Sitting For Long Hours : ನೀವು ಯಾವಾಗಲೂ ಕುಳಿತುಕೊಂಡೇ ಇರುತ್ತೀರಾ? ಹಾಗಾದರೆ ಈ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಹುಷಾರ್‌ !

ಕಾರ್ಪೋರೇಟ್‌ ಕೆಲಸಗಳಿಗೆ ಒಂದೇ ಸಮನೇ ಗಂಟೆಗಟ್ಟಲೆ ಕುಳಿತುಕೊಂಡೇ(Sitting For Long Hours) ಇರುವ ಅನಿವಾರ್ಯವಾಗಿದೆ. ಅಲ್ಲಿ ಕೆಲಸ ಮಾಡುವವರಿಗೆ ಏಳ ರಿಂದ ಎಂಟು ಗಂಟೆಗಳವರೆಗೆ ಕಂಪ್ಯೂಟರ್‌ ಮುಂದೆ ಕುಳಿತುಕೊಂಡೇ ಇರುವುದು ಅಭ್ಯಾಸವಾಗಿಬಿಟ್ಟಿರುತ್ತದೆ. ಇದು ಕಲವೊಮ್ಮೆ ಬೇಸರವನ್ನೂ ತರಿಸುತ್ತದೆ. ಇದರಿಂದ ಅನೇಕ ಜನರಿಗೆ ವ್ಯಾಯಾಮ ಮಾಡಲು ಅಥವಾ ನಡೆಯಲು ಶಕ್ತಿ ಕೂಡಾ ಇರುವುದಿಲ್ಲ. ಅಂತಹವರು ಮಲಗಿ ಆಯಾಸವನ್ನು ಹೋಗಲಾಡಿಸಿಕೊಳ್ಳಲು ನೋಡುತ್ತಾರೆ. ಪ್ರಾರಂಭದಲ್ಲಿ ಈ ರೀತಿಯ ಅಭ್ಯಾಸಗಳಿಂದ ಏನೂ ತೊಂದರೆಗಳು ಸೃಷ್ಟಿ ಆಗುವುದಿಲ್ಲ, ಆದರೆ ದಿನಗಳು ಕಳೆದಂತೆ ದೇಹವು ಪ್ರತಿಕ್ರಿಯಿಸಲು ಪ್ರಾರಂಭಿಸುತ್ತದೆ. ಒಂದೊಂದೇ ಕುರುಹುಗಳು ಕಾಣಿಸುತ್ತದೆ. ಅದರ ಅರ್ಥ ಆರೋಗ್ಯ ಹದಗೆಡುತ್ತಿದೆ ಎಂಬುದರ ಸಂಕೇತವಾಗಿದೆ. ಕುರ್ಚಿಯ ಮೇಲೆ ಗಂಟೆಗಟ್ಟಲೆ ಕುಳಿತುಕೊಂಡೇ ಇರುವುದರಿಂದ ಆಗುವ ಕೆಲವು ಅಡ್ಡ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳೋಣ.

