hotel fire : ಐಷಾರಾಮಿ ಹೋಟೆಲ್​ನಲ್ಲಿ ಅಗ್ನಿ ಅವಘಡ : ನಾಲ್ವರು ಸಾವು, 20 ಮಂದಿ ರಕ್ಷಣೆ

ಉತ್ತರ ಪ್ರದೇಶ : hotel fire : ಲಖನೌದ ಹಜರತ್​​ಗಂಜ್​​ನಲ್ಲಿರುವ ಐಷಾರಾಮಿ ಮದನ್​ ಮೋಹನ್​ ಮಾಳವೀಯಾ ಮಾರ್ಗ್​ನಲ್ಲಿರುವ ಲೆವಾನಾ ಸೂಟ್ಸ್​ ಹೋಟೆಲ್​ನಲ್ಲಿ ಇಂದು ಮುಂಜಾನೆ ಬೆಂಕಿ ಕಾಣಿಸಿಕೊಂಡಿದೆ. ಈ ದುರ್ಘಟನೆಯಲ್ಲಿ ಕನಿಷ್ಟ ನಾಲ್ವರು ಸಾವನ್ನಪ್ಪಿದ್ದು ಈವರೆಗೆ ಇಪ್ಪತ್ತು ಮಂದಿಯನ್ನು ರಕ್ಷಿಸಲಾಗಿದೆ. ಮೂರಂತಸ್ತಿನ ಕಟ್ಟಡದಲ್ಲಿ ಇನ್ನೂ ಐದಾರು ಮಂದಿ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ. ರಕ್ಷಣಾ ಕಾರ್ಯಾಚರಣೆ ಮೂಲಕ ಬಚಾವಾದ ಇಪ್ಪತ್ತು ಮಂದಿಯಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಮೂರು ಅಗ್ನಿ ಶಾಮಕ ಟೆಂಡರ್​ಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ .


ವರದಿಗಳ ಪ್ರಕಾರ, ಒಂದು ಕುಟುಂಬವು ಹೋಟೆಲ್​​ನ ಎರಡನೇ ಮಹಡಿಯಲ್ಲಿರುವ ಹೋಟೆಲ್​ ಕೋಣೆಯಲ್ಲಿ ಇನ್ನೂ ಸಿಲುಕಿಕೊಂಡಿದೆ ಎಂದು ಶಂಕಿಸಲಾಗಿದೆ. ಎರಡನೇ ಮಹಡಿಯಲ್ಲಿ ಉಂಟಾದ ವಿದ್ಯುತ್​ ಶಾರ್ಟ್​ ಸರ್ಕ್ಯೂಟ್​ನಿಂದಾಗಿ ಈ ಅವಘಡ ಸಂಭವಿಸಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ಶಂಕಿಸಿದ್ದಾರೆ.


ಘಟನಾ ಸ್ಥಳಕ್ಕೆ ಆಗಮಿಸಿದ ಉಪ ಮುಖ್ಯಮಂತ್ರಿ ಬ್ರಿಜೇಶ್​ ಪಾಠಕ್​, ಹೋಟೆಲ್​ನಲ್ಲಿ ಉಂಟಾಗಿರುವ ಅಗ್ನಿ ಅವಘಡದ ಬಗ್ಗೆ ಹೆಚ್ಚಿನ ತನಿಖೆಯನ್ನು ನಡೆಸಲು ಆದೇಶ ನೀಡಿದ್ದೇವೆ. ಪ್ರಾಥಮಿಕ ವರದಿ ಶೀಘ್ರದಲ್ಲಿಯೇ ಹೊರ ಬೀಳಲಿದೆ ಎಂದು ಹೇಳಿದರು.ಅಗ್ನಿ ಅವಘಡದ ಬಗ್ಗೆ ಸಮಗ್ರ ವರದಿಯನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಪಾಠಕ್ಕೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದರು. ಘಟನಾ ಸ್ಥಳದಿಂದ ನೇರವಾಗಿ ನಗರ ಆಸ್ಪತ್ರೆಗೆ ತೆರಳಿದ ಬ್ರಿಜೇಶ್​ ಪಾಠಕ್​ ರೋಗಿಗಳನ್ನು ಭೇಟಿಯಾಗಿದ್ದಾರೆ.


ಹೋಟೆಲ್​ನ ಕೋಣೆಗಳು ಸಂಪೂರ್ಣ ಹೊಗೆಯಿಂದ ಆವೃತವಾಗಿವೆ. ಹೀಗಾಗಿ ನಮಗೆ ಒಳಗೆ ನುಗ್ಗಲು ಕಷ್ಟವಾಗುತ್ತಿದೆ. ಕಿಟಕಿಯ ಗಾಜುಗಳನ್ನು ಹಾಗೂ ಗ್ರಿಲ್​ಗಳನ್ನು ಒಡೆಯುವ ಕೆಲಸವನ್ನು ಮಾಡುತ್ತಿದ್ದೇವೆ. ಈಗಾಗಲೇ ಇಪತ್ತು ಮಂದಿಯನ್ನು ರಕ್ಷಿಸಿದ್ದೇವೆ ಎಂದು ಅಗ್ನಿಶಾಮಕ ದಳದ ಡಿಜಿ ಮಾಹಿತಿ ನೀಡಿದರು .


ತೀವ್ರ ಗಾಯಗಳೊಂದಿಗೆ ರಕ್ಷಿಸಲ್ಪಟ್ಟ ಸಂತ್ರಸ್ತರನ್ನು ಶ್ಯಾಮ್​ ಪ್ರಸಾದ್​ ಮುಖರ್ಜಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಾವು ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿದ್ದೇವೆ. ಗಾಯಾಳುಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ನಾವು ಎಲ್ಲದ್ದಕ್ಕೂ ಸಿದ್ಧರಾಗಿದ್ದೇವೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ. ಆನಂದ್​ ಓಜಾ ಹೇಳಿದ್ದಾರೆ .

ಇದನ್ನು ಓದಿ : Neginahala Swamiji commits suicide : ಮುರುಘಾ ಶರಣರ ಮೇಲಿನ ಪೋಕ್ಸೋ ಪ್ರಕರಣಕ್ಕೆ ಹೊಸ ತಿರುವು : ನೇಗಿನಹಾಳ ಸ್ವಾಮೀಜಿ ಆತ್ಮಹತ್ಯೆ

ಇದನ್ನೂ ಓದಿ : Ryan Burl : ಒಂದು ಜೊತೆ ‘ಶೂ’ಗಾಗಿ ಬೇಡಿಕೆ ಇಟ್ಟವ ಆಸೀಸ್ ವಿರುದ್ಧ 5 ವಿಕೆಟ್ ಪಡೆದ

Lucknow hotel fire: Several still trapped, deputy CM at spot; probe ordered

Comments are closed.