Cock Fighting : ಕೋಳಿ ಅಂಕದಲ್ಲಿ ಚೂರಿ ಇರಿತ : ಆರು ಮಂದಿ ಗಂಭೀರ

ಕುಂಬಳೆ : ಕೋಳಿ ಅಂಕ ನಡೆಯುತ್ತಿದ್ದ ವೇಳೆಯಲ್ಲಿ ಕ್ಲುಲ್ಲಕ ವಿಚಾರಕ್ಕೆ ಉಂಟಾದ ಮಾತಿನ ಚಕಮಕಿಯ ವೇಳೆಯಲ್ಲಿ ಯುವಕನೋರ್ವ ಚಾಕು ಇರಿದು ಆರು ಮಂದಿಗೆ ಗಾಯ ವಾಗಿದ್ದು, ಈ ಪೈಕಿ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಾಸರಗೋಡು ಜಿಲ್ಲೆಯಲ್ಲಿ ನಡೆದಿದೆ.

ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ಬಂಬ್ರಾಣ ನಿವಾಸಿಗಳಾದ ಕಿರಣ್ (29 ವರ್ಷ ), ಕುದ್ರೆಪ್ಪಾಡಿಯ ಗುರುರಾಜ್ (23 ವರ್ಷ ), ನವೀನ್ (22ವರ್ಷ ), ಧೀರಜ್ (21 ವರ್ಷ ), ಪ್ರವೀಣ್ (21ವರ್ಷ ) ಮತ್ತು ಚರಣ್ (23ವರ್ಷ ) ಎಂಬವರೇ ಗಂಭೀರವಾಗಿ ಗಾಯಗೊಂಡವರು.

ಬಂಬ್ರಾಣದ ಅಂಡಿತ್ತಡ್ಕ ಎಂಬಲ್ಲಿ ಕೋಳಿ ಅಂಕ ನಡೆಯುತ್ತಿತ್ತು ಈ ವೇಳೆಯಲ್ಲಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಕೆರಳಿದ ಯುವಕನೋರ್ವ ತನ್ನ ಕೈಯಲ್ಲಿದ್ದ ಚಾಕುವಿನಿಂದ ಆರು ಮಂದಿಗೆ ಇರಿದಿದ್ದಾನೆ. ಕೂಡಲೇ ಗಾಯಾಳುಗಳನ್ನು ಮಂಗಳೂರು ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಈ ಪೈಕಿ ಮೂವರ ಸ್ಥಿತಿ ಗಂಭೀರವಾಗಿದ್ದು, ಇನ್ನೂ ಮೂವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಕಾಸರಗೋಡು ಜಿಲ್ಲಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಕೈ ಹಿಡಿದ ಪತ್ನಿಯನ್ನೇ 500 ರೂಪಾಯಿ ಮಾರಾಟ ಮಾಡಿದ ಪತಿ : ನಂತರ ನಡೆಯಿತು ಪೈಶಾಚಿಕ ಕೃತ್ಯ

ಇದನ್ನೂ ಓದಿ : ಆಟವಾಡುತ್ತಿದ್ದ ವೇಳೆ 8ನೇ ಮಹಡಿಯಿಂದ ಬಿದ್ದು2 ವರ್ಷದ ಮಗು ಸಾವು

( Knife stabbing in Kasargodu near Kumble: Six people are serious )

Comments are closed.