Kisan Credit Card : ಕೇಂದ್ರ ಬಜೆಟ್‌ಗೂ ಮೊದಲು ಸರಕಾರದಿಂದ ರೈತರಿಗೆ ಭರ್ಜರಿ ಗಿಫ್ಟ್

ನವದೆಹಲಿ : ಕೇಂದ್ರ ಸರಕಾರದಿಂದ ಭಾರೀ ಉಡುಗೊರೆಯ ನಿರೀಕ್ಷೆಯಲ್ಲಿರುವ ರೈತರಿಗಾಗಿ ಬಜೆಟ್‌ಗೂ ಮೊದಲೇ ಸಿಹಿ ಸುದ್ದಿಯೊಂದನ್ನು ನೀಡಿದೆ. ದೇಶದ ಬೆನ್ನೆಲುಬಾಗಿರುವ ರೈತರನ್ನು ಉತ್ತೇಜಿಸುವ ನಿಟ್ಟಿನಲ್ಲಿ ದೇಶದ ಎಲ್ಲಾ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card) ಸೌಲಭ್ಯವನ್ನು ಒದಗಿಸುವಂತೆ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಮುಖ್ಯಸ್ಥರಿಗೆ ಸರಕಾರ ಸೂಚನೆ ನೀಡಿದೆ. ಈ ಯೋಜನೆ ಅಡಿಯಲ್ಲಿ ರೈತರಿಗೆ ಕೃಷಿಗೆ ಸಂಬಂಧಪಟ್ಟಂತೆ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ ಈ ಯೋಜನೆಯ ಪ್ರಯೋಜನವನ್ನು ಎಲ್ಲಾ ರೈತಾಪಿ ಮಿತ್ರರು ಪಡೆದುಕೊಳ್ಳಬೇಕು ಎನ್ನುವುದು ಸರಕಾರದ ಉದ್ದೇಶವಾಗಿದೆ.

ನಿನ್ನೆ (20 ಜನವರಿ) ಬ್ಯಾಂಕಿಂಗ್ ಕಾರ್ಯದರ್ಶಿ ವಿವೇಕ್ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಬ್ಯಾಂಕಿಂಗ್ ವಲಯದ ಒಂದು ದಿನದ ಪರಿಶೀಲನಾ ಸಭೆಯಲ್ಲಿ, ಕೃಷಿ ಮೂಲ ಸೌಕರ್ಯಗಳ ಪ್ರಗತಿ ಸಭೆಯಲ್ಲಿ ನಿಧಿ ( ಪರ್ಯಾಯ ಹೂಡಿಕೆ ನಿಧಿ (AIF) ಯೋಜನೆಯನ್ನು ಸಹ ಪರಿಶೀಲಿಸಲಾಯಿತು. ಈ ವೇಳೆ ದೇಶದ ಎಲ್ಲಾ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲಗಳ ಸಂಪೂರ್ಣ ಮಾಹಿತಿಯನ್ನು ಕಾಲಮಿತಿಯಲ್ಲಿ ಡಿಜಿಟಲೀಕರಣಗೊಳಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಸಲಹೆ ನೀಡಲಾಯಿತು. ಜೊತೆಗೆ ಪಿಎಂ ಕಿಸಾನ್ ಡೇಟಾಬೇಸ್‌ನ ಸಹಾಯದಿಂದ ದೇಶದ ಪ್ರತಿ ರೈತರಿಗೂ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯವನ್ನು ಒದಗಿಸುವಂತೆಯೂ ನಿರ್ದೇಶಿಸಲಾಯಿತು.

ಈ ಸಭೆಯಲ್ಲಿ ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (PMJDY), ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (PMJJBY), ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY), ಅಟಲ್ ಪಿಂಚಣಿ ಯೋಜನೆ (APY), ಪ್ರಧಾನ ಮಂತ್ರಿ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಪ್ರಗತಿ ಮುದ್ರಾ ಮತ್ತು ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ (PMSVANidhi), ಮತ್ತು ಕೃಷಿ ಸಾಲ ಇತ್ಯಾದಿಗಳನ್ನು ಸಹ ಪರಿಶೀಲಿಸಲಾಯಿತು.

ಇದನ್ನೂ ಓದಿ : ಎಸ್‌ಬಿಐ ಗ್ರಾಹಕರೇ ಗಮನಕ್ಕೆ : ನಿಮ್ಮ ಬ್ಯಾಂಕ್‌ ಖಾತೆಯ ಹಣಕ್ಕೆ ಕನ್ನ ಬೀಳಬಹುದು ಎಚ್ಚರ !

ಇದನ್ನೂ ಓದಿ : ಪಿಂಚಣಿದಾರರ ಗಮನಕ್ಕೆ : ನಿಮ್ಮ ಸಮಸ್ಯೆಗಳಿಗೆ ಇಪಿಎಫ್ಒ ಪೋರ್ಟಲ್‌ನಿಂದ ಪರಿಹಾರ ಲಭ್ಯ

ಇದನ್ನೂ ಓದಿ : ಉಬರ್ ಉದ್ಯೋಗಿಗಳಿಗೆ ಗುಡ್‌ ನ್ಯೂಸ್ : ಉದ್ಯೋಗ ಕಡಿತ ಇಲ್ಲ ಎಂದ ಸಿಇಒ ಖೋಸ್ರೋಶಾಹಿ

ಸುಸ್ಥಿರ ಬ್ಯಾಂಕಿಂಗ್ ಸಂಬಂಧಕ್ಕಾಗಿ ಗ್ರಾಹಕರ ಅನುಭವವನ್ನು ಹೆಚ್ಚು ಉತ್ಕೃಷ್ಟಗೊಳಿಸಲು ಮತ್ತು ಆನಂದದಾಯಕವಾಗಿಸಲು ಬ್ಯಾಂಕುಗಳು ಎಲ್ಲ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ ಎಂಬ ಅಂಶವನ್ನು ಒತ್ತಿ ಹೇಳಿದ ಬ್ಯಾಂಕಿಂಗ್ ಕಾರ್ಯದರ್ಶಿ ವಿವೇಕ್ ಜೋಶಿ, ಗ್ರಾಹಕರ ನಿರೀಕ್ಷೆಗಳನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್‌ಗಳಿಗೆ ಗ್ರಾಹಕ ಸೇವಾ ರೇಟಿಂಗ್ ಅನ್ನು ತ್ವರಿತಗೊಳಿಸಲು ಭಾರತೀಯ ಬ್ಯಾಂಕ್‌ಗಳ ಸಂಘವನ್ನು ಈಗಾಗಲೇ ವಿನಂತಿಸಲಾಗಿದೆ. ಇದಲ್ಲದೆ, ತಮ್ಮೆಲ್ಲಾ ಗ್ರಾಹಕರಿಗೂ ಗುಣಮಟ್ಟದ ಸೇವೆಯನ್ನು ಹೆಚ್ಚಿಸಲು ಕೂಡ ಸೂಚಿಸಲಾಗಿದೆ ಎಂದು ತಿಳಿಸಿದರು.

Kisan Credit Card: A huge gift from the government to the farmers before the central budget

Comments are closed.