Kerala Lottery : ಅಬ್ಬಬ್ಬಬ್ಬ… ಆಟೋ ಡ್ರೈವರ್ ಗೆ 25 ಕೋಟಿ ಲಾಟ್ರಿ

ತಿರುವನಂತಪುರ: Kerala Lottery : ಅದೃಷ್ಟ ಅನ್ನೋದು ಯಾವಾಗ ಬೇಕಾದ್ರೂ ಕೈ ಹಿಡಿಯುತ್ತೆ ಅನ್ನೋದಕ್ಕೆ ಕೇರಳದ ಈ ಆಟೋ ಚಾಲಕನೇ (Kerala Lottery Auto Driver) ಸಾಕ್ಷಿ.. ಸಾಲಕ್ಕಾಗಿ ಬ್ಯಾಂಕ್ ಗೆ ಅರ್ಜಿ ಸಲ್ಲಿಸಿದ್ದವನಿಗೆ ಓಣಂ ಲಾಟ್ರಿ ರೂಪದಲ್ಲಿ ಮನೆಗೆ ಮಹಾಲಕ್ಷ್ಮಿಯೇ ಆಗಮಿಸಿದ್ದಾಳೆ. ಕೇರಳ ಸರ್ಕಾರದ ಓಣಂ ಲಾಟರಿಯಲ್ಲಿ ಆಟೋ ಚಾಲಕ ಅನೂಪ್ ಬರೋಬ್ಬರಿ 25 ಕೋಟಿ ರೂಪಾಯಿ ಗೆದ್ದಿದ್ದಾರೆ. ಆ ಮೂಲಕ ರಾತ್ರಿ ಕಳೆದು ಬೆಳಗಾಗೋ ಹೊತ್ತಿಗೆ ಕೋಟ್ಯಧಿಪತಿಯಾಗಿದ್ದಾನೆ.

ತಿರುವನಂತಪರುದ ಶ್ರೀವರಹಂ ಎಂಬಲ್ಲಿನ ಅನೂಪ್‌ ಎಂಬ ಆಟೋ ಚಾಲಕ ಅನೂಪ್‌ ಒಂದು ದಿನದ ಹಿಂದೆ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ ಹೋಗುತ್ತಿದ್ದಾಗ, ತಿರುವನಂತಪುರದ ಗಣಪತಿ ದೇಗುಲದ ಬಳಿ ಅಂಗಡಿಯೊಂದರಲ್ಲಿ ಲಾಟರಿ ಖರೀದಿಸಿದ್ದ. ಟಿಕೆಟ್ ಬೆಲೆ 500 ಆಗಿದ್ದು, ಅದರ ನಂಬರ್ TJ 750605 ಆಗಿತ್ತು. ತೀವ್ರ ಬಡತನದಲ್ಲಿದ್ದ ಅನೂಪ್, ಮಗಳು ಕೂಡಿಟ್ಟಿದ್ದ ಹಣದ ಡಬ್ಬಿಯಿಂದ 500 ರೂಪಾಯಿ ತಂದು ಟಿಕೆಟ್ ಖರಿದಿಸಿದ್ರು. ಇದೀಗ ಈ ಲಾಟರಿಯಿಂದ ಒಂದೇ ದಿನದಲ್ಲಿ ಕೋಟ್ಯಧಿಪತಿಯಾಗಿ ಹೊರಹೊಮ್ಮಿದ್ದು, ಕೇರಳ ಮಾತ್ರವಲ್ಲದೆ ದೇಶ-ವಿದೇಶದಲ್ಲಿಯೂ ಸುದ್ದಿಯಾಗಿದ್ದಾರೆ.

3 ಲಕ್ಷ ಸಾಲಕ್ಕೆ ಅರ್ಜಿ : ಅಂದಹಾಗೆ, ಅನೂಪ್ ಮಲೇಷಿಯಾದಲ್ಲಿ ಬಾಣಸಿಗನಾಗಿ ಕೆಲಸ ಮಾಡಲು ಹೋಗೋದಕ್ಕೆ ಪ್ಲ್ಯಾನ್ ಮಾಡಿದ್ದ. ಅದಕ್ಕಾಗಿ 3 ಲಕ್ಷ ರೂಪಾಯಿ ಸಾಲಕ್ಕಾಗಿ ಬ್ಯಾಂಕ್ ನಲ್ಲಿ ಅರ್ಜಿಹಾಕಿದ್ರು. ಆದ್ರೆ ಭಾನುವಾರ ಡ್ರಾ ಆದ ಲಾಟರಿಯಲ್ಲಿ 25 ಕೋಟಿ ರೂಪಾಯಿ ಗೆದ್ದಿರೋದು ಗೊತ್ತಾಗಿತ್ತು.

ಸದ್ಯ ಅನೂಪ್ ಗೆ ಸಾಲದ ಅವಶ್ಯಕತೆ ಇಲ್ಲ. ಈಗ ಬಂದಿರೋ 25 ಕೋಟಿ ಲಾಟರಿ ದುಡ್ಡದಲ್ಲಿ ತೆರಿಗೆ ಎಲ್ಲ ಕಳೆದು 15 ಕೋಟಿ ರೂಪಾಯಿ ವರೆಗೂ ಹಣ ಸಿಗಲಿದೆ. ಅದ್ರಿಂದ ಒಂದು ಮನೆ ಕಟ್ಟಿಕೊಂಡು, ಮಾಡಿದ ಸಾಲ ತೀರಿಸಿಕೊಂಡು ಆರಾಮಾಗಿ ಇರೋದಾಗಿ ಅನೂಪ್ ಹೇಳಿದ್ದಾರೆ. ಇದಲ್ಲದೆ, ಅನೂಪ್ ತನ್ನ ಸಂಬಂಧಿಕರಿಗೆ ಸಹಾಯ ಮಾಡುತ್ತೇನೆ, ಕೆಲವು ಚಾರಿಟಿ ಕೆಲಸ ಮಾಡುತ್ತೇನೆ ಎಂದಿದ್ದಾರೆ. ಅಲ್ದೆ ಮಲೇಷ್ಯಾ ಬದಲು ಕೇರಳದಲ್ಲಿ ಹೊಟೆಲ್ ಆರಂಭಿಸೋದಾಗಿ ಅನೂಪ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕೇರಳದಲ್ಲಿ ಲಾಟರಿ ಮಾರಾಟ ಅಧಿಕೃತವಾಗಿದ್ದು, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಲಾಟರಿ ಮಾರಾಟ ನಿಷೇಧಿಸಲಾಗಿದೆ.

Lottery-Auto driver-cum-chef from Kerala wins Rs 25 crore Onam bumper lottery

Comments are closed.