Cruelty on Dog: ಕಾರಿಗೆ ಶ್ವಾನವನ್ನ ಕಟ್ಟಿ ಎಳೆದ ಹೃದಯ ಹೀನ ಡಾಕ್ಟರ್

ಜೋಧಪುರ : cruelty on Dog ವೈದ್ಯೋ ನಾರಾಯಣ ಹರಿ ಅಂತಾರೆ. ಜೀವ ಉಳಿಸೋ ದೇವರನ್ನ ವೈದ್ಯರಲ್ಲಿ ನಾವೆಲ್ಲ ಕಾಣ್ತೇವೆ ಆದ್ರೆ, ಇಲ್ಲೋಬ್ಬ ವೈದ್ಯ ಹೃದಯ ಹೀನ ಕೆಲಸ ಮಾಡಿದ್ದಾರೆ. ನಾಯಿಯನ್ನ ಹಗ್ಗದಿಂದ ಕಾರಿಗೆ ಕಟ್ಟಿ ದರದರನೇ ಎಳೆದುಕೊಂಡು ಹೋಗಿ ಪ್ರಾಣಿಪ್ರಿಯರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.

ರಾಜಸ್ಥಾನದ ಜೋಧ್ ಪುರದಲ್ಲಿ ಡಾ. ರಜನೀಶ್ ಗ್ವಾಲಾ ಎಂಬಾತ ನಾಯಿಯನ್ನ ಹಗ್ಗದಿಂದ ಕಟ್ಟಿಕೊಂಡು ಕಾರನ್ನ ಚಲಾಯಿಸಿಕೊಂಡು ನಾಯಿಯನ್ನ ದರದರನೇ ಎಳೆದೊಯ್ದಿ ದ್ದಾನೆ. ಹಿಂಬಂದಿಯಿಂದ ಬಂದ ಬೈಕ್ ಸವಾರೊಬ್ಬ ನಾಯಿಗೆ ಈ ಡಾಕ್ಟರ್ ರಜನೀಶ್ ಚಿತ್ರಹಿಂಸೆ ಕೊಡೋ ದೃಶ್ಯವನ್ನ ಸೆರೆ ಹಿಡಿದಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ವೈದ್ಯನ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಶ್ವಾನದ ಮೇಲೆ ಕ್ರೌರ್ಯ ಮೆರೆದ ವೈದ್ಯನಿಗೆ ಕಠಿಣ ಶಿಕ್ಷೆ ಆಗ್ಬೇಕೆಂದು ಒತ್ತಾಯಿಸಿದ್ದಾರೆ.

ಕಾರಿನ ಹಿಂಬಂದಿ ಹೋಗುತ್ತಿದ್ದ ವ್ಯಕ್ತಿ ಈ ದೃಶ್ಯವನ್ನ ಸೆರೆ ಹಿಡಿದಿದ್ದು, ಡಾಗ್ಸ್ ಹೋಮ್ ಫೌಂಡೇಶನ್ ಅನ್ನೋ ಸಂಸ್ಥೆ ತನ್ನ ಟ್ವೀಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನ ಹಂಚಿಕೊಂಡಿದೆ. ಜನನಿಬಿಡ ಪ್ರದೇಶದಲ್ಲೇ ಈ ರೀತಿ ನಾಯಿಯ ಮೇಲೆ ಕ್ರೌರ್ಯ ಮೆರೆದರೂ ಯಾರೊಬ್ಬರೂ ಇದನ್ನನಿಲ್ಲಿಸೋಕೆ ಯತ್ನಿಸಿಲ್ಲ ಅನ್ನೋದು ಮತ್ತೊಂದು ಬೇಸರದ ಸಂಗತಿಯಾಗಿದೆ. ಕೊನೆಗೆ ಒಬ್ಬ ಬೈಕ್ ಸವಾರ ಕಾರನ್ನ ಅಡ್ಡಗಟ್ಟಿ ನಾಯಿಯನ್ನ ಹೀಗೆಕೆ ಎಳೆದೊಯ್ಯುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾನೆ. ಅಲ್ದೆ ನಾಯಿಗೆ ಕಟ್ಟಲಾಗಿದ್ದ ಹಗ್ಗ ಬಿಚ್ಚಿ ವೈದ್ಯನಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ನಾಯಿಯನ್ನ ಪಶು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಕಾರಿನ ಹಿಂದೆ ಎಳೆದುಕೊಂಡುಹೋಗಿದ್ದಕ್ಕೆ, ನಾಯಿಯ ಕಾಲುಗಳ ಮೂಳೆ ಮುರಿದೆದೆ ಅಂತಾ ವೈದ್ಯರು ತಿಳಿಸಿದ್ದಾರೆ. ಇದೊಂದು ಬೀದಿ ನಾಯಿ ಅಂತಾ ಗೊತ್ತಾಗಿದ್ದ, ವೈದ್ಯನ ಮನೆ ಮುಂದೆ ಈ ನಾಯಿ ಪದೇಪದೆ ಬರ್ತಾ ಇತ್ತಂತೆ. ಹೀಗಾಗಿ ಅದನ್ನ ಓಡಿಸಿಯೋಕೆ ಯತ್ನಿಸಿದ್ನಂತೆ. ನಾಯಿ ಮನೆ ಮುಂದೆ ಬರೋದನ್ನ ನಿಲ್ಲಿಸದೇ ಇದ್ದುದಕ್ಕೆ ಹೀಗೆ ಹಗ್ಗಕಟ್ಟಿ ಕಾರಿನಹಿಂದೆ ಎಳೆದೊಯ್ಯಿದ್ದಾನೆ ಅಂತಾಗೊತ್ತಾಗಿದೆ.

ಇನ್ನು ಡಾಗ್ಸ್ ಹೋಂ ಫೌಂಡೇಶನ್ ಡಾಕ್ಟರ್ ರಜನೀಶ್ ವಿರುದ್ಧ ಪ್ರಾಣಿ ಹಿಂಸೆ ಕಾಯ್ದೆ ಅಡಿ ದೂರು ದಾಖಲಿಸಿದ್ದು, ಜೋಧಪುರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಏನೇ ಹೇಳಿ ಒಬ್ಬ ವೈದ್ಯನಾಗಿ ಮೂಕ ಪ್ರಾಣಿಯ ಮೇಲೆ ಈ ರೀತಿ ಕ್ರೌರ್ಯ ಮೆರೆದಿರೋದು ಖಂಡನೀಯ.

ಇದನ್ನೂ ಓದಿ : India Vs Australia T20 : ಟಿ20 ವಿಶ್ವಕಪ್‌ಗೂ ಮುನ್ನ ಭಾರತಕ್ಕೆ 2 ಸೆಮಿಫೈನಲ್; ಮಂಗಳವಾರ ಶುರು ಮೊದಲ ಸೆಮೀಸ್

ಇದನ್ನೂ ಓದಿ : Kerala Lottery : ಅಬ್ಬಬ್ಬಬ್ಬ… ಆಟೋ ಡ್ರೈವರ್ ಗೆ 25 ಕೋಟಿ ಲಾಟ್ರಿ

cruelty on Dog-Dog Tied To A Car Being Dragged In Jodhpur Case Registered Against doctor

Comments are closed.