Rashmika Mandanna : ಫೋರ್ಬ್ಸ್ ಪಟ್ಟಿಯಲ್ಲಿ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣಗೆ ಮೊದಲ ಸ್ಥಾನ

ಫೋರ್ಬ್ಸ್’ ನಿಯತಕಾಲಿಕೆ ವಿಶ್ವದ ಆರ್ಥಿಕ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಕ್ರೀಡೆ, ಸಿನಿಮಾ ಹೀಗೆ ಹಲವು ಕ್ಷೇತ್ರಗಳಲ್ಲಿ ಪರಿಶೀಲನೆ ಮಾಡಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯನ್ನು ತಯಾರಿಸಿ ಪ್ರತಿವರ್ಷ ಬಿಡುಗಡೆ ಮಾಡುತ್ತಿದೆ. ಪ್ರತಿವರ್ಷ ಬಿಡುಗಡೆಯಾಗುವ ಪಟ್ಟಿಯಲ್ಲಿ, ಆ ವರ್ಷದಲ್ಲಿ ಆಯಾಯ ಕಾರ್ಯಕ್ಷೇತ್ರಗಳಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದವರು ಜೊತೆಗೆ ಆ ಕ್ಷೇತ್ರದ ಮೂಲಕ ಜನತೆಯನ್ನು ಆಕರ್ಷಣೆ ಮಾಡಬಲ್ಲವರು ‘ಫೋರ್ಬ್ಸ್’ ಪಟ್ಟಿಯಲ್ಲಿ ಸ್ಥಾನಗಳಿಸುತ್ತಾರೆ. ಇದೀಗ ಪೋರ್ಬ್ಸ್‌ ಪಟ್ಟಿಯಲ್ಲಿ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಸ್ಥಾನ ಪಡೆದುಕೊಂಡಿದ್ದಾರೆ.

ಫೋರ್ಬ್ಸ್’ ನಿಯತಕಾಲಿಕೆಯ ಕವರ್ ಪೇಜ್ ನಲ್ಲಿ ಸ್ಥಾನ ಪಡೆಯುವುದು ಸಾಮಾನ್ಯದ ವಿಷಯವಲ್ಲ. ಕವರ್ ಪೇಜ್ ನಲ್ಲಿ ಕಾಣಿಸಿ ಕೊಳ್ಳಬೇಕಾದರೆ ವ್ಯಕ್ತಿ ಅತ್ಯಂತ ಜನಪ್ರಿಯತೆಯನ್ನು ಹೊಂದಿರಬೇಕು. ದಕ್ಷಿಣ ಭಾರತದ ಕೆಲವೇ ಕೆಲವು ಮಂದಿಯಲ್ಲಿ ವಿಶೇಷವಾಗಿ ಕನ್ನಡದಿಂದ ಯಶ್ ಮೊದಲ ಬಾರಿಗೆ ಇಂತಹ ಗೌರವಕ್ಕೆ ಪಾತ್ರರಾಗಿದ್ದಾರೆ. ಹಲವು ದಿನಗಳ ಹಿಂದೆ ಫೋರ್ಬ್ಸ್’ ನಿಯತಕಾಲಿಕೆ ಕೆಜಿಎಫ್‌ ಸಿನಿಮಾ ಬಿಡುಗಡೆಯಾದ ಮೇಲೆ ಯಶ್ ಅವರ ಮುಖಪುಟವನ್ನು ಹೊತ್ತು ಬಿಡುಗಡೆಯಾಗಿತ್ತು. ‘

ಇದನ್ನೂ ಓದಿ: Prabhas : ಭಾರತೀಯ ಸಿನಿಮಾರಂಗದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆದ ನಟ ಪ್ರಭಾಸ್‌ : ‘ಸ್ಪಿರಿಟ್’ ಚಿತ್ರಕ್ಕೆ ಪಡೆದ ಸಂಭಾವನೆ ಎಷ್ಟು ಗೊತ್ತಾ ?