  • ಬೆನ್ನು ಮತ್ತು ಬೆನ್ನುಮೂಳೆಯ ಗಾಯಗಳು
    ಒಂದೇ ರೀತಿಯ ಸ್ಥಾನದಲ್ಲಿ ಇರುವುದು ಬೆನ್ನು ಮತ್ತು ಸ್ನಾಯುಗಳ ಮೇಲೆ ಒತ್ತಡವನ್ನು ಹೇರುತ್ತದೆ. ಇದು ತೀವ್ರ ಬೆನ್ನು ನೋವನ್ನು ಉಂಟುಮಾಡುತ್ತದೆ. ಒಂದು ವೇಳೆ ಇದನ್ನು ನಿರ್ಲಕ್ಷಿಸಿದರೆ ಅದರಿಂದ ಬೆನ್ನು ಮತ್ತು ಬೆನ್ನು ಹುರಿಯ ಗಾಯಗಳ ಸಮಸ್ಯೆ ಎದುರಾಗುತ್ತದೆ.
  • ಭಂಗಿಗಳ ಸಮಸ್ಯೆ
    ನೀವು ಕುಳಿತುಕೊಂಡೇ ಕೆಲಸ ಮಾಡುವುದರಿಂದ, ಕುತ್ತಿಗೆ ಮತ್ತು ಬೆನ್ನನ್ನು ಮುಂದಕ್ಕೆ ಬಾಗಿಸುತ್ತೀರಿ. ನಿಮಗೆ ಅದು ಅಭ್ಯಾಸವಾಗಿರುತ್ತದೆ. ಇದರಿಂದ ನಿಮ್ಮ ದೇಹದ ಭಂಗಿಯೇ ಬದಲಾಗುತ್ತದೆ. ಕುಳಿತುಕೊಂಡಿರುವಾಗ ಹೇಗೆ ನಿಮ್ಮ ದೇಹ ಬೆಂಡ್‌ ಆಗಿರುತ್ತದೆಯೋ ಅದೇ ರೀತಿ ಕ್ರಮೇಣ ಬೆಂಡ್‌ ಆಗಲು ಆರಂಭಿಸುತ್ತದೆ.
  • ತೂಕದಲ್ಲಿ ಏರಿಕೆ
    ದೈಹಿಕ ಚಟುವಟಿಕೆಯ ಕೊರತೆಯಿಂದ ಕೊಬ್ಬು ಶೇಖರಣೆಗೊಂಡು, ಪರಿಣಾಮವಾಗಿ ದೇಹದ ತೂಕ ಏರಿಕೆಯಾಗುತ್ತದೆ ಎಂದು ಹೇಳುವ ಅಗತ್ಯವೇ ಇಲ್ಲ. ನಿರಂತರವಾಗಿ ಗಂಟೆಗಟ್ಟಲೆ ಕುಳಿತುಕೊಂಡೇ ಇರುವುದು ನಿಮ್ಮನ್ನು ಸ್ತೂಲ ಕಾಯದವರನ್ನಾಗಿಸುತ್ತದೆ. ಅದರಲ್ಲೂ ಹೊಟ್ಟೆಯ ಬೊಜ್ಜು ಅಧಿಕವಾಗುತ್ತದೆ.
  • ಜೀರ್ಣಕ್ರಿಯೆಯಲ್ಲಿ ಸಮಸ್ಯೆ
    ನಿಶ್ಚಲವಾಗಿ ಒಂದೇ ಕಡೆ ಕುಳಿತುಕೊಳ್ಳುವುದು ಕೊಬ್ಬು ಕರಗಿಸುವ ಕ್ರಿಯೆಯನ್ನು ನಿಧಾನವಾಗಿಸುತ್ತದೆ ಮತ್ತು ದೇಹದಲ್ಲಿ ಇನ್ಸುಲಿನ್‌ ಪರಿಣಾಮಗಳನ್ನು ಕಡಿಮೆ ಮಾಡುವುದು. ಇದರಿಂದ ಜೀರ್ಣಕ್ರಿಯೆ ನಿಧಾನಗತಿಯಲ್ಲಿ ಸಾಗುತ್ತದೆ.

ಇದನ್ನೂ ಓದಿ : healthy lifestyle :ಅತ್ಯುತ್ತಮ ಜೀವನಶೈಲಿಗಾಗಿ ಅನುಸರಿಸಿ ಈ ಪಂಚ ಸೂತ್ರ..!

  • ಹೃದ್ರೋಗದ ಸಮಸ್ಯೆ
    ನಿಮ್ಮ ದೇಹ ಆಗಾಗ ಚಲಿಸದೇ ಇದ್ದರೆ, ಕೊಬ್ಬೂ ಸಹ ಕಡಿಮೆ ಪ್ರಮಾಣದಲ್ಲಿ ಕರಗುತ್ತದೆ. ಇದು ರಕ್ತ ಪರಿಚಲನೆಯನ್ನು ಕುಂಠಿತಗೊಳಿಸುತ್ತದೆ. ಕೊಬ್ಬು, ಕೊಲೆಸ್ಟ್ರಾಲ್‌ ಹೆಚ್ಚಿಸುತ್ತದೆ ಮತ್ತು ಹೃದ್ರೋಗದ ಖಾಯಿಲೆಗಳನ್ನು ಹೆಚ್ಚಿಸುತ್ತದೆ.
  • ಆತಂಕ
    ಒಂದೇ ಭಂಗಿಯಲ್ಲಿ ಕುಳಿತು ನಿರಂತರವಾಗಿ ಲ್ಯಾಪ್‌ಟಾಪ್‌ನ ಪರದೆ ನೋಡುವುದರಿಂದ ಮಿದುಳು ಭಾವನೆಗಳನ್ನು ನಿರ್ಭಂಧಿಸುತ್ತೆ. ನಿಮ್ಮ ಕುರ್ಚಿ ಮತ್ತು ಮೇಜುಗಳು ನಿಮ್ಮನ್ನು ಏಕಾಂಗಿಯನ್ನಾಗಿ ಮಾಡಿಬಿಡುತ್ತದೆ. ಇದು ನಿಮ್ಮ ಮೆದುಳನ್ನು ಉತ್ತೇಜಿಸದೇ ನಿಮಗೆ ಬೇಜಾರು ಮತ್ತು ಆತಂಕಗಳನನ್ನು ತರುತ್ತದೆ.

ಇದನ್ನೂ ಓದಿ : Meditation For Health And Happiness: ಸರ್ವ ಮಾನಸಿಕ ರೋಗಗಳಿಗೆ ರಾಮಬಾಣ ಧ್ಯಾನ; ಯಾವುದೇ ತರಬೇತಿ ಇಲ್ಲದೆ ನೀವೂ ಟ್ರೈ ಮಾಡಿ

(Sitting For Long Hours can be harmful to your body)

Comments are closed.