Abu Dhabi : ಅಬುಧಾಬಿಯಲ್ಲಿ ಶಾಲೆಗೆ ತೆರಳುತ್ತಿರುವ ವಿದ್ಯಾರ್ಥಿಗಳಿಗೆ ಮಹತ್ವದ ಸೂಚನೆ

ಲಸಿಕೆಯನ್ನು ಸ್ವೀಕರಿಸದ 16 ವರ್ಷಕ್ಕಿಂತ ಮೇಲ್ಪಟ್ಟ ವಿದ್ಯಾರ್ಥಿಗಳನ್ನೂ ಒಳಗೊಂಡಂತೆ ಅಬುಧಾಬಿಯಲ್ಲಿರುವ(Abu Dhabi) ಎಲ್ಲಾ ವಿದ್ಯಾರ್ಥಿಗಳು ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲೆಗೆ ಮರಳಲಿದ್ದಾರೆ ಎಂದು ಅಬುಧಾಬಿಯ ಶಿಕ್ಷಣ ಮತ್ತು ಜ್ಞಾನ ಇಲಾಖೆಯು ಈ ಮಹತ್ವದ ಘೋಷಣೆಯನ್ನು ಮಾಡಿದೆ.


ಹೀಗಾಗಿ ನೀವು ಅಬುಧಾಬಿಯಲ್ಲಿ ವಿದ್ಯಾರ್ಥಿ ಅಥವಾ ವಿದ್ಯಾರ್ಥಿಯ ಪೋಷಕರಾಗಿದ್ದರೆ ಅಬುಧಾಬಿಯಲ್ಲಿರುವ ಪ್ರಸ್ತುತ ಕೋವಿಡ್​ ಮಾರ್ಗಸೂಚಿಗಳನ್ನು ತಿಳಿದುಕೊಳ್ಳಲೇಬೇಕಿದೆ. ಈ ಕುರಿತ ವಿವರ ಇಲ್ಲಿದೆ ನೋಡಿ :

ಎಲ್ಲಾ ವಿದ್ಯಾರ್ಥಿಗಳು ಭೌತಿಕವಾಗಿ ತರಗತಿಗೆ ಹಾಜರಾಗಬೇಕು. ಅಬುಧಾಬಿಯ ಶಿಕ್ಷಣ ಮತ್ತು ಜ್ಞಾನ ಇಲಾಖೆಯ ಸೂಚನೆಯಂತೆ 16 ವರ್ಷ ಮೇಲ್ಪಟ್ಟು ಲಸಿಕೆ ಸ್ವೀಕರಿಸದವರೂ ಸೇರಿದಂತೆ ಎಲ್ಲರೂ ಶಾಲೆಗೆ ಮರಳಬೇಕು. ಆಯ್ದ ವಿಭಾಗಕ್ಕೆ ಸೇರಿದವರಿಗೆ ಮಾತ್ರ ದೂರ ಶಿಕ್ಷಣವನ್ನು ಪಡೆದುಕೊಳ್ಳಲು ಹೇಳಲಾಗುತ್ತದೆ. ಆ ವಿಭಾಗಗಳು ಯಾವುವು ಎಂದರೆ. ವೈದ್ಯಕೀಯ ತುರ್ತು ಪರಿಸ್ಥಿತಿಗಳನ್ನು ಹೊಂದಿರುವ ವಿದ್ಯಾರ್ಥಿಗಳನ್ನು ಹೆಚ್ಚಿನ ಅಪಾಯ ಎಂದು ವರ್ಗೀಕರಿಸಲಾಗಿದೆ. ವಿದ್ಯಾರ್ಥಿಗಳು COVID-19 ರೋಗಲಕ್ಷಣಗಳನ್ನು ಪ್ರದರ್ಶಿಸುತ್ತಿದ್ದರೆ ಅವರು ಆನ್​ಲೈನ್​ ಕ್ಲಾಸ್​​​ಗೆ ಹಾಜರಾಗಬಹುದು. ಕೋವಿಡ್​ 19 ಸಂದರ್ಭದಿಂದಾಗಿ ತಾತ್ಕಾಲಿಕವಾಗಿ ಶಾಲೆಗಳನ್ನು ಮುಚ್ಚುವಂತಹ ಪರಿಸ್ಥಿತಿ ಬಂದರೆ ಆ ಸಂದರ್ಭದಲ್ಲಿಯೂ ವಿದ್ಯಾರ್ಥಿಗಳಿಗೆ ದೂರ ಶಿಕ್ಷಣಕ್ಕೆ ಅವಕಾಶ ಇರಲಿದೆ.

ಸಾಮಾಜಿಕ ಅಂತರದಲ್ಲಿಯೂ ಶಾಲೆಗಳಲ್ಲಿ ಸಿಗಲಿದೆ ವಿನಾಯಿತಿ :

ಮಕ್ಕಳನ್ನು ಶಾಲೆಗೆ ಮರಳಲು ಹೇಳಿರುವುದರ ಜೊತೆಗೆ ಹೊರಾಂಗಣ ಹಾಗೂ ಒಳಾಂಗಣ ಆಟಗಳಿಗೂ ಅವಕಾಶ ನೀಡುವುದಾಗಿ ಅಬುಧಾಬಿ ಶಿಕ್ಷಣ ಹಾಗೂ ಜ್ಞಾನ ಇಲಾಖೆ ಮಾಹಿತಿ ನೀಡಿದೆ.ಅಬುಧಾಬಿಯಲ್ಲಿ ಶಾಲೆ ಅಥವಾ ನರ್ಸರಿಗೆ ಪ್ರವೇಶಿಸಲು, ವಿದ್ಯಾರ್ಥಿಗಳು, ಸಂದರ್ಶಕರು, ಶಿಕ್ಷಕರು ಮತ್ತು ಆಡಳಿತ ಸಿಬ್ಬಂದಿ ಆಯಾ ವಯಸ್ಸಿಗೆ ತಕ್ಕಂತೆ ಪಿಸಿಆರ್​ ವರದಿಯನ್ನು ಪ್ರಸ್ತುತಪಡಿಸಬೇಕು. ಈ ಕುರಿತ ವಿವರ ಇಲ್ಲಿದೆ ನೋಡಿ :

  • ಶಿಕ್ಷಕರು, ಆಡಳಿತ ಸಿಬ್ಬಂದಿ ಮತ್ತು 16 ವರ್ಷಕ್ಕಿಂತ ಮೇಲ್ಪಟ್ಟ ವಿದ್ಯಾರ್ಥಿಗಳು: ಪ್ರತಿ 14 ದಿನಗಳಿಗೊಮ್ಮೆ ಋಣಾತ್ಮಕ ಪರೀಕ್ಷಾ ಫಲಿತಾಂಶಗಳನ್ನು ತೋರಿಸಬೇಕು.
  • ಲಸಿಕೆ ಸ್ವೀಕರಿಸದ 16 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು ಪ್ರತಿ 7 ದಿನಗಳಿಗೆ ಒಮ್ಮೆ ಪಿಸಿಆರ್​ ನೆಗೆಟಿವ್​ ವರದಿ ತೋರಿಸಬೇಕು.
  • 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಪ್ರತಿ 30 ದಿನಗಳಿಗೊಮ್ಮೆ ನೆಗೆಟಿವ್​ ವರದಿ ನೀಡಬೇಕು ಇಲ್ಲವೇ ಗ್ರೀನ್​ ಪಾಸ್​ ಪ್ರದರ್ಶಿಸಬೇಕು.
  • ಸಂದಶಕರು ಗ್ರೀನ್​ ಪಾಸ್​ ತೋರಿಸಬೇಕು ಅಥವಾ 48 ಗಂಟೆಗಳ ಒಳಗಾಗಿ ಪಡೆದ ಕೊರೊನಾ ನೆಗೆಟಿವ್​ ವರದಿಯನ್ನು ಪ್ರದರ್ಶಿಸಬೇಕು.

ಇದನ್ನು ಓದಿ :Kinder Surprise :ಕಿಂಡರ್​ ಉತ್ಪನ್ನ ಸೇವನೆಯಿಂದ ಬರುತ್ತೆ ಕಾಯಿಲೆ:ಎಚ್ಚರಿಕೆ ನೀಡಿದ ಬ್ರಿಟನ್​

ಇದನ್ನೂ ಓದಿ : Sri Lanka : ಶ್ರೀಲಂಕಾದಲ್ಲಿ 36 ಗಂಟೆಗಳ ಕರ್ಫ್ಯೂ : ಟ್ವೀಟರ್‌, ಫೇಸ್‌ಬುಕ್‌, ವಾಟ್ಸಾಪ್‌ ಬ್ಯಾನ್‌

Latest COVID-19 measures for school students in Abu Dhabi – explained

Comments are closed.