Indian Army : ಭಾರತೀಯ ಸೇನೆಯನ್ನು ಮದುವೆಗೆ ಆಮಂತ್ರಿಸಿದ ಕೇರಳ ವಧು : ನವ ವಿವಾಹಿತರಿಗೆ ಶುಭ ಹಾರೈಸಿದ ಸೇನೆ

ಮದುವೆಗೆ ಸಾಮಾನ್ಯವಾಗಿ ಬಂಧುಬಳಗದವರಿಗೆ, ಸಂಬಂಧಿಕರಿಗೆ, ಸ್ನೇಹಿತರು ಹಾಗೂ ಗ್ರಾಮಸ್ಥರಿಗೆ ಆಮಂತ್ರಣವನ್ನು ನೀಡುವುದು ವಾಡಿಕೆ. ಆದರೆ ಕೇರಳದ ವಧು ಒಬ್ಬಳು ತನ್ನ ಮದುವೆಗೆ ಭಾರತೀಯ ಸೇನೆಯನ್ನು (Indian Army) ಆಹ್ವಾನಿಸಿದ್ದಾಳೆ. ಆಕೆಯ ಆಮಂತ್ರಣ ಪತ್ರಕ್ಕೆ ಭಾರತೀಯ ಸೇನೆ ಉತ್ತರಿಸಿದ್ದು ಎಲ್ಲೆಡೆ ಈಗ ಸಖತ್‌ ವೈರಲ್‌ ಆಗಿದೆ.

ಕೇರಳದ ವಧು ಕಳುಹಿಸಿದ ಆಹ್ವಾನಕ್ಕೆ ಪ್ರತಿಕ್ರಿಯೆಯಾಗಿ ಸೇನೆಯು ಕೈಬರಹದ ಪತ್ರದ ಮೂಲಕ ನವವಿವಾಹಿತರಿಗೆ ಶುಭ ಹಾರೈಸಿದ್ದಾರೆ. ಸೇನೆಯ ಪ್ರತಿ ಉತ್ತರಕ್ಕೆ ನೆಟ್ಟಿಗರು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ವಿಭಿನ್ನ ಮತ್ತು ಅರ್ಥಪೂರ್ಣವಾಗಿರುವುದು ಯಾವಾಗಲೂ ಗಮನವನ್ನು ಸೆಳೆಯುತ್ತದೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ. ಹೊಸ ಜೀವನಕ್ಕೆ ಕಾಲಿಡುವ ವಧು-ವರರಿಗೆ ಶುಭಹಾರೈಕೆ ಬಹಳ ಮುಖ್ಯ. ಹಿರಿಯರ ಶುಭ ಹಾರೈಕೆ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುತದತೆ ಮತ್ತು ಮನಸ್ಸಿಗೆ ಉಲ್ಲಾಸ ನೀಡುತ್ತದೆ. ಹೊಸ ಭರವಸೆಯೊಂದಿಗೆ ಚೈತನ್ಯ ತುಂಬುತ್ತದೆ.

ಕೇರಳದ ಈ ವಧು ತಮ್ಮ ಮದುವೆಗೆ ದೇಶಕ್ಕಾಗಿ ಪ್ರಾಣ ತೆತ್ತ ಭಾರತೀಯ ಸೇನೆಯನ್ನು ಆಹ್ವಾನಿಸಲು ಯೋಚಿಸಿದ್ದು, ಅದರಂತೆ ಸೇನೆಗೆ ಆಹ್ವಾನ ಪತ್ರಿಕೆ ಕಳುಹಿಸಿದ್ದಾರೆ. ನಿಮ್ಮ ದೇಶ ಸೇವೆಗೆ ನಾವು ಋಣಿಯಾಗಿದ್ದೇವೆ. ನಿಮ್ಮ ಕಠಿಣ ಪರಿಶ್ರಮದಿಂದ ನಾವು ಪ್ರತಿದಿನವೂ ನೆಮ್ಮದಿಯಿಂದ ನಿದ್ರಿಸುತ್ತೇವೆ ಹಾಗೂ ನಾವು ನಮ್ಮ ಪ್ರೀತಿಪಾತ್ರರ ಜೊತೆ ಸಂತೋಷದಿಂದ ದಿನ ಕಳೆಯುತ್ತೇವೆ. ನಮ್ಮ ಮದುವೆಗೆ ನಿಮ್ಮನ್ನು ಆಹ್ವಾನಿಸಲು ಸಂತೋಷವಾಗಿದೆ. ಆ ದಿನ ದಯವಿಟ್ಟು ಬಂದು ಆಶೀರ್ವದಿಸಬೇಕಾಗಿ ವಿನಂತಿ, ಹೀಗೆ ನವೆಂಬರ್ 10 ರಂದು ಮದುವೆಗೆ ಆಹ್ವಾನಿಸಲಾಗಿದೆ. ‌ಈ ಮದುವೆಯ ಪ್ರಮಾಣಪತ್ರವನ್ನು ಭಾರತೀಯ ಸೇನೆಯು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್(Instagram) ಖಾತೆಯಲ್ಲಿ ಹಂಚಿಕೊಂಡಿದೆ.

ಇದನ್ನೂ ಓದಿ : Greenfield Airport: ಮೊದಲ ಗ್ರೀನ್‌ ಫೀಲ್ಡ್‌ ವಿಮಾನ ನಿಲ್ದಾಣ ಉದ್ಘಾಟಿಸಿದ ನರೇಂದ್ರ ಮೋದಿ

ಇದನ್ನೂ ಓದಿ : BL SANTOSH : ಶಾಸಕರಿಗೆ ಹಣದ ಆಮೀಷ ಕೇಸ್.. ಬಿ.ಎಲ್.ಸಂತೋಷ್ ಗೆ ನೋಟಿಸ್

ಇದನ್ನೂ ಓದಿ : VOTER ID SCAM: ವೋಟರ್ ಐಡಿ ಹಗರಣ.. ಸಿದ್ದರಾಮಯ್ಯ ಕೊಟ್ರು ಕೆಜಿಎಫ್.. ಕಾಂತಾರ ಲಿಂಕ್

ನವದಂಪತಿಗಳಿಗೆ ಶುಭ ಹಾರೈಸುತ್ತಾ, ನಮ್ಮನ್ನು ಆಹ್ವಾನಿಸಿದ್ದಕ್ಕಾಗಿ ರಾಹುಲ್ ಮತ್ತು ಕಾರ್ತಿಕ ಅವರಿಗೆ ಧನ್ಯವಾದಗಳು. ನಿಮ್ಮ ದಾಂಪತ್ಯ ಸುಖಮಯವಾಗಿರಲಿ’. ಈ ಪೋಸ್ಟ್ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ 85,000 ಲೈಕ್‌ಗಳನ್ನು ಪಡೆದುಕೊಂಡಿದೆ. ದಂಪತಿಯ ಈ ನಡೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಬಹಳ ಅದ್ಭುತವಾದ ಕಲ್ಪನೆ. ದೇಶಸೇವೆ ಮಾಡುತ್ತಿರುವ ವೀರಯೋಧರಿಗೆ ಪ್ರೀತಿ ವ್ಯಕ್ತಪಡಿಸುವ ಈ ರೀತಿ ತುಂಬಾ ಚೆನ್ನಾಗಿದೆ ಎಂದು ಹಲವರು ಹೇಳುತ್ತಿದ್ದಾರೆ.

Kerala bride invites Indian Army to wedding; received sweet reply: see Viral Post

Comments are closed.