Rashmika Mandanna

ಈ ವರ್ಷ ಫೋರ್ಬ್ಸ್ ನಿಯತಕಾಲಿಕೆ ದಕ್ಷಿಣ ಭಾರತಕ್ಕೆ ಸಂಬಂಧಿಸಿದಂತೆ ಒಂದು ವಿಶೇಷವಾದ ಮತ್ತು ಆಸಕ್ತಿದಾಯಕ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ಅತ್ಯಂತ ಜನಪ್ರಿಯ ಮತ್ತು ಪ್ರಭಾವಶಾಲಿ ನಟ-ನಟಿಯರ ಒಂದು ಪಟ್ಟಿಯಾಗಿದೆ. ಸೌತ್ ಫಿಲಂ ಇಂಡಸ್ಟ್ರಿಯ ನಟ- ನಟಿಯರು ಸೋಶಿಯಲ್ ಮೀಡಿಯಾದಲ್ಲಿ ಯಾರು ಹೆಚ್ಚು ಫಾಲೋಯರ್ಸ್ ಹೊಂದಿದ್ದಾರೆ, ಹೆಚ್ಚು ಸಕ್ರಿಯರಾಗಿದ್ದು, ಯಾರ ಪೋಸ್ಟ್ ಗಳಿಗೆ ಪ್ರತಿಕ್ರಿಯೆಗಳು ಹೆಚ್ಚಿಗೆ ಬರುತ್ತದೆ ಮತ್ತು ಯಾರು ಹೆಚ್ಚು ಹೆಚ್ಚು ಸೋಶಿಯಲ್ ಮೀಡಿಯಾ ಗಳನ್ನು ಇನ್‌ಫ್ಲ್ಯುಯೆನ್ಸ್ ಮಾಡುತ್ತಿದ್ದಾರೆ ಎಂಬ ಎಲ್ಲಾ ಅಂಶಗಳನ್ನು ಆಧರಿಸಿ ತಯಾರಿಸಿರುವ ಪಟ್ಟಿ ನಿನ್ನೆ ಬಿಡುಗಡೆಗೊಳಿಸಿದೆ.

‘ಫೋರ್ಬ್ಸ್’ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ‌ಅತೀ ಹೆಚ್ಚು ಸಂಭಾವನೆ ತೆಗೆದು ಕೊಳ್ಳುವ ನಟ ಸೂಪರ್ ಸ್ಟಾರ್ ಪ್ರಭಾಸ್, ಸದ್ಯ ವಿವಾದ ಸುಳಿಯಲ್ಲಿ ಸಿಲುಕಿರುವ ಸಮಂತಾಳನ್ನು ಕೂಡ ಹಿಂದಕ್ಕೆ ತಳ್ಳಿ ಕೊಡಗಿನ ಚೆಲುವೆ ರಶ್ಮಿಕಾ ಮಂದಣ್ಣ 9. 88 ಪಾಯಿಂಟ್ ಗಳೊಂದಿಗೆ ಪ್ರಥಮ ಸ್ಥಾನವನ್ನು ಆಕ್ರಮಿಸಿಕೊಂಡಿದ್ದಾರೆ. ಇನ್ನೂ ಆಸಕ್ತಿದಾಯಕ ಸಂಗತಿಯೆಂದರೆ ರಶ್ಮಿಕಾ ಕೆಮಿಸ್ಟ್ರಿ ಪಾರ್ಟ್ನರ್ ಅಂತಲೇ ಸದಾ ಸುದ್ದಿಯಲ್ಲಿರುವ ವಿಜಯ್ ದೇವರಕೊಂಡ ಪಟ್ಟಿಯಲ್ಲಿ 9.67 ಪಾಯಿಂಟ್ ಗಳೊಂದಿಗೆ 2ನೇ ಸ್ಥಾನಗಳಿಸಿದ್ದಾರೆ. ಇನ್ನು ಯಶ್ ಅವರು 9.54 ಪಾಯಿಂಟ್ ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: Aryna Khan : ಬಡವರಿಗಾಗಿ ಕೆಲಸ ಮಾಡುವೆ, ತಪ್ಪು ಮಾರ್ಗ ತ್ಯೆಜಿಸುವೆ ಎಂದ ಆರ್ಯನ್‌ ಖಾನ್‌

(Kodagu’s Rashmika Mandanna is ranked first in forbes list)

Comments are closed.