ಪ್ರಮುಖವಾಗಿ ಹತ್ಯೆ ನಡೆದಿರುವ ಪ್ರದೇಶದಲ್ಲಿನ ಸಿಸಿ ಕ್ಯಾಮೆರಾ ದೃಶ್ಯಾವಳಿಯಲ್ಲಿ ಬಿಳಿ ಬಣ್ಣದ ಇಯೋನ್‌ ಕಾರನ್ನು ಬಳಸಿರುವ ಕುರಿತು ಮಾಹಿತಿಯನ್ನು ಪಡೆಯಲಾಗಿದೆ. ಈ ಹಿನ್ನೆಲೆಯಲ್ಲಿ ಸಂಶಯಾಸ್ಪದ ಇಯೋನ್‌ ಕಾರುಗಳನ್ನು ವಶಕ್ಕೆ ಪಡೆದು ಮಾಲೀಕರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದಿದ್ದಾರೆ.

ಇನ್ನು ಹತ್ಯೆಗೆ ಬಳಿಸಿರುವ ಇಯೋನ್‌ ಕಾರ್‌ ಮಾಲೀಕನನ್ನು ನಿನ್ನೆ ಸುರತ್ಕಲ್‌ ಹೊರ ವಲಯದಲ್ಲಿ ವಶಕ್ಕೆ ಪಡೆಯಲಾಗಿದ್ದು, ಆತ ನೀಡಿರುವ ಮಾಹಿತಿಯ ಹಿನ್ನೆಲೆಯಲ್ಲಿ ಆರೋಪಿಗಳ ಬಂಧನಕ್ಕೆ ಪೊಲೀಸರ ತಂಡ ಸಜ್ಜಾಗಿದೆ. ಇನ್ನು ಕಾರು ಚಾಲಕನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದು, ಮತ್ತೆ ಹೆಚ್ಚುವರಿ ವಿಚಾರಣೆಯ ಹಿನ್ನೆಲೆಯಲ್ಲಿ ಆತನನ್ನು ಮತ್ತೆ ವಶಕ್ಕೆ ಪಡೆಯಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : Mangaluru Fazil murder case : ಫಾಜಿಲ್‌ ಹತ್ಯೆ ಪ್ರಕರಣ : ಐವರು ಆರೋಪಿಗಳು ಅರೆಸ್ಟ್‌ ? 8 ಕಾರುಗಳು ವಶಕ್ಕೆ

ಇದನ್ನೂ ಓದಿ : ISIS Link NIA raids : ಕರ್ನಾಟಕದಲ್ಲಿ ಮೂರು ಕಡೆ ಎನ್‌ಐಎ ದಾಳಿ : ಮೂವರು ಶಂಕಿತ ಉಗ್ರರು ವಶಕ್ಕೆ

Fazil murder case, unknown car found in Udupi

Comments are closed.