man kills wife : ಹಲ್ಲುಜ್ಜುವ ವಿಚಾರಕ್ಕೆ ಜಗಳ : ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ

ಕೇರಳ : man kills wife : ಗಂಡ – ಹೆಂಡತಿ ಅಂದಮೇಲೆ ಅನೇಕ ವಿಚಾರಗಳಿಗೆ ವೈಮನಸ್ಯ ಉಂಟಾಗುತ್ತದೆ. ಆದರೆ ಈ ವೈಮನಸ್ಯಗಳನ್ನು ಸರಿದೂಗಿಸಿಗೊಂಡು ಸಾಗಿದಾಗಲೇ ಅದನ್ನೊಂದು ದಾಂಪತ್ಯ ಎಂದು ಕರೆಯಲು ಸಾಧ್ಯ. ಆದರೆ ಕೇರಳದ ಪಾಲಕ್ಕಾಡ್​ ಎಂಬಲ್ಲಿ ಮಂಗಳವಾರದಂದು ನಡೆದ ಘಟನೆಯೊಂದು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಪುಟ್ಟ ಕಂದಮ್ಮನಿಗೆ ಹಲ್ಲನ್ನು ಉಜ್ಜದೇ ಮುತ್ತು ನೀಡಬೇಡಿ ಎಂದು ಪತ್ನಿ ಹೇಳಿದ್ದಕ್ಕೆ ಕೋಪಗೊಂಡ ಪತಿಯು ಆಕೆಯನ್ನು ಕೊಂದು ಹಾಕಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


28 ವರ್ಷದ ದೀಪಿಕಾ ಹಾಗೂ ಪತಿ ಅವಿನಾಶ್​ಗೆ ಎರಡೂವರೆ ವರ್ಷದ ಐವಿನ್​ ಎಂಬ ಪುತ್ರನಿದ್ದಾನೆ. ಈತನಿಗೆ ಅವಿನಾಶ್​ ಹಲ್ಲುಜ್ಜದೇ ಮುತ್ತನ್ನು ನೀಡಿದ್ದರು. ಇದಕ್ಕೆ ಕೋಪಗೊಂಡ ಪತ್ನಿ ದೀಪಿಕಾ ಹಲ್ಲುಜ್ಜದೇ ಆತನಿಗೆ ಮುತ್ತು ನೀಡಬೇಡಿ .ಇದು ಒಳ್ಳೆಯದಲ್ಲ ಎಂದು ಹೇಳಿದ್ದಾರೆ.


ಇದರಿಂದ ಕೋಪಗೊಂಡ ಪತಿ ಅವಿನಾಶ್​ ಮಚ್ಚನ್ನು ತೆಗೆದುಕೊಂಡು ದೀಪಿಕಾಳ ಕೊಲೆಗೈದಿದ್ದಾನೆ. ಪುತ್ರ ಐವಿನ್​ ಎದುರಲ್ಲಿಯೇ ಆಕೆಯನ್ನು ಸಾಯಿಸಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ತಾಯಿಯ ಶವವನ್ನು ಅಪ್ಪಿಕೊಂಡು ಐವಿನ್ ಅಳಲು ಆರಂಭಿಸಿದ್ದಾನೆ. ಇತ್ತ ಅವಿನಾಶ್​​ ಪತ್ನಿಯ ಶವದ ಪಕ್ಕದಲ್ಲಿ ಮಚ್ಚು ಹಿಡಿದು ಕೂತಿದ್ದ ಎನ್ನಲಾಗಿದೆ. ಮಗುವಿನ ಆಕ್ರಂದನ ಕೇಳಿದ ನೆರೆ ಹೊರೆಯವರು ಮನೆಗೆ ಬಂದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ದೀಪಿಕಾಳನ್ನು ಪೆರಿಂತಲ್ಮನ್ನಾ ಬಳಿಯ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದರೆ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ.


ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಪಾಲಕ್ಕಾಡ್​ ಠಾಣೆ ಪೊಲೀಸರು ಆರೋಪಿ ಅವಿನಾಶ್​ನನ್ನು ಬಂಧಿಸಿದ್ದಾರೆ. ಬಂಧಿತ ಅವಿನಾಶ್​ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಎರಡು ತಿಂಗಳ ಹಿಂದೆ ಮನೆಗೆ ತೆರಳಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ .

ಇದನ್ನು ಓದಿ : India Vs New Zealand : ನವೆಂಬರ್‌ನಲ್ಲಿ ನ್ಯೂಜಿಲೆಂಡ್ ಟೂರ್: ಕಿವೀಸ್ ವಿರುದ್ಧ ಟಿ20, ಏಕದಿನ ಸರಣಿ ಆಡಲಿದೆ ಟೀಮ್ ಇಂಡಿಯಾ

ಇದನ್ನೂ ಓದಿ : Rohit Sharma’s daughter : ಕ್ಯೂಟ್ ಕ್ಯೂಟ್ ಆಗಿ ತಂದೆಯ ಹೆಲ್ತ್ ರಿಪೋರ್ಟ್ ಕೊಟ್ಟ ರೋಹಿತ್ ಶರ್ಮಾ ಮಗಳು

Kerala man kills wife after spat over brushing of teeth

Comments are closed.