Landslide konkan railway: ಗುಡ್ಡ ಕುಸಿದು, ರೈಲ್ವೆ ಹಳಿ ಮೇಲೆ ಬಿದ್ದ ಮಣ್ಣು : ಮಂಗಳೂರು – ಮುಂಬೈ ರೈಲು ಸಂಚಾರ ಸ್ಥಗಿತ

ಮಂಗಳೂರು: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮಂಗಳೂರು ನಗರದ ಕುಲಶೇಖರದ ಬಳಿಯಲ್ಲಿ ಗುಡ್ಡ ಕುಸಿತವಾಗಿದ್ದು, ರೈಲ್ವೆಯ ಹಳಿಯ ಮೇಲೆ ಮಣ್ಣು ಬಿದ್ದಿದೆ. ಇದರಿಂದಾಗಿ ಮುಂಬೈ – ಮಂಗಳೂರು ರೈಲ್ವೆ ಸಂಚಾರ ಸ್ಥಗಿತಗೊಂಡಿದೆ.

ಕುಲಶೇಖರದ ಬಳಿಯಲ್ಲಿ ರೈಲ್ವೆ ಇಲಾಖೆ ರೈಲ್ವೆಹಳಿ ಪಕ್ಕದಲ್ಲಿ ತಡೆಗೋಡೆಯನ್ನು ನಿರ್ಮಾಣ ಮಾಡುತ್ತಿದೆ. ಆದ್ರೆ ಭಾರೀ ಮಳೆಯ ಹಿನ್ನೆಲೆಯಲ್ಲಿ ಗುಡ್ಡ ಕುಸಿದು, ನಿರ್ಮಾಣಗೊಂಡಿದ್ದ ತಡೆಗೋಡೆ ಕಾಮಗಾರಿ ಕುಸಿದು ಬಿದ್ದಿದೆ.

ಅಲ್ಲದೇ ಭಾರೀ ಪ್ರಮಾಣದಲ್ಲಿ ಗುಡ್ಡದ ಮಣ್ಣು ರೈಲ್ವೆ ಹಳಿಯ ಮೇಲೆ ಬಿದ್ದ ಪರಿಣಾಮ ರೈಲ್ವೆ ಸಂಚಾರಕ್ಕೆ ತೊಡಕಾಗಿದೆ. ಮುಂಬೈ ಮಂಗಳೂರು ನಡುವಿನ ರೈಲ್ವೆ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

ಮುಂಜಾನೆಯಿಂದಲೇ ಯಾವುದೇ ರೈಲುಗಳು ಸಂಚಾರ ನಡೆಸಿಲ್ಲ. ಅಲ್ಲದೇ ಮಣ್ಣು ತೆರವು ಕಾರ್ಯವನ್ನು ಇನ್ನೂ ಅಧಿಕಾರಿಗಳು ಆರಂಭಿಸಿಲ್ಲ. ಒಂದೊಮ್ಮೆ ಮಣ್ಣು ತೆರವು ಮಾಡಿದ್ರೆ ಮತ್ತೆ ಗುಡ್ಡ ಕುಸಿಯುವ ಭೀತಿಯಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಕಾಮಗಾರಿ ಆರಂಭಿಸಲು ಮುಂದಾಗಿದ್ದಾರೆ.

ಇದನ್ನೂ ಓದಿ :  ಮೇಕೆದಾಟು ವಿಚಾರದಲ್ಲಿ ತಮಿಳುನಾಡಿಗೆ ಜೈ ಎಂದ ಅಣ್ಣಾಮಲೈ

ಇನ್ನೊಂದೆಡೆ ಮಂಗಳೂರು – ಮುಂಬೈ ನಡುವೆ ರೈಲುಗಳ ಸಂಚಾರ ಯಾವಾಗ ಆರಂಭವಾಗುತ್ತೆ ಅನ್ನೋ ಸ್ಪಷ್ಟತೆಯಿಲ್ಲ. ಜೊತೆಗೆ ಮುಂಬೈನಿಂದ ಮಂಗಳೂರಿಗೆ ಬರುತ್ತಿದ್ದ ರೈಲು ಮಾರ್ಗಮಧ್ಯದಲ್ಲಿಯೇ ನಿಲುಗಡೆಯಾಗಿದೆ ಎನ್ನಲಾಗುತ್ತಿದೆ.

https://youtu.be/UFjH456f7_0

Comments are closed.