Grow Best Herbs : ನಿಮ್ಮ ಕೈತೋಟದಲ್ಲಿ ಸುಲಭವಾಗಿ ಈ ಗಿಡಮೂಲಿಕೆಗಳನ್ನು ಬೆಳೆಯಬಹುದು! ಯಾವುದು ಆ ಗಿಡಮೂಲಿಕೆಗಳು ಗೊತ್ತಾ?

ಗಿಡಮೂಲಿಕೆ(Herbs)ಗಳು ಪರಿಮಳ ಹೊಂದಿರುವ ಸಸ್ಯ(Plant)ಗಳಾಗಿವೆ. ಇದನ್ನು ವ್ಯಂಜನಗಳಿಗೆ ಪರಿಮಳ ನೀಡಲು, ಸುಗಂಧ ದ್ರವ್ಯ ತಯಾರಿಸಲು, ಮತ್ತು ನೈಸರ್ಗಿಕ ಔಷಧಿಗಳ ತಯಾರಿಸಲು ಮುಂತಾದವುಗಳಿಗೆ ಉಪಯೋಗಿಸುತ್ತಾರೆ(Grow Best Herbs). ಕೊತ್ತೊಂಬರಿ, ರೋಸ್‌ಮೆರಿ, ತುಳಸಿ, ಥೈಮ್‌, ಓಂ ಕಾಳು ಮತ್ತು ಸಬ್ಬಸಿಗೆ ಮುಂತಾದವುಗಳು ಗಿಡಮೂಲಿಕೆಗಳಾಗಿವೆ(Herbs).

ಗಿಡಮೂಲಿಕೆಗಳನ್ನು ಕರಳನ್ನು ಶುದ್ಧೀಕರಿಸಲು, ಜೀರ್ಣಕ್ರಿಯೆ ಸುಧಾರಿಸಲು, ಹಾನಿಗೊಳಗಾದ ಚರ್ಮ ಸರಿಪಡಿಸಲು, ಗಾಯಗಳನ್ನು ಗುಣಪಡಿಸಲು, ಮತ್ತು ಇತರೆ ಸ್ನಾಯುಗಳ ನೋವು ಶಮನಗೊಳಿಸಲು ಮುಂತಾದವುಗಳಿಗೆ ಗಿಡಮೂಲಿಕೆಗಳನ್ನು ಹೆಚ್ಚಾಗಿ ಬಳಸುತ್ತಾರೆ. ಅವುಗಳನ್ನು ವೈದ್ಯಕೀಯ ಚಿಕಿತ್ಸೆಗಳಲ್ಲೂ ಉಪಯೋಗಿಸುತ್ತಾರೆ.

ನಮ್ಮ ವಾತಾವರಣಕ್ಕೆ ಸರಿಹೊಂದುವ ಕೆಲವು ಗಿಡಮೂಲಿಕೆಗಳು ಇಲ್ಲಿವೆ. ಅವುಗಳಿಗೆ ಅತಿ ಕಾಳಜಿಯ ಅವಶ್ಯಕತೆಯಿಲ್ಲ.

ತುಳಸಿ :
ಬಹಳ ಹಿಂದಿನಿಂದಲೂ ಔಷಧೀಯ ಗುಣ ಹೊಂದಿದೆ ಎಂದು ಮಾನ್ಯತೆ ಪಡೆದಿರುವ ತುಳಸಿಯನ್ನು ಸುಲಭವಾಗಿ ಕೈತೋಟ, ತಾರಸಿಯ ತೋಟ ಅಥವಾ ಪಾಟ್‌ಗಳಲ್ಲೂ ಬೆಳೆಯಬಲ್ಲದಾಗಿದೆ. ಇದು ಅತಿ ಹೆಚ್ಚಿನ ಆಂಟಿಒಕ್ಸಿಡೆಂಟ್‌ ಮತ್ತು ಆಂಟಿಬಯಾಟಿಕ್‌ ಗುಣ ಹೊಂದಿದೆ.

ಪುದೀನಾ :
ವಿಶೇಷವಾದ ಪರಿಮಳ ಹೊಂದಿರುವ, ಮತ್ತು ವ್ಯಂಜನಗಳ ಸ್ವಾದ ಹೆಚ್ಚಿಸುವ ಪುದೀನಾ ಅನೇಕ ರೋಗಗಳಿಗೆ ಮನೆಮದ್ದಾಗಿದೆ. ದೇಹ ಶುದ್ಧೀಕರಿಸುವ ಗುಣ ಹೊಂದಿರುವ ಪುದೀನಾ ಆಂಟಿಒಕ್ಸಿಡೆಂಟ್‌ ಮತ್ತು ಆಂಟಿ–ಬ್ಯಾಕ್ಟೀರಿಯಾ ಗುಣವನ್ನೂ ಹೊಂದಿದೆ. ಇದನ್ನೂ ಬೆಳೆಯುವು ಬಹಳ ಸುಲಭ ಕಡಿಮೆ ಜಾಗದಲ್ಲಿ ಉತ್ತಮವಾಗಿ ಬೆಳೆಯಬಹುದು.

