Lata Mangeshkar Profile: ಹಾಡು ನಿಲ್ಲಿಸಿದ ಗಾನ ಕೋಗಿಲೆ ಲತಾ ಮಂಗೇಶ್ಕರ್ ಸಂಗೀತ ಜೀವನದ ಮೆಲುಕು

ಸಂಗೀತ ಲೋಕದ ಮಹಾನ್ ಗಾಯಕಿ, ಗಾನ ಕೋಗಿಲೆ ಲತಾ ಮಂಗೇಶ್ಕರ್ (Lata Mangeshkar) ಬಹು ಅಂಗಾಂಗ ವೈಫಲ್ಯದಿಂದ 92ನೆ ವಯಸ್ಸಿನಲ್ಲಿ ಇಹಲೋಕ (Lata Mangeshkar Passes Away) ತ್ಯಜಿಸಿದ್ದಾರೆ. ತಮ್ಮ ಮಧುರ ಕಂಠದ ಮೂಲಕವೇ ಮನೆ ಮಾತಾದವರು. ಇದುವರೆಗೂ ಇವರು ಹಿಂದಿ ಸೇರಿದಂತೆ ಒಟ್ಟು 20 ಪ್ರಾದೇಶಿಕ ಭಾಷೆಗಳಲ್ಲಿ 36 ಸಾವಿರಕ್ಕೂ ಅಧಿಕ ಹಾಡುಗಳನ್ನು (Lata Mangeshkar Profile) ಹಾಡಿದ್ದಾರೆ. ಲತಾ ಮಂಗೇಶ್ಕರ್ ( Lata Mangeshkar Profile ) ಅವರು ಮಧ್ಯಪ್ರದೇಶ ರಾಜ್ಯದ ಇಂದೋರ್‌ನ ಸಿಖ್ ಮೊಹಲ್ಲಾದಲ್ಲಿ ಮಹಾರಾಷ್ಟ್ರದ ಕುಟುಂಬದಲ್ಲಿ 1929 ರಲ್ಲಿ ಜನಿಸಿದರು. ಆಕೆಯ ತಂದೆ, ಗೋವಾದಿಂದ ಕೊಂಕಣಿ ಮಾತನಾಡುವ ಕಲಾವಂತ ಕುಟುಂಬಕ್ಕೆ ಸೇರಿದ ಪಂಡಿತ್ ದೀನನಾಥ್ ಮಂಗೇಶ್ಕರ್ ಅವರು ಶಾಸ್ತ್ರೀಯ ಗಾಯಕ ಮತ್ತು ರಂಗಭೂಮಿ ನಟರಾಗಿದ್ದರು. ಥಲ್ನೇರ್‌ನ ತಾಯಿ ಶುದ್ಧಮತಿ ದೀನನಾಥನ ಎರಡನೇ ಹೆಂಡತಿ. ಇವರಿಗೆ ಆಶಾ, ಉಷಾ ಮೀನಾ ಹಾಗೂ ಹೃದಯನಾಥ್ ಹೀಗೆ ಐದು ಮಕ್ಕಳು. ಲತಾ ಅವರ ಮೊದಲ ಹೆಸರು “ಹೇಮಾ”. ಭಾವ ಬಂಧನ್ ನಾಟಕದಲ್ಲಿ ಅವರು ಮಾಡಿದ ಅಭಿನಯದ ನಂತರ ಲತಾ ಎಂಬ ಹೆಸರು (Indian Playback Singer Lata Mangeshkar) ಪ್ರಸಿದ್ಧಿಯಾಯಿತು.

