james movie ott premiere : ಜೇಮ್ಸ್​ ಸಿನಿಮಾ ಒಟಿಟಿ ಪ್ರದರ್ಶನಕ್ಕೆ ದಿನಗಣನೆ ಆರಂಭ

ಪವರ್​ ಸ್ಟಾರ್​ ಪುನೀತ್​ ರಾಜ್​​ಕುಮಾರ್​ ಅಭಿನಯದ ಕೊನೆಯ ಚಿತ್ರ ಜೇಮ್ಸ್ (james movie ott premiere)​ ಸಾಕಷ್ಟು ಕಾರಣಗಳಿಂದ ಅಭಿಮಾನಿಗಳ ಪಾಲಿಗೆ ವಿಶೇಷ ಎನಿಸಿದೆ. ಇನ್ನು ನಮ್ಮ ನೆಚ್ಚಿನ ನಟನನ್ನು ದೊಡ್ಡ ಪರದೆಯಲ್ಲಿ ನೋಡಲು ಸಾಧ್ಯವಿಲ್ಲ ಎಂಬ ಕೊರಗು ಪ್ರತಿಯೊಬ್ಬ ಕನ್ನಡಿಗನ ಎದೆಯಲ್ಲಿಯೂ ಇದೆ.


ಈಗಾಗಲೇ ಸಾಕಷ್ಟು ಮಂದಿ ಜೇಮ್ಸ್​ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಹೋಗಿ ವೀಕ್ಷಿಸಿದ್ದಾರೆ. ಆರಂಭದಲ್ಲಿ ಹೌಸ್​ಫುಲ್​ ಪ್ರದರ್ಶನ ಕಂಡ ಈ ಸಿನಿಮಾಗೆ ಬಳಿಕ ಸಾಕಷ್ಟು ಕಾರಣಗಳಿಂದಾಗಿ ಚಿತ್ರಮಂದಿರಗಳಲ್ಲಿ ಹೆಚ್ಚು ಪ್ರದರ್ಶನ ಕಾಣಲು ಅವಕಾಶ ಸಿಗಲಿಲ್ಲ. ಆದರೆ ಅಪ್ಪು ಕೊನೆಯ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಆಗಲಿಲ್ಲ ಎಂಬುವವರಿಗೆ ಚಿತ್ರತಂಡ ಇದೀಗ ಶುಭ ಸುದ್ದಿಯೊಂದನ್ನು ನೀಡಿದೆ.


ಜೇಮ್ಸ್​ ಸಿನಿಮಾ ಇದೇ ಬರುವ 14ರಂದು ಒಟಿಟಿ ವೇದಿಕೆಯಲ್ಲಿ ರಿಲೀಸ್ ಆಗಲಿದ್ದು ಅಭಿಮಾನಿಗಳು ಮನೆಯಲ್ಲಿಯೇ ಕುಳಿತು ಕರ್ನಾಟಕ ರತ್ನನನ್ನು ಕಣ್ತುಂಬಿಕೊಳ್ಳಬಹುದಾಗಿದೆ . ಜೇಮ್ಸ್​ ಸಿನಿಮಾದ ಇನ್ನೇನು ಕೆಲವೇ ದಿನಗಳಲ್ಲಿ ಸೋನಿ ಲಿವ್​​ನಲ್ಲಿ ಪ್ರದರ್ಶನ ಕಾಣಲಿದೆ .


ಚೇತನ್​ ಕುಮಾರ್ ಆಕ್ಷನ್​ ಕಟ್​ ಹೇಳಿದ್ದ ಈ ಸಿನಿಮಾಗೆ ಕಿಶೋರ್​ ಪತ್ತಿಕೊಂಡ ಬಂಡವಾಳ ಹೂಡಿದ್ದರು. ಸಿನಿಮಾ ಕೆಲಸ ಇನ್ನೂ 30 ಪ್ರತಿಶತ ಬಾಕಿ ಇರುವಾಗಲೇ ಪುನೀತ್​ ಬಾರದ ಲೋಕಕ್ಕೆ ತೆರಳಿದ್ದರು. ಹೀಗಾಗಿ ಸಿನಿಮಾದಲ್ಲಿ ಪುನೀತ್​ ನಟ ಶಿವಣ್ಣ ಧ್ವನಿ ನೀಡಿದ್ದರು. ಈ ಸಿನಿಮಾದ ಮೂಲಕ ನಟಿ ಪ್ರಿಯಾ ಆನಂದ್​ ಮತ್ತೊಮ್ಮೆ ಅಪ್ಪುಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.


ಶಿವರಾಜ್​ ಕುಮಾರ್ ಹಾಗೂ ರಾಘವೇಂದ್ರ ರಾಜ್​ಕುಮಾರ್​ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಅಪ್ಪು ಎರಡು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು ಫೈಟಿಂಗ್​ ಹಾಗೂ ಡ್ಯಾನ್ಸ್​ ಮೂಲಕ ಅಭಿಮಾನಿಗಳ ಕಣ್ಣಿಗೆ ರಸದೌತಣವನ್ನೇ ಬಡಿಸಿದ್ದಾರೆ.


ಸೋನಿ ಲಿವ್​ ಸಂಸ್ಥೆ ನೀಡಿರುವ ಮಾಹಿತಿಯ ಪ್ರಕಾರ ಏಪ್ರಿಲ್​ 14ರಿಂದ ಈ ಸಿನಿಮಾವು ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ರಿಲೀಸ್​ ಆಗಲಿದೆ.

ಇದನ್ನು ಓದಿ : KGF 2 Yash : ಸಲ್ಮಾನ್, ಶಾರೂಖ್ ಜೊತೆ ಹೋಲಿಸಬೇಡಿ : ಫ್ಯಾನ್ಸ್ ಗೆ ಯಶ್ ಮನವಿ

ಇದನ್ನೂ ಓದಿ :KGF chapter 2 :ಕೆಜಿಎಫ್​ 2 ಸಿನಿಮಾ ವೀಕ್ಷಿಸಲಿರುವ ಪ್ರಭಾಸ್​ ಅಭಿಮಾನಿಗಳಿಗೆ ಇಲ್ಲಿದೆ ಗುಡ್​ನ್ಯೂಸ್​

puneeth rajkumar starrer james movie ott premiere on sony liv from 14th april

Comments are closed.