IT Raids on Liquor Businessman Home: ಮಧ್ಯಪ್ರದೇಶದ ಉದ್ಯಮಿ ಮನೆ ಮೇಲೆ ಐಟಿ ದಾಳಿ: 8 ಕೋಟಿ ವಶ

ಭೋಪಾಲ್: ಉತ್ತರ ಪ್ರದೇಶದಲ್ಲಿ ಕಾನ್ಪುರ(Kanpur) ಮತ್ತು ಕನೌಜ್‌(Kannauj)ಗಳಲ್ಲಿ ಇಬ್ಬರು ಉದ್ಯಮಿಗಳ ಮೇಲೆ ದಾಳಿ ನಡೆಸಿ 200 ಕೋಟಿಗೂ ಹೆಚ್ಚು ಅಕ್ರಮ ನಗದನ್ನು ವಶಪಡಿಸಿಕೊಂಡಿದ್ದ ಆದಾಯ ತೆರಿಗೆ ಇಲಾಖೆ(Income Tax Department), ಈಗ ಮಧ್ಯಪ್ರದೇಶ(Madhya Pradesh)ದ ದಾಮೋಹ್ ಜಿಲ್ಲೆಯ (Domah District)ಮದ್ಯದ ವ್ಯಾಪಾರಿ(Liquor Businessmen) ಶಂಕರ್ ರೈ ಎಂಬುವರ ಮನೆ ಮತ್ತು ಅವರ ಕುಟುಂಬಕ್ಕೆ ಸಂಬಂಧಿಸಿದ ಅನೇಕ ಕಡೆ ದಾಳಿ ನಡೆಸಿದ ಐಟಿ ಅಧಿಕಾರಿಗಳು 8 ಕೋಟಿ ರೂ. ನಗದು ಮತ್ತು ಮೂರು ಕೆ.ಜಿ. ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಲೆಕ್ಕಪತ್ರಕ್ಕೆ ಸಂಬಂಧಿಸಿದ ದಾಖಲೆಗಳನ್ನೂ ಜಪ್ತಿ ಮಾಡಿದೆ. ಈ ಪೈಕಿ ಒಂದು ಕೋಟಿ ರೂಪಾಯಿ ಹಣವನ್ನು ಬ್ಯಾಗ್‌ವೊಂದರಲ್ಲಿ ಇಟ್ಟು ನೀರಿನ ಸಂಪ್‌ನಲ್ಲಿ ಮುಳುಗಿಸಲಾಗಿತ್ತು. ಇದನ್ನೂ ಪತ್ತೆ ಮಾಡಿದ ಅಧಿಕಾರಿಗಳು ಒದ್ದೆಯಾಗಿದ್ದ ನೋಟುಗಳನ್ನು ಒಣಗಿಸಲು ಇಸ್ತ್ರಿ ಮತ್ತು ಹೇರ್ ಡ್ರೈಯರ್ ಬಳಸಿದ್ದಾರೆ. ರೈ ಕುಟುಂಬ ತನ್ನ ನೌಕರರ ಹೆಸರಿನಲ್ಲೂ ಮದ್ಯದ ಅಂಗಡಿಗಳು, ಬಸ್‌ಗಳನ್ನು ಹೊಂದಿರುವ ಶಂಕೆ ಇದೆ. ರೈ ಕುಟುಂಬದ ಆಸ್ತಿಪಾಸ್ತಿಗಳ ಬಗ್ಗೆ ಮಾಹಿತಿ ನೀಡಿದವರಿಗೆ 10 ಸಾವಿರ ರೂಪಾಯಿ ಬಹುಮಾನವನ್ನು ಐಟಿ ಇಲಾಖೆ ಘೋಷಿಸಿದೆ. ಗುರುವಾರ ಮುಂಜಾನೆ 6 ಗಂಟೆಗೆ ಶುರುವಾದ ಶೋಧ ಕಾರ್ಯ 39 ತಾಸು ತಡೆಯಿತು. ಐಟಿ ಇಲಾಖೆಯ ಅಧಿಕಾರಿಗಳ ಜತೆಗೆ ಪೋಲಿಸರು ಸೇರಿ 200ಕ್ಕೂ ಹೆಚ್ಚು ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.

ಮುನ್ಸಿಪಾಲ್ಟಿಯ ಮಾಜಿ ಅಧ್ಯಕ್ಷರಾದ ಶಂಕರ್ ರೈ, ಕಾಂಗ್ರೆಸ್ ಮುಖಂಡರು. ಅವರ ಸೋದರ ಕೋಮಲ್ ರೈ ಬಿಜೆಪಿ ಮುಖಂಡರಾಗಿದ್ದು, ಮುನ್ಸಿಪಾಲ್ಟಿಯ ಹಾಲಿ ಉಪಾಧ್ಯಕ್ಷ. ಇನ್ನಿಬ್ಬರು ಸೋದರರಾದ ರಾಜು ರೈ, ಸಂಜಯ್ ರೈ ಕೂಡ ಉದ್ಯಮದಲ್ಲಿ ಕೈಜೋಡಿಸಿದ್ದಾರೆ. ರೈ ಅವರದ್ದು ಕೂಡುಕುಟುಂಬ ಆಗಿದ್ದು, ಮದ್ಯದ ಉದ್ಯಮದ ಜತೆಗೆ ಸಾರಿಗೆ, ಹೋಟೆಲ್, ಪೆಟ್ರೋಲ್ ಬಂಕ್‌ಗಳನ್ನು ಹೊಂದಿದೆ.

ಶೋಧ ಕಾರ್ಯ ಮುಗಿದಿದ್ದು, ತೆರಿಗೆ ತಪ್ಪಿಸಿರುವ ಕುರತು ತನಿಖೆ ಮುಂದುವರಿದಿದೆ. ಬೇನಾಮಿ ಆಸ್ತಿಗಳ ಬಗ್ಗೆ ಪರಿಶೀಲನೆ ನಡೆದಿದೆ ಎಂದು ದಾಳಿ ತಂಡದ ನೇತೃತ್ವ ವಹಿಸಿದ್ದ ಜಬಲ್ಪುರ್ ಐಟಿ ವಲಯದ ಜಂಟಿ ಆಯುಕ್ತ ಮುನ್ಮುನ್ ಶರ್ಮಾ ಹೇಳಿದ್ದಾರೆ.

ಇದನ್ನೂ ಓದಿ: Golden Bond : ಚಿನ್ನದ ಬಾಂಡ್‌ ಯೋಜನೆ ಸೋಮವಾರದಿಂದ ಮತ್ತೆ ಆರಂಭ: ಘೋಷಿತ ಬೆಲೆಯನ್ನು ಒಮ್ಮೆ ಗಮನಿಸಿ

(Income Tax dept recovers Rs 8 crore in raid on MP)

Comments are closed.