ಹಿನ್ನೆಲೆ ಸಂಗೀತದತ್ತ ಒಲವು

ಮರಾಠಿ ಚಿತ್ರ ಗಜಾಭಾವು (1943) ಗಾಗಿ ಮಾತಾ ಏಕ್ ಸಪೂತ್ ಕಿ ದುನಿಯಾ ಬದಲ್ ದೇ ತು ಅವರ ಮೊದಲ ಹಿಂದಿ ಹಾಡು. 1945 ರಲ್ಲಿ ಮಾಸ್ಟರ್ ವಿನಾಯಕ್ ಅವರ ಕಂಪನಿಯು ತನ್ನ ಕೇಂದ್ರ ಕಚೇರಿಯನ್ನು ಅಲ್ಲಿಗೆ ಸ್ಥಳಾಂತರಿಸಿದಾಗ ಲತಾ ಮುಂಬೈಗೆ ತೆರಳಿದರು. ಅವರು ಉಸ್ತಾದ್ ಅಮಾನತ್ ಅಲಿ ಖಾನ್ ಭೆಂಡಿಬಜಾರವಾಲೆ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಪಾಠಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರು. “ಆಯೇಗಾ ಆನೆವಾಲಾ” ಎಂಬ ಜನಪ್ರಿಯ ಚಲನಚಿತ್ರ ಮಹಲ್ (1949) ನಲ್ಲಿನ ಒಂದು ಹಾಡು ಅವರಿಗೆ ಒಂದು ಮಹತ್ವದ ತಿರುವು ನೀಡಿತು. ಈ ಹಾಡನ್ನು ಸಂಗೀತ ನಿರ್ದೇಶಕ ಖೇಮಚಂದ್ ಪ್ರಕಾಶ್ ಸಂಯೋಜಿಸಿದ್ದಾರೆ ಮತ್ತು ನಟಿ ಮಧುಬಾಲಾ ಅವರು ತೆರೆಯ ಮೇಲೆ ಲಿಪ್ ಸಿಂಕ್ ಮಾಡಿದ್ದಾರೆ.

1950 ರ ದಶಕದಲ್ಲಿ, ಅನಿಲ್ ಬಿಸ್ವಾಸ್, ಶಂಕರ್-ಜೈಕಿಶನ್, ನೌಶಾದ್, ಎಸ್.ಡಿ. ಬರ್ಮನ್, ಸಿ.ರಾಮಚಂದ್ರ, ಹೇಮಂತ್ ಕುಮಾರ್, ಸಲೀಲ್ ಚೌಧರಿ, ಖಯ್ಯಾಮ್, ರವಿ, ಸಜ್ಜದ್ ಹುಸೇನ್, ರೋಷನ್, ಕಲ್ಯಾಣಜಿ-ಆನಂದಜಿ, ವಸಂತ ದೇಸಾಯಿ, ಸುಧೀರ್ ಫಡ್ಕೆ, ಹಂಸರಾಜ್ ಬೆಹ್ಲ್, ಮದನ್ ಮೋಹನ್ ಮತ್ತು ಉಷಾ ಖನ್ನಾ ಹೀಗೆ ಪ್ರತಿಯೊಬ್ಬ ಖ್ಯಾತ ಸಂಗೀತ ನಿರ್ದೇಶಕರ ಹಾಡಿಗೂ ಲತಾ ದನಿಯಾಗಿದ್ದಾರೆ. 50 ರ ದಶಕದ ಪ್ರತಿಯೊಬ್ಬ ಹಿಂದಿ ಗಾಯಕನ ಜೊತೆಯೂ ಲತಾ ಹಾಡಿದ್ದಾರೆ.ಗಜಲ್, ಪ್ರೇಮಗೀತೆ, ಭಜನೆ, ಜನಪದ ಗೀತೆ, ಯುಗಳಗೀತೆ, ಕ್ಲಬ್ ಸಾಂಗ್ ಹೀಗೆ ಯಾವುದೇ ರೀತಿಯ ಹಾಡದರು ಹಾಡಿ ಸೈ ಎನಿಸಿಕೊಂಡಿದ್ದಾರೆ.

ಸಂಗೀತಕ್ಕಾಗಿಯೇ ಜೀವನವನ್ನು ಮೂಡಿಪಾಗಿಟ್ಟ ಲತಾ ಮಂಗೇಶ್ಕರ್ ಇಂದಿಗೂ ಅವಿವಾಹಿತರಾಗಿಯೇ ಉಳಿದಿದ್ದಾರೆ. ಇವರಂತೆ ಇವರ ಸಹೋದರಿಯರು ಸಂಗೀತ ಕ್ಷೇತ್ರದಲ್ಲಿ ಹೆಸರು ಗಳಿಸಿರುವುದು ಇನ್ನೊಂದು ವಿಶೇಷ.

ಪ್ರಶಸ್ತಿಗಳು

36 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ ಲತಾ ಅವರಿಗೆ ಸಾಕಷ್ಟು ಪ್ರಶಸ್ತಿಗಳು ಸಂದಿವೆ.

(Lata Mangeshkar Passes Away music journey and her songs)

Comments are closed.