ISRO: ಮತ್ತೊಂದು ಮೈಲಿಗಲ್ಲಿಗೆ ಸಾಕ್ಷಿಯಾದ ಇಸ್ರೋ; ಒಂದೇ ಬಾರಿಗೆ ಓಷ್ಯನ್ ಸ್ಯಾಟ್ ಸೇರಿದಂತೆ 9 ಉಪಗ್ರಹಗಳ ಉಡಾವಣೆ

ಶ್ರೀಹರಿಕೋಟಾ: ISRO launches 9 Satellites : ಓಷ್ಯನ್ ಸ್ಯಾಟ್ ಸೇರಿ ಒಟ್ಟು 9 ಉಪಗ್ರಹಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 321 ಟನ್ ತೂಕವುಳ್ಳ ಉಪಗ್ರಹಗಳನ್ನು ಹೊತ್ತು PSLV-C54 ರಾಕೆಟ್ ನಭಕ್ಕೆ ಚಿಮ್ಮಿದ್ದು, ಉಪಗ್ರಹಗಳನ್ನು ಸನ್- ಸಿಂಕ್ರೋನಸ್ ಧ್ರುವಿಯ ಕಕ್ಷೆಗೆ ಸೇರಿಸಲಾಗಿದೆ.

ನಭಕ್ಕೆ ಹಾರಿದ ಕೇವಲ 17 ನಿಮಿಷದಲ್ಲಿಯೇ ರಾಕೆಟ್ ನಿಂದ ಬೇರ್ಪಟ್ಟ ಓಷ್ಯನ್ ಸ್ಯಾಟ್ ಉಪಗ್ರಹ ಸೇರಿದಂತೆ ಎಲ್ಲಾ 9 ಉಪಗ್ರಹಗಳು ಕಕ್ಷೆ ಸೇರ್ಪಡೆಗೊಂಡವು. 9 ಉಪಗ್ರಹಗಳಲ್ಲಿ ಓಷ್ಯನ್ ಸ್ಯಾಟ್ ಪ್ರಮುಖವಾಗಿದೆ. ಇದು ಭೂಮಿಯ ಪರಿವೀಕ್ಷಣೆ ಮಾಡಲಿದೆ. ಸಾಗರಶಾಸ್ತ್ರ ಹಾಗೂ ವಾತಾವರಣದ ಅಧ್ಯಯನವನ್ನು ಓಷ್ಯನ್ ಸ್ಯಾಟ್ ಉಪಗ್ರಹ ಮಾಡಲಿದೆ. ಅಲ್ಲದೇ ಉಪಗ್ರಹಗಳು ಸಮುದ್ರದ ಹವಾಮಾನವನ್ನು ಮುನ್ಸೂಚಿಸುವ ಸಾಮಥ್ರ್ಯವನ್ನು ಹೊಂದಿದೆ.

ಇದನ್ನೂ ಓದಿ: Ambulance Service : ದಾರಿ ಮಧ್ಯದಲ್ಲೇ ಖಾಲಿಯಾಯ್ತು ಅಂಬ್ಯುಲೆನ್ಸ್ ಇಂಧನ : ಹಾರಿ ಹೊಯ್ತು ರೋಗಿಯ ಪ್ರಾಣ, ನಿರ್ವಹಣೆ ವೈಫಲ್ಯ ಎಂದ ಸಚಿವ

ಓಷ್ಯನ್ ಸ್ಯಾಟ್ ಹೊರತುಪಡಿಸಿದಂತೆ ಆನಂದ್, ಥೈಬೋಲ್ಡ್, ಐಎನ್ ಎಸ್ 2-ಬಿ, ಆಸ್ಟ್ರೋಕಾಸ್ಟ್ ಒಳಗೊಂಡ 8 ಉಪಗ್ರಹಗಳು ನ್ಯಾನೋ ಸ್ಯಾಟಲೈಟ್ಸ್ ಆಗಿವೆ. ಓಷ್ಯನ್ ಸ್ಯಾಟ್- 1 ಉಪಗ್ರಹವನ್ನು 1999ರಲ್ಲಿ ಉಡಾವಣೆ ಮಾಡಲಾಗಿತ್ತು. ಮತ್ತು ಓಷ್ಯನ್ ಸ್ಯಾಟ್ -2 ಉಪಗ್ರಹವನ್ನು 2009ರಲ್ಲಿ ಬಾಹ್ಯಾಕಾಶದಲ್ಲಿ ಸ್ಥಾಪಿಸಲಾಗಿತ್ತು. ಓಷ್ಯನ್ ಸ್ಯಾಟ್-2 ನ ಸ್ಕ್ಯಾನಿಂಗ್ ಸ್ಕ್ಯಾಟರೋಮೀಟರ್ ವಿಫಲವಾದ ನಂತರ ಸ್ಕ್ಯಾಟ್ ಸ್ಯಾಟ್- 1 ಅನ್ನು 2016ರಲ್ಲಿ ಪ್ರಾರಂಭಿಸಲಾಗಿತ್ತು.

ಇದನ್ನೂ ಓದಿ: South Korea Murder Case : ಸತ್ತ ಮಗುವನ್ನು 3 ವರ್ಷಗಳ ಕಾಲ ಕಂಟೇನರ್‌ನಲ್ಲಿ ಬಚ್ಚಿಟ್ಟ ದಂಪತಿ

ಆನಂದ್ ನ್ಯಾನೊ ಉಪಗ್ರಹ ಭೂಮಿಯ ಕೆಳಕಕ್ಷೆಯಲ್ಲಿ ಮೈಕ್ರೊಸ್ಯಾಟಲೈಟ್ ಬಳಸಿಕೊಂಡು ಭೂಮಿಯ ವೀಕ್ಷಣೆ ನಡೆಸಲಿದೆ. ಥೈಬೋಲ್ಟ್ ಉಪಗ್ರಹವು ಸಂವಹನಕ್ಕೆ ಸಂಬಂಧಿಸಿದ್ದಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿದೆ.

ಇಸ್ರೋ ಮತ್ತೊಂದು ಮೈಲಿಗಲ್ಲು ನಿರ್ಮಿಸಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೋ ಅಧಿಕಾರಿಗಳ ಸಾಧನೆಯನ್ನು ಕೊಂಡಿದ್ದಾರೆ. ಈ ಕುರಿತು ನಮೋ ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ.

ISRO: ISRO witnesses another milestone; it launches 9 Satellites including oceansat at once

Comments are closed.