ಕೊತ್ತಂಬರಿ :
ಮೂಲತಃ ಇಟಲಿಯಿಂದ ಬಂದ ಕೊತ್ತಂಬರಿ ಭಾರತದಲ್ಲಿ ಈಗ ಬಹಳ ಜನಪ್ರಿಯವಾಗಿದೆ. ‌ಇಲ್ಲಿಯ ಹವಾಮಾನದಲ್ಲಿ ಸುಲಭವಾಗಿ ಬೆಳೆಯಬಹುದಾಗಿದೆ. ಆಂಟಿಒಕ್ಸಿಡೆಂಟ್‌ ನ ಆಕರವಾದ ಕೊತ್ತಂಬರಿ ಶೀತ ಮತ್ತು ಕೆಮ್ಮಿಗೆ ಉತ್ತಮವಾಗಿದೆ. ಅಡುಗೆಯ ಪರಿಮಳ ಹೆಚ್ಚಿಸಲೂ ಇದನ್ನು ಬಳಸುತ್ತಾರೆ.

ಶುಂಠಿ :
ತೀಕ್ಷ್ಣ ಪರಿಮಳ ಮತ್ತು ರುಚಿ ಹೊಂದಿರುವ ಶುಂಠಿ ಭಾರತೀಯರ ಪ್ರತಿಯೊಬ್ಬರ ಮನೆಯಲ್ಲೂ ಸಿಗುವ ಸಾಮಾನ್ಯ ಮೂಲಿಕೆಯಾಗಿದೆ. ಸಾಮಾನ್ಯ ಶೀತ, ಕೆಮ್ಮು ರಾಮಬಾಣದಂತೆ ಕೆಲಸ ಮಾಡುವ ಶುಂಠಿಯಲ್ಲಿ ಹೇರಳವಾದ ಆಂಟಿಬಯಾಟಿಕ್‌ ಮತ್ತು ಆಂಟಿ ಫಂಗಲ್‌ ಗುಣವಿದೆ.
ಕೈತೋಟದಲ್ಲಿ ಸುಲಭವಾಗಿ ಬೆಳೆಯಬಹುದಾದ ಶುಂಠಿಯನ್ನು ಪಾಟ್‌ಗಳಲ್ಲೂ ಸಹ ಬೆಳೆಸಬಹುದಾಗಿದೆ.

ಅರಿಶಿಣ :
ನೈಸರ್ಗಿಕ ಬಣ್ಣ ತಯಾರಿಕೆ ಮತ್ತು ಅಡುಗೆಯ ಪರಿಮಳ ಹೆಚ್ಚಿಸುವ ಅರಿಶಿಣವನ್ನು ಅನೇಕ ಔಷಧಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಅರಿಶಿಣ ಸ್ವಾಭಾವಿಕವಾಗಿಯೇ ಆಂಟಿಸೆಪ್ಟಿಕ್‌, ಆಂಟಿಬಯಾಟಿಕ್‌, ಆಂಟಿ ಫಂಗಲ್‌ ಗುಣ ಹೊಂದಿದೆ. ದೇಹ ಶುದ್ಧೀಕರಿಸಲು ಇದನ್ನು ಉಪಯೋಗಿಸುತ್ತಾರೆ. ಅಧ್ಯಯನದ ಪ್ರಕಾರ ಅರಿಶಿಣ ಕ್ಯಾನ್ಸರ್‌ ಗುಣ ಪಡಿಸುವ ವೈಶಿಷ್ಟ್ಯ ಹೊಂದಿದೆ. ನಿಮ್ಮ ಕೈತೋಟದ ಸ್ವಲ್ಪ ಜಾಗದಲ್ಲಿ ಮಡಿಗಳನ್ನು ಮಾಡಿ ಸುಲಭವಾಗಿ ಬೆಳಸಬಹುದು.

ಇದನ್ನೂ ಓದಿ :Mosquito-Free Tips : ಈ ಮಳೆಗಾಲದಲ್ಲಿ ನಿಮ್ಮ ಮನೆಯನ್ನು ಸೊಳ್ಳೆಗಳಿಂದ ನೈಸರ್ಗಿಕವಾಗಿ ರಕ್ಷಿಸುವುದು ಹೇಗೆ ಗೊತ್ತಾ?

ಇದನ್ನೂ ಓದಿ : Grow Tomatoes : ನಿಮ್ಮ ಕೈತೋಟದಲ್ಲಿ ಜ್ಯೂಸಿ ಟೊಮೆಟೋ ಬೆಳೆಯುವುದು ಹೇಗೆ ಗೊತ್ತಾ?

(Grow Best Herbs what herbs can we grow in our home garden)

Comments are closed.