Woman killed daughter: 3 ವರ್ಷದ ಮಗಳನ್ನೇ ಕೊಲೆಗೈದು ಚಲಿಸುತ್ತಿದ್ದ ರೈಲಿನಿಂದ ಎಸೆದ ಮಹಿಳೆ

ಜೈಪುರ: (Woman killed daughter) ಮಹಿಳೆಯೊಬ್ಬರು ತನ್ನ ಮೂರು ವರ್ಷದ ಮಗಳನ್ನು ಕೊಂದು ಚಲಿಸುತ್ತಿದ್ದ ರೈಲಿನಿಂದ ಎಸೆದ ಘಟನೆ ರಾಜಸ್ಥಾನದ ಶ್ರೀ ಗಂಗಾನಗರ ಜಿಲ್ಲೆಯಲ್ಲಿ ನಡೆದಿದೆ. ಆರೋಪಿಗಳನ್ನು ಸುನೀತಾ ಮತ್ತು ಆಕೆಯ ಪ್ರಿಯಕರ ಸನ್ನಿ ಅಲಿಯಾಸ್ ಮಾಲ್ಟಾ ಎಂದು ಗುರುತಿಸಲಾಗಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮಧ್ಯರಾತ್ರಿ ವೇಳೆ ಮಹಿಳೆ ತನ್ನ ಮಗಳು ಕಿರಣ್‌ನನ್ನು ಕತ್ತು ಹಿಸುಕಿ ಕೊಂದು ಶವವನ್ನು ಸನ್ನಿ ಸಹಾಯದಿಂದ ಬೆಡ್‌ಶೀಟ್‌ನಲ್ಲಿ ಸುತ್ತಿ ಶ್ರೀಗಂಗಾನಗರ ರೈಲು ನಿಲ್ದಾಣಕ್ಕೆ ಹೋಗಿದ್ದಳು. ಬೆಳಿಗ್ಗೆ 6:10 ಕ್ಕೆ ರೈಲು ಹತ್ತಿದ್ದಾರೆ. ರೈಲು ಕಾಲುವೆ ಮೇಲಿನ ಸೇತುವೆಯನ್ನು ತಲುಪುತ್ತಿದ್ದಾಗ ಚಲಿಸುತ್ತಿದ್ದ ರೈಲಿನಿಂದ ಬಾಲಕಿಯ ಶವವನ್ನು ಆರೋಪಿಗಳು ಎಸೆದಿದ್ದಾರೆ. ಅರೋಪಿಗಳು ಕಾಲುವೆಗೆ ಶವವನ್ನು ಎಸೆಯಲು ಬಯಸಿದ್ದಾರೆ ಅದರೆ ತಪ್ಪಿ ಶವ ರೈಲು ಹಳಿಯ ಮೇಲೆ ಬಿದ್ದಿದೆ.

ರೈಲು ಹಳಿ ಪರೀಕ್ಷಕರ ಕಣ್ಣಿಗೆ ಶವ ಕಾಣಿಸಿಕೊಂಡಿದ್ದು, ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಮೃತ ಬಾಲಕಿಯ ಗುರುತನ್ನು ಪತ್ತೆ ಹಚ್ಚಿದ್ದಾರೆ. ನಂತರದಲ್ಲಿ ಆರೋಪಿಯನ್ನು ಪತ್ತೆ ಹಚ್ಚುವುದರಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.

ವಿಚಾರಣೆ ವೇಳೆ ಆರೋಪಿ ಸುನೀತಾ ತಪ್ಪೊಪ್ಪಿಕೊಂಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿ ಸುನೀತಾ ಗೆ ಐದು ಮಕ್ಕಳಿದ್ದು, ಪತಿಯನ್ನು ಬಿಟ್ಟು ಪ್ರಿಯಕರ ಸನ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಶಾಸ್ತ್ರಿನಗರದಲ್ಲಿ ವಾಸಿಸುತ್ತಿದ್ದರು. ಇನ್ನೂ ಮತ್ತುಳಿದ ಮೂವರು ಮಕ್ಕಳು ಪತಿಯೊಂದಿಗೆ ವಾಸಿಸುತಿದ್ದಾರೆ ಎಂದು ತಿಳಿದುಬಂದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಶ್ರೀಗಂಗಾನಗರ) ಆನಂದ್ ಶರ್ಮಾ ತಿಳಿಸಿದ್ದಾರೆ.

ಇದನ್ನೂ ಓದಿ : Minor girl set on fire: ಅಪ್ರಾಪ್ತ ಬಾಲಕಿ ಬೆಂಕಿ ಹಚ್ಚಿದ ನೀಚರು: ಕಾರಣವಾಗಿದ್ದು ಆ ಒಂದು ಮದುವೆ ಕಾರ್ಯಕ್ರಮ

ಪ್ರಪಂಚದಲ್ಲಿ ಎಷ್ಟೋ ಮಂದಿ ಮಕ್ಕಳಿಲ್ಲದೇ ದೇವರು ಹರಕೆ ಎಂದು ಓಡಾಡುತ್ತಾರೆ. ಆದರೆ ಮಕ್ಕಳ ಭಾಗ್ಯ ಇದ್ದವರು ಮಕ್ಕಳನ್ನು ಸಾಕಲಾಗದೆಯೋ ಅಥವಾ ಇನ್ನಾವುದೋ ಕಾರಣಕ್ಕೆ ಮಕ್ಕಳನ್ನು ಎಲ್ಲೆಂದರಲ್ಲಿ ಬಿಟ್ಟು ಬರುವುದು, ಮಕ್ಕಳನ್ನು ಕೊಲ್ಲುವುದು ಈ ರೀತಿಯ ಕೃತ್ಯವನ್ನು ಎಸೆಯುತ್ತಾರೆ.

ಇದನ್ನೂ ಓದಿ : ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಹಂತಕರ ಸುಳಿವು ಕೊಟ್ಟವರಿಗೆ 10 ಲಕ್ಷ ಬಹುಮಾನ ಘೋಷಿಸಿದ ಎನ್ಐಎ

ಇದನ್ನೂ ಓದಿ : Thieves arrested: ಬ್ಯಾಂಕ್‌ ದರೋಡೆ ಮಾಡಲು ಬಂದಿದ್ದ ಮೂವರು ದರೋಡೆಕೋರರು ಅರೆಸ್ಟ್‌

Woman killed daughter: A woman threw her 3-year-old daughter from a moving train

Comments are closed.