lpg cylinder price increased : ಶ್ರೀಸಾಮಾನ್ಯನ ಜೇಬಿಗೆ ಮತ್ತೊಂದು ಬರೆ : ಗೃಹ ಬಳಕೆಯ ಸಿಲಿಂಡರ್​ ದರದಲ್ಲಿ 50 ರೂ. ಏರಿಕೆ

lpg cylinder price increased : ದೇಶದಲ್ಲಿ ದಿನದಿಂದ ದಿನಕ್ಕೆ ದಿನ ಬಳಕೆಯ ವಸ್ತುಗಳ ಬೆಲೆಯಲ್ಲಿ ಏರಿಕೆ ಕಾಣುತ್ತಲೇ ಇದೆ. ತರಕಾರಿ, ಪೆಟ್ರೋಲ್​,ಡೀಸೆಲ್​ ಅಷ್ಟೇ ಏಕೆ ವಿದ್ಯುತ್​ ದರದಲ್ಲಿಯೂ ಭಾರೀ ಏರಿಕೆಯನ್ನು ಗಮನಿಸಿದ್ದೇವೆ. ಕೆಲವು ದಿನಗಳ ಹಿಂದಷ್ಟೇ ಭಾರತೀಯ ರಿಸರ್ವ್ ಬ್ಯಾಂಕ್​ ರೆಪೋ ದರದಲ್ಲಿಯೂ ಏರಿಕೆ ಮಾಡಿತ್ತು. ಪರಿಣಾಮವಾಗಿ ಇದೀಗ ಗೃಹ ಸಾಲ,ವಾಹನ ಸಾಲ ಹಾಗೂ ವೈಯಕ್ತಿಕ ಸಾಲಗಳ ಮೇಲಿನ ಬಡ್ಡಿ ದರ ಕೂಡ ಹೆಚ್ಚಾಗಿದೆ. ಇದೀಗ ಶ್ರೀ ಸಾಮಾನ್ಯನಿಗೆ ಮತ್ತೊಂದು ಶಾಕ್​ ಎಂಬಂತೆ ಎಲ್​ಪಿಜಿ ಸಿಲಿಂಡರ್​ಗಳ ಬೆಲೆಯಲ್ಲಿಯೂ ಏರಿಕೆ ಕಂಡಿದೆ.


ಇಂದಿನಿಂದಲೇ ಜಾರಿಗೆ ಬರುವಂತೆ ಗೃಹ ಬಳಕೆಯ ಸಿಲಿಂಡರ್​ಗಳ ಬೆಲೆಯಲ್ಲಿ 50 ರೂಪಾಯಿ ಏರಿಕೆ ಮಾಡಲಾಗಿದೆ. ಈಗಾಗಲೇ ಹಣದುಬ್ಬರದಿಂದ ಕಂಗಾಲಾಗಿರುವ ಶ್ರೀ ಸಾಮಾನ್ಯನ ಜೇಬಿಗೆ ಇಂದು ಮತ್ತೊಂದು ಬರೆ ಎಳೆದಂತಾಗಿದೆ.


ಮಾರ್ಚ್​ 22ನೇ ತಾರೀಖಿನಂದು ಅಡುಗೆ ಅನಿಲದ ಬೆಲೆಯನ್ನು 50 ರೂಪಾಯಿಗೆ ಏರಿಕೆ ಮಾಡಲಾಗಿತ್ತು. ಇದಾಗಿ ಒಂದು ತಿಂಗಳ ಬಳಿಕ ಇದೀಗ ಮತ್ತೆ ಪ್ರತಿ ಎಲ್​ಪಿಜಿ ಸಿಲಿಂಡರ್​ಗಳ ದರವು 50 ರೂಪಾಯಿಗೆ ಏರಿಕೆ ಕಂಡಿದೆ. ಪ್ರತಿಯೊಂದು ವಸ್ತುಗಳ ದರ ಏರಿಕೆ ಕಾಣುತ್ತಿರುವುದು ಶ್ರೀ ಸಾಮಾನ್ಯನಿಗೆ ತಲೆ ತಿರುಗಿಸುವಂತಿದೆ. ಪ್ರಸ್ತುತ ಗೃಹ ಬಳಕೆಯ ಸಿಲಿಂಡರ್​ಗಳು 995.50 ರೂಪಾಯಿಗಳಿಗೆ ಸಿಗುತ್ತಿದ್ದವು. ಆದರೆ ಇಂದಿನಿಂದ ಅಡುಗೆ ಅನಿಲದ ಬೆಲೆಯಲ್ಲಿ ಮತ್ತೆ 50 ರೂಪಾಯಿ ಏರಿಕೆ ಕಂಡ ಪರಿಣಾಮ ಎಲ್​ಪಿಜಿ ಸಿಲಿಂಡರ್​ಗಳ ಬೆಲೆಯು 1000 ರೂಪಾಯಿ ಗಡಿ ದಾಟಿದೆ.

ಇದನ್ನು ಓದಿ : Mohan Juneja : ಸ್ಯಾಂಡಲ್‌ವುಡ್‌ ಖ್ಯಾತ ಹಾಸ್ಯನಟ ಮೋಹನ್‌ ಜುನೇಜ ಇನ್ನಿಲ್ಲ

ಇದನ್ನೂ ಓದಿ : MI vs GT IPL 2022 : ಮುಂಬೈ ಇಂಡಿಯನ್ಸ್‌ ಪರ ಕಣಕ್ಕೆ ಇಳಿಯಲಿದ್ದಾರೆ ಅರ್ಜುನ್ ತೆಂಡೂಲ್ಕರ್

lpg cylinder price increased by rs 50 with effect from today

Comments are closed.