Viral News : ಹೆಣ್ಣು ಮಕ್ಕಳ ಎದೆ ಮುಟ್ಟಿ ಮಾಯವಾಗ್ತಾನೆ ವಿಕೃತ ಕಾಮಿ : ಬೆಚ್ಚಿ ಬೀಳಿಸಿದೆ ವೈದ್ಯಕೀಯ ವಿದ್ಯಾರ್ಥಿಯ ಪೋಸ್ಟ್‌

ತಿರುವನಂತಪುರ : ಯುವತಿಯರು, ಮಹಿಳೆಯರು ಸಾರ್ವಜನಿಕವಾಗಿ, ಜನಜಂಗುಳಿ ಇರುವ ಕಡೆಗಳಲ್ಲಿ ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗುವ ಪ್ರಕರಣ ಹೆಚ್ಚುತ್ತಿದೆ. ಈ ನಡುವಲ್ಲೇ ಕೇರಳದ ವೈದ್ಯಕೀಯ ವಿದ್ಯಾರ್ಥಿಯೋರ್ವ ತನ್ನನ್ನು ಸ್ತನಗಳ ಬೇಟೆಗಾರ ಎಂದು ಹೇಳಿಕೊಂಡಿದ್ದಾರೆ. 8ಗಂಟೆಯಲ್ಲಿ 52 ಹೆಣ್ಣು ಮಕ್ಕಳ ಎದೆಯನ್ನು ಮುಟ್ಟಿ ಮಾಯವಾಗಿದ್ದಾನೆ. ವಿದ್ಯಾರ್ಥಿಯ ಈ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ತಲ್ಲಣ ಮೂಡಿಸಿದೆ.

ಖ್ಯಾತ ಗಾಯಕಿ ಚಿನ್ಮಯಿ ಶ್ರೀಪಾದ್‌ ಅವರು ವಿಕೃತ ಕಾಮಿ ವಿದ್ಯಾರ್ಥಿಯ ಪೋಸ್ಟ್‌ನ್ನು ಟ್ಭಿಟ್‌ ಮಾಡಿದ್ದಾರೆ. ಐಜಿ ಹ್ಯಾರಿ ಟಿಡಿಎಂ ಎಂಬಾತ ತಾನು ನಡೆದಿದ ನೀಚ ಕೃತ್ಯವನ್ನು ಇನ್‌ಸ್ಟಾಗ್ರಾಂನಲ್ಲಿ ಹೆಮ್ಮೆ ಪಟ್ಟುಕೊಂಡು ಪೋಸ್ಟ್‌ ಮಾಡಿದ್ದಾನೆ. ಆತ ಮಾಡಿರುವ ಪೋಸ್ಟ್‌ ಸಾಕಷ್ಟು ವೈರಲ್‌ ಆಗಿದ್ದು, ಇದೀಗ ಗಾಯಕಿ ಚಿನ್ಮಯಿ ಶ್ರೀಪಾದ್‌ ಆಕ್ರೋಶ ಹೊರಹಾಕಿದ್ದಾರೆ.

ಐಜಿ ಹ್ಯಾರಿ ತಾನು ಪ್ರೌಢಾವಸ್ಥೆಯಲ್ಲಿದ್ದಾಗ ಜನಜಂಗುಳಿ ಇರುವ ಸ್ಥಳದಲ್ಲಿ ಹೆಣ್ಣು ಮಕ್ಕಳ ಎದೆಯನ್ನು ಮುಟ್ಟಿ ಮಾಯವಾಗುತ್ತಿದ್ದ. ಹೆಣ್ಣು ಮಕ್ಕಳು ಅನುಭವಿಸುತ್ತಿದ್ದ ಯಾತನೆ, ನೋವಿನ ಬಗ್ಗೆ ಈತನಿಗೆ ಪಶ್ಚಾತಾಪವೇ ಇಲ್ಲ. ಕೆಲವು ಬಾರಿ ಹುಡುಗಿಯರಿಗೆ ಈತ ಎದೆ ಮುಟ್ಟಿರುವುದು ಅರಿವಿಗೆ ಬಂದು ಕಪಾಳ ಮೋಕ್ಷಕ್ಕೆ ಮುಂದಾದ ಕೂಡಲೇ ಕಣ್ಣೀರು ಸುರಿಸುತ್ತಿದ್ದನಂತೆ. ತನ್ನ ಮುಖಭಾವಕ್ಕೆ ಅವರು ಮರುಳಾಗಿ ತನ್ನನ್ನು ಕ್ಷಮಿಸಿ ಬಿಡುತ್ತಿದ್ರು. ಇದುವರೆಗೆ ಈತ ಸುಮಾರು 300ಕ್ಕೂ ಅಧಿಕ ಹೆಣ್ಣು ಮಕ್ಕಳ ಎದೆಯನ್ನು ಮುಟ್ಟಿದ್ದಾನಂತೆ, ಅಲ್ಲದೇ ತನ್ನ ಹಾಗೂ ಸ್ನೇಹಿತರ ನಡುವಿನ ಈ ಗೇಮ್‌ ಚಾಲೆಂಜಿಂಗ್‌ ಆಗಿ ಇರುತ್ತಿತ್ತು ಎಂದು ಹೇಳಿಕೊಂಡಿದ್ದಾನೆ.

ಇದನ್ನೂ ಓದಿ : ಇಂಜಿನಿಯರಿಂಗ್‌ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ : ಕುಡಿದ ಮತ್ತಲ್ಲಿ ದುಷ್ಕೃತ್ಯ , ಆರೋಪಿ ಸ್ನೇಹಿತ ಅರೆಸ್ಟ್‌

ಸಾರ್ವಜನಿಕ ಸ್ಥಳದಲ್ಲಿ ಇಂತಹ ವಿಕೃತ ಕಾಮಿಗಳು ಕುತೃತ್ಯ ಮೆರೆಯುವಾಗ ಹೆಣ್ಣು ಮಕ್ಕಳು ಆಕಸ್ಮಿಕವಾಗಿ ಇಂತಹ ಘಟನೆ ನಡೆದಿದೆ ಎಂದು ಭಾವಿಸುವುದು ತಪ್ಪಾಗುತ್ತದೆ. ಯುವತಿಯರು ಹಾಗೂ ಮಹಿಳೆಯರು ಇಂತಹ ಕಾಮುಕರಿಗೆ ತಕ್ಕ ಕಾನೂನು ಪಾಠ ಕಲಿಸಬೇಕು ಎಂದು ಚಿನ್ಮಯಿ ಕಿವಿ ಮಾತು ಹೇಳಿದ್ದಾರೆ.

ಇದನ್ನೂ ಓದಿ : ಮಗುವಿನ ಮೇಲೆ ಪೈಶಾಚಿಕ ಕೃತ್ಯ : ಲೈಂಗಿಕ ಕೃತ್ಯವೆಸಗಿ, ಉಪ್ಪುನೀರಿನ ಟ್ಯಾಂಕ್‌ಗೆ ಎಸೆದ ಆರೋಪಿ

ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದ್ದರೂ ಕೂಡ ಕೆಲವು ಯುವತಿಯರು, ಮಹಿಳೆಯರು ಮರ್ಯಾದೆ ಅಂಜಿ ಸುಮ್ಮನಾಗುತ್ತಿದ್ದಾರೆ. ಇನ್ಮುಂದೆ ಇಂತಹ ಘಟನೆಗಳು ನಡೆದಾಗ ಧೈರ್ಯವಾಗಿ ಎದುರಿಸುವ ಕಾರ್ಯವನ್ನು ಮಾಡಿದ್ರೆ ಇಂತಹ ಕೃತ್ಯ ಮರುಕಳಿಸದಂತೆ ಮಾಡಲು ಸಾಧ್ಯವಾಗುತ್ತದೆ.

Comments are closed.