Norovirus : ಕೇರಳಕ್ಕೆ ಎಂಟ್ರಿಕೊಟ್ಟ ನೊರಾ ವೈರಸ್​ : ಪ್ರಾಥಮಿಕ ಶಾಲೆಯ ಇಬ್ಬರು ಮಕ್ಕಳಿಗೆ ಸೋಂಕು

Norovirus : ವಿಶ್ವದಲ್ಲಿ ಕೊರೊನಾ ವೈರಸ್​ ಹಾಗೂ ಮಂಕಿಪಾಕ್ಸ್​ನ ಆತಂಕದ ನಡುವೆಯೇ ಕೇರಳದಲ್ಲಿ ಇದೀಗ ಮತ್ತೊಂದು ಮಾರಿ ವಕ್ಕರಿಸಿದೆ. ಕೇರಳದ ತಿರುವನಂತಪುರಂನಲ್ಲಿ ಪ್ರಾಥಮಿಕ ಶಾಲೆಯ ಇಬ್ಬರು ವಿದ್ಯಾರ್ಥಿಗಳು ನೊರೊವೈರಸ್​ ಸೋಂಕಿಗೆ ತುತ್ತಾಗಿದ್ದಾರೆ. ಸೋಂಕಿತ ಮಕ್ಕಳಲ್ಲಿ ವಾಂತಿ, ಭೇದಿ ಹಾಗೂ ಜ್ವರದ ಲಕ್ಷಣಗಳು ಕಂಡು ಬಂದಿವೆ. ನೊರೊವೈರಸ್​ ಒಂದು ಸಾಂಕ್ರಾಮಿಕ ಕಾಯಿಲೆಯಾಗಿದ್ದು ಇದು ಕಲುಷಿತ ಆಹಾರ, ನೀರುಗಳಿಂದ ಹರಡುತ್ತದೆ.


ಹೆಚ್ಚಿನ ವರದಿಗಾಗಿ ಸೋಂಕಿತ ಮಕ್ಕಳ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಮಧ್ಯಾಹ್ನ ನೀಡಿದ ಊಟದಿಂದ ಈ ಕಾಯಿಲೆ ಬಂದಿರಬಹುದು ಎಂದು ಅಂದಾಜಿಸಲಾಗಿದೆ. ಈ ಘಟನೆಯ ಬಳಿಕ ಕೇರಳ ಶಿಕ್ಷಣ ಸಚಿವ ವಿ. ಶಿವಕುಟ್ಟಿ ಅಧಿಕಾರಿಗಳೊಂದಿಗೆ ಸಭೆಯನ್ನು ಕರೆದಿದ್ದು ಮಧ್ಯಾಹ್ನದ ಬಿಸಿಯೂಟದಲ್ಲಿ ಕೈಗೊಳ್ಳಬಹುದಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಕಳೆದ ವರ್ಷ ನವೆಂಬರ್​ ತಿಂಗಳಲ್ಲಿಯೂ ವಯ್ನಾಡಿನ ಪಶುವೈದ್ಯಕೀಯ ಕಾಲೇಜಿನ ಡಜನ್​ಗೂ ಅಧಿಕ ವಿದ್ಯಾರ್ಥಿಗಳು ಇದೇ ವೈರಸ್​ನ ಸೋಂಕಿಗೆ ಒಳಗಾಗಿದ್ದರು.


ನೊರೊವೈರಸ್​​ ಎನ್ನುವುದು ಎಲ್ಲಾ ವಯೋಮಾನದವರಿಗೆ ಬರುವ ಒಂದು ಕಾಯಿಲೆಯಾಗಿದೆ. ಇದು ಅತಿಸಾರವನ್ನು ಉಂಟುಮಾಡವಲ್ಲ ರೋಟವೈರಸ್​ನಂತೆಯೇ ಒಂದು ಮಾರಕ ಸೋಂಕಾಗಿದೆ. ಸೋಂಕಿಗೆ ಒಳಗಾದವರಲ್ಲಿ ಮೊದಲು ವಾಂತಿ, ಅತಿಸಾರದಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಸೋಂಕಿಗೆ ತುತ್ತಾದ ಎರಡು ದಿನಗಳ ಬಳಿಕ ಈ ಲಕ್ಷಣಗಳು ಕಾಣಿಸಿಕೊಳ್ಳಲು ಶುರುವಾಗುತ್ತದೆ. ಇದಾದ ಬಳಿಕ ರೋಗಿಗಳು ಹೊಟ್ಟೆ ನೋವು, ಜ್ವರ, ತಲೆನೋವು ಹಾಗೂ ಮೈ ಕೈ ನೋವುಗಳಿಂದ ಬಳಲುತ್ತಾರೆ. ವಿಪರೀತ ಸಂದರ್ಭಗಳಲ್ಲಿ ನಿರ್ಜಲೀಕರಣ ಕೂಡ ಉಂಟಾಗಬಹುದು.

ಇದನ್ನು ಓದಿ : Maharashtra : ಮುಂಬೈನಲ್ಲಿ ಕೋವಿಡ್ -19 ಆರ್ಭಟ : ಲಾಕ್‌ಡೌನ್‌ ಜಾರಿ ಸಾಧ್ಯತೆ

ಇದನ್ನೂ ಓದಿ : India To Tour West Indies : ಭಾರತ ವೆಸ್ಟ್‌ ಇಂಡಿಸ್‌ ಸರಣಿ : T20, ಏಕದಿನ ಸರಣಿ ವೇಳಾಪಟ್ಟಿ ಪ್ರಕಟ

Kerala: Two primary school students infected with Norovirus

Comments are closed.