Eid Milad-un-Nabi 2021 : ಈದ್‌ -ಇ- ಮಿಲಾದ್‌ ಆಚರಣೆ, ಇತಿಹಾಸ ನಿಮಗೆ ಗೊತ್ತಾ ?

ಈದ್‌ – ಇ ಮಿಲಾದ್‌ ಇಸ್ಲಾಂ ಧರ್ಮೀಯರ ಪಾಲಿಗೆ ಪವಿತ್ರ ಹಬ್ಬ. ಮಿಲಾದ್-ಉನ್-ನಬಿ ಅಥವಾ ಈದ್-ಇ-ಮಿಲಾದ್ ಅನ್ನು ಇಸ್ಲಾಂನ ಪ್ರವಾದಿ ಹಜರತ್ ಮೊಹಮ್ಮದ್ ಸಾಹೇಬ್ ಅವರ ಜನ್ಮದಿನದಂದು ಆಚರಿಸಲಾಗುತ್ತದೆ. ಸೂಫಿ ಅಥವಾಬರೆಲ್ವಿ ಚಿಂತನೆಯ ಅನೇಕ ಮುಸ್ಲೀಮರು ಈ ಹಬ್ಬವನ್ನು ಆಚರಿಸುತ್ತಾರೆ. ಅಲ್ಲದೇ ಇದನ್ನುಇ-ಮಿಲಾದ್, ನಬಿ ಡೇ, ಮೊಹಮ್ಮದ್ ಜನ್ಮದಿನ ಅಥವಾ ಪ್ರವಾದಿ ಜನ್ಮದಿನದ ಹೆಸರಿನಿಂದ ಅನ್-ನಬಿ ಎಂದೂ ಕರೆಯುತ್ತಾರೆ.

ಈದ್-ಇ-ಮಿಲಾದ್ ಅನ್ನು ಮೊದಲ ಬಾರಿಗೆ ಈಜಿಪ್ಟ್‌ನಲ್ಲಿ ಅಧಿಕೃತ ಹಬ್ಬವಾಗಿ ಆಚರಿಸಲಾಯಿತು, ನಂತರ 11 ನೇ ಶತಮಾನದಲ್ಲಿಈ ಹಬ್ಬು ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿತು. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ, ಈದ್ ಮಿಲಾದ್-ಉನ್-ನಬಿ ಈ ಬಾರಿ ಅಕ್ಟೋಬರ್ 18, 2021 ರ ಸಂಜೆ ಪ್ರಾರಂಭವಾಗುತ್ತದೆ ಮತ್ತು ಅಕ್ಟೋಬರ್ 19, 2021 ರ ಸಂಜೆ ಮುಕ್ತಾಯಗೊಳ್ಳಲಿದೆ.

ಕ್ರಿಸ್ತ ಶಕ 573 ನೇ ಇಸ್ಲಾಂ 12 ನೇ ತಾರೀಖಿನಂದು ಪ್ರವಾದಿ ಮುಹಮ್ಮದ್‌ ಅವರು ಜನಸಿದ್ದಾರೆ ಎಂದು ನಂಬಲಾಗಿದೆ. ಪ್ರವಾದಿ ಮುಹಮ್ಮದ್ ಜನಿಸಿದನೆಂದು ನಂಬಲಾಗಿದೆ, ಇಸ್ಲಾಮಿ ನ ಮೂರನೇ ತಿಂಗಳು ರಬಿ ಅಲ್ ಅವ್ವಲ್. ಈದ್-ಇ-ಮಿಲಾದ್ ಅನ್ನು ಸಹ ಕೆಲವರು ಶೋಕಿಸುತ್ತಾರೆ ಏಕೆಂದರೆ ಇದು ಪ್ರವಾದಿಯವರ ಮರಣ ದಿನಾಚರಣೆಯೆಂದು ನಂಬಲಾಗಿದೆ. ಪ್ರವಾದಿ ಹಜರತ್ ಮೊಹಮ್ಮದ್ ಅವರ ಪೂರ್ಣ ಹೆಸರು ಮೊಹಮ್ಮದ್ ಇಬ್ನ್ ಅಬ್ದುಲ್ಲಾ ಇಬ್ನ್ ಅಬ್ದುಲ್ ಮುತ್ತಲಿಬ್. ಮೆಕ್ಕಾ ನಗರದಲ್ಲಿ ಜನಿಸಿದ ಪ್ರವಾದಿ ಮುಹಮ್ಮದರು ಕ್ರಿಸ್ತಶಕ 610 ರಲ್ಲಿ ಮೆಕ್ಕಾ ಸಮೀಪದಲ್ಲಿರುವ ಹೀರಾ ಎಂಬ ಗುಹೆಯಲ್ಲಿ ಜ್ಞಾನೋದಯ ಪಡೆದಿದ್ದಾರೆಂಬ ನಂಬಿಕೆಯಿದೆ. ನಂತರದಲ್ಲಿ ಅವರು ಇಸ್ಲಾಂ ಧರ್ಮದ ಪವಿತ್ರ ಗ್ರಂಥವಾದ ಕುರಾನ್‌ನ ಬೋಧನೆಗಳನ್ನು ಬೋಧಿಸಿದ್ದಾರೆ.

ಹಸಿರು ಬಣ್ಣವು ಇಸ್ಲಾಂ ಮತ್ತು ಸ್ವರ್ಗದ ಸಂಕೇತವಾಗಿದೆ. ಇದೇ ಕಾರಣಕ್ಕೆ ಈದ್‌ -ಇ- ಮಿಲಾದ್‌ ಆಚರಣೆಯ ದಿನದಂದು ಹಸಿರು ರಿಬ್ಬನ್‌ ಹಾಗೂ ಹಸಿರು ಬಟ್ಟೆ ಧರಿಸುತ್ತಾರೆ. ಅಲ್ಲದೇ ಹಸಿರು ಧ್ವಜ ಅಥವಾ ಬ್ಯಾನರ್‌ಗಳನ್ನು ಮೆರವಣಿಗೆ ಒಯ್ಯುತ್ತಾರೆ. ಹಬ್ಬದ ಸಂದರ್ಭದಲ್ಲಿ ಜನರು ಮೆರವಣಿಗೆ, ರಾತ್ರಿ ಪ್ರಾರ್ಥನಾ ಸಭೆಗಳನ್ನು ನಡೆಸುತ್ತಾರೆ.

ಸುನ್ನಿ ಮುಸ್ಲಿಮರು ಈದ್ ಮಿಲಾದ್- ಉನ್- ನಬಿಯನ್ನುಇಸ್ಲಾಮಿಕ್ ತಿಂಗಳಾದ ರಬಿ ಅಲ್-ಅವ್ವಲ್ ನ 12 ರಂದು ಆಚರಿಸುತ್ತಾರೆ ಎಂದು ನಂಬಲಾಗಿದೆ, ಮತ್ತು ಶಿಯಾ ಮುಸ್ಲಿಮರು ಇದನ್ನು ರಬಿ ಅಲ್-ಅವಲ್ ನ 17 ರಂದು ಆಚರಿಸುತ್ತಾರೆ. ಮಿಲಾದ್-ಉನ್-ನಬಿ ಹಬ್ಬವನ್ನು ಇಸ್ಲಾಂ ಅನುಯಾಯಿಗಳು ಆಚರಿಸುತ್ತಾರೆ. ಆದರೆ ಶಿಯಾಗಳು ಮತ್ತು ಸುನ್ನಿಗಳು ಈ ಹಬ್ಬದ ಬಗ್ಗೆ ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ.

ಮಸೀದಿ, ಸಮುದಾಯ ಭವನಗಳಲ್ಲಿ ಸಾಂಪ್ರದಾಯಿಕ ಭೋಜವನ್ನು ನೀಡಲಾಗುತ್ತದೆ. ಸೌದಿ ಅರೇಬಿಯಾದಲ್ಲಿನ ಪವಿತ್ರ ನಗರಗಳಲ್ಲಿ ವಿವಿಧ ಮಸೀದಿಗಳ ಪೋಟೋಗಳೊಂದಿಗೆ ಪ್ರದರ್ಶನವನ್ನು ನಡೆಸಲಾಗುತ್ತದೆ. ಇನ್ನು ಈದ್-ಇ-ಮಿಲಾದ್ ಆಚರಣೆಯನ್ನು ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ವ್ಯಾಪಕವಾಗಿ ಆಚರಿಸಲಾಗುತ್ತಿದೆ.

Comments are